ಸ್ಪುಟ್ನಿಕ್‌ ಶೇ.95ರಷ್ಟು ಪರಿಣಾಮಕಾರಿ!

Published : Nov 25, 2020, 09:17 AM ISTUpdated : Nov 25, 2020, 01:54 PM IST
ಸ್ಪುಟ್ನಿಕ್‌ ಶೇ.95ರಷ್ಟು ಪರಿಣಾಮಕಾರಿ!

ಸಾರಾಂಶ

ಸ್ಪುಟ್ನಿಕ್‌ ಶೇ.95ರಷ್ಟು ಪರಿಣಾಮಕಾರಿ| ಫೈಝರ್‌, ಮಾಡೆರ್ನಾ, ಕೋವಿಶೀಲ್ಡ್‌, ಕೋವ್ಯಾಕ್ಸಿನ್‌ ಬೆನ್ನಲ್ಲೇ ಮತ್ತೊಂದು ಲಸಿಕೆ| 2ರಿಂದ 8 ಡಿಗ್ರಿ ಸಾಮಾನ್ಯ ವಾತಾವರಣದಲ್ಲಿ ಸಂರಕ್ಷಿಸಿಡಬಹುದಾದ ಸ್ಪುಟ್ನಿಕ್‌| ರಷ್ಯಾದ ಸ್ಪುಟ್ನಿಕ್‌ ಲಸಿಕೆಯ ಒಂದು ಡೋಸ್‌ ದರ 750 ರು.ಗಿಂತ ಕಡಿಮೆ!

ನವದೆಹಲಿ(ನ.25): ಅಮೆರಿಕದ ಫೈಝರ್‌, ಮಾಡೆರ್ನಾ ಸೇರಿದಂತೆ ಜಗತ್ತಿನ ಇನ್ನಿತರ ರಾಷ್ಟ್ರಗಳು ತಾವು ಶೋಧಿಸಿದ ಕೊರೋನಾ ಲಸಿಕೆಯು ಇಂತಿಷ್ಟುಪ್ರಮಾಣದಲ್ಲಿ ಪರಿಣಾಮಕಾರಿಯಾಗಿದೆ ಎಂದು ಘೋಷಿಸಿಕೊಂಡ ಬೆನ್ನಲ್ಲೇ, ಕೊರೋನಾ ಗುಣಪಡಿಸುವ ನಿಟ್ಟಿನಲ್ಲಿ ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್‌-5 ಲಸಿಕೆಯು ಶೇ.95ರಷ್ಟುಪರಿಣಾಮಕಾರಿಯಾಗಿದೆ ಎಂದು ರಷ್ಯಾದ ಡೈರೆಕ್ಟ್ ಇನ್ವೆಸ್ಟ್‌ಮೆಂಟ್‌ ಫಂಡ್‌(ಆರ್‌ಡಿಐಎಫ್‌) ಸಿಇಒ ಕಿರಿಲ್‌ ಡಿಮಿಟ್ರೀವ್‌ ಹೇಳಿದ್ದಾರೆ.

ರಾಜ್ಯದ ಯಾವ್ಯಾವ ಜಿಲ್ಲೆಗಳಲ್ಲಿ ಲಸಿಕೆ ಸಂಗ್ರಹ ಸಿದ್ಧತೆ ಹೇಗಿದೆ?

ಈ ಬಗ್ಗೆ ಮಂಗಳವಾರ ವಚ್ರ್ಯುವಲ್‌ ಕಾನ್ಫರೆನ್ಸ್‌ ಉದ್ದೇಶಿಸಿ ಮಾತನಾಡಿದ ಡಿಮಿಟ್ರೀವ್‌, ‘ಕೊರೋನಾ ನಿಗ್ರಹಕ್ಕೆ ಸ್ಪುಟ್ನಿಕ್‌-5 ಲಸಿಕೆ ಪರಿಣಾಮಕಾರಿಯಷ್ಟೇ ಅಲ್ಲದೆ, ಪ್ರತಿಯೊಬ್ಬರಿಗೂ ಖರೀದಿಸಲು ಸಾಧ್ಯವಾಗಬಹುದಾದ ವಿಶ್ವದ ಲಸಿಕೆಗಳಲ್ಲಿ ಒಂದಾಗಿದೆ. ಈ ಲಸಿಕೆಯ ಒಂದು ಡೋಸ್‌ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 10 ಡಾಲರ್‌(ಸುಮಾರು 750 ರು.)ಗಿಂತ ಕಡಿಮೆ ಇರಲಿದ್ದು, ಪ್ರತಿಯೊಬ್ಬರ ಕೈಗೂ ಎಟುಕಲಿದೆ. ಈ ಲಸಿಕೆಯನ್ನು 2ರಿಂದ 8 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿರುವ ಸಾಮಾನ್ಯ ವಾತಾವರಣದಲ್ಲಿ ಸುರಕ್ಷಿತವಾಗಿ ಶೇಖರಿಸಬಹುದಾಗಿದ್ದು, ಲಸಿಕೆಯ ಸಾಗಣೆಗೂ ಸಲೀಸು ಆಗಲಿದೆ. ರಷ್ಯಾ ಸೇರಿ ನಾನಾ ರಾಷ್ಟ್ರಗಳಲ್ಲಿ 42 ಸಾವಿರ ಸ್ವಯಂಸೇವಕರ ಮೇಲೆ ಸ್ಪುಟ್ನಿಕ್‌ ಲಸಿಕೆ ಪ್ರಯೋಗ ನಡೆಸಲಾಗುತ್ತಿದೆ.’ ಎಂದರು.

ಲಸಿಕೆ ವಿತರಣೆಗೆ 3 ಸಮಿತಿ: ಮೋದಿ ಸೂಚನೆ

ಸ್ಪುಟ್ನಿಕ್‌-5 ಲಸಿಕೆಯನ್ನು ರಷ್ಯಾದ ಸೂಕ್ಷ್ಮಜೀವಿ ಮತ್ತು ವೈರಾಣುವಿನ ಗಮಾಲೆಯಾ ರಾಷ್ಟ್ರೀಯ ಸಂಶೋಧನಾ ಕೇಂದ್ರ ಮತ್ತು ಆರ್‌ಡಿಐಎಫ್‌ ಅಭಿವೃದ್ಧಿಪಡಿಸಿದ್ದು, ಭಾರತದಲ್ಲಿ ಡಾ. ರೆಡ್ಡೀಸ್‌ ಪ್ರಯೋಗಾಲಯ ಸೇರಿದಂತೆ ಇನ್ನಿತರ ರಾಷ್ಟ್ರಗಳಲ್ಲಿ ಈ ಲಸಿಕೆಯ ಪ್ರಯೋಗ ನಡೆಯುತ್ತಿದೆ. ಅಮೆರಿಕದ ಫೈಝರ್‌ ಶೇ.95, ಮಾಡೆರ್ನಾ ಶೇ.90ಕ್ಕಿಂತ ಹೆಚ್ಚು, ಬ್ರಿಟನ್‌ನ ಅಸ್ಟ್ರಾಜೆನಿಕಾ ಶೇ.70 ಹಾಗೂ ಭಾರತದ ಕೋವ್ಯಾಕ್ಸಿನ್‌ 50-60ರಷ್ಟುಪರಿಣಾಮಕಾರಿಯಾಗಿವೆ ಎಂದು ಆಯಾ ಲಸಿಕೆ ಉತ್ಪಾದಕ ಕಂಪನಿಗಳು ಹೇಳಿಕೊಂಡಿವೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?