
ಮಾಸ್ಕೋ(ಆ.27) ರಷ್ಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದ ವ್ಯಾಗ್ನರ್ ಪಡೆ ಇದೀಗ ಅತಂತ್ರವಾಗಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ದ ಬಂಡಾಯ ಎದ್ದು ಸಮರ ಸಾರಿದ್ದ ಖಾಸಗಿ ಸೇನೆ ವ್ಯಾಗ್ನರ್ ಪಡೆಯ ಮುಖ್ಯಸ್ಥ ಯೆವೆಗೆನಿ ಪ್ರಿಗೋಜಿನ್ ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ. ಈ ಸುದ್ದಿ ಕೆಳದ ಕೆಳೆದರಡು ದಿನದಿಂದ ಭಾರಿ ಸಂಚಲನ ಸೃಷ್ಟಿಸಿತ್ತು. ಇದೀಗ ರಷ್ಯಾ ವಿಮಾನ ದುರಂತದಲ್ಲಿ ಮೃತಪಟ್ಟವರ ಜೆನೆಟಿಕ್ ಪರೀಕ್ಷೆ ಮಾಡಿದೆ. ಬಳಿಕ ವ್ಯಾಗ್ನರ್ ಪಡೆ ಮುಖ್ಯಸ್ಥ ಪ್ರಿಗೋಜಿನ್ ಮೃತಪಟ್ಟಿರುವುದನ್ನು ಖಚಿತಪಡಿಸಿದೆ.
ಯೆವೆಗೆನಿ ಪ್ರಿಗೋಜಿನ್ ಪ್ರಯಾಣಿಸುತ್ತಿದ್ದ ವಿಮಾನ ಅನುಮಾನಾಸ್ಪದ ರೀತಿಯಲ್ಲಿ ರಷ್ಯಾದಲ್ಲಿ ಪತನಗೊಂಡಿತ್ತು. ಪ್ರಿಗೋಜಿನ್ ಜತೆಗೆ ವಿಮಾನದಲ್ಲಿದ್ದ ಎಲ್ಲ 10 ಪ್ರಯಾಣಿಕರೂ ಸಾವಿಗೀಡಾಗಿದ್ದರು. ಈ ಘಟನೆ ಕುರಿತು ರಷ್ಯಾ ತನಿಖೆ ನಡೆಸುತ್ತಿದೆ. ವಿಮಾನ ಪತನಕ್ಕೆ ಟ್ರಾಫಿಕ್ ಉಲ್ಲಂಘನೆ ಕಾರಣವಾಗಿರಬಹುದು ಅನ್ನೋ ಮಾಹಿತಿಯನ್ನು ತಿಳಿಸಿದೆ. ಆದರೆ ಈ ಪತನದ ಹಿಂದೆ ರಷ್ಯಾ ಅಧ್ಯಕ್ಷ ಪುಟಿನ್ ಕೈವಾಡವಿದೆ ಅನ್ನೋ ಮಾತುಗಳು ಬಲವಾಗುತ್ತಿದೆ.
ಸೆಕ್ಸ್ ತುಂಬಾ ತಂಪು ಆದ್ರೆ ಪುಟಿನ್ ಸಾವು ಅದಕ್ಕಿಂತ ಉತ್ತಮ; ಕೈಚೀಲದಿಂದ ರಷ್ಯಾ ಮಹಿಳೆಗೆ ಸಂಕಷ್ಟ!
ಮಾಸ್ಕೋದಿಂದ ಸೇಂಟ್ ಪೀಟರ್ಸ್ಬರ್ಗ್ಗೆ ಪ್ರಿಗೋಜಿನ್ ಇದ್ದ ಎಂಬ್ರೇಯರ್ ವಿಮಾನ ಪ್ರಯಾಣ ಬೆಳೆಸಿತ್ತು. 28 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನ ಏಕಾಏಕಿ ಕುಸಿತ ಕಂಡಿದೆ. ಕೇವಲ 30 ಸೆಕೆಂಡ್‌ಗಳಲ್ಲಿ 8000 ಅಡಿ ಕುಸಿದು ನೋಡನೋಡುತ್ತಿದ್ದಂತೆ ಪತನವಾಗಿ ಬೆಂಕಿ ಹೊತ್ತಿಕೊಂಡಿತು.ಈ ವಿಮಾನದಲ್ಲಿದ್ದ ಪ್ರಿಗೋಜಿನ್ ಸೇರಿ ಎಲ್ಲಾ 10 ಮಂದಿ ಮೃತಪಟ್ಟಿದ್ದರು.
ರಷ್ಯಾ ಅಧ್ಯಕ್ಷರ ವಿರುದ್ಧವೇ ಬಂಡಾಯವೆದ್ದು ಪ್ರತೀಕಾರ ತೀರಿಸಲು ಮುಂದಾಗಿದ್ದ ಪ್ರಿಗೋಜಿನ್ ಇದೀಗ ದುರಂತ ಅಂತ್ಯಕಂಡಿದ್ದಾರೆ. ವಾಗ್ನರ್ ಪಡೆ ಬಂಡೆದ್ದಾಗ ಕಿಡಿಕಾರಿದ್ದ ಪುಟಿನ್, ಇದು ದೇಶದ್ರೋಹ ಹಾಗೂ ಬೆನ್ನಿಗೆ ಚೂರಿ ಇರಿವ ಕೆಲಸ. ಇದಕ್ಕೆ ತಕ್ಕ ಪ್ರತೀಕಾರ ತೆಗೆದುಕೊಳ್ಳಲಾಗುವುದು ಎಂದು ಗುಡುಗಿದ್ದರು. ಈ ಹೇಳಿಕೆ ನೀಡಿದ ಎರಡು ತಿಂಗಳಲ್ಲೇ ಪ್ರಿಗೋಜಿನ್ ಮೃತಪಟ್ಟಿರುವುದು ಅನುಮಾನ ಹೆಚ್ಚಿಸಿದೆ.
ಉಕ್ರೇನ್ ಯುದ್ಧ ನಿಲ್ಲಿಸಲು ರಷ್ಯಾ ತಯಾರಿದೆ, ಮೊದಲ ಬಾರಿಗೆ ಪುಟಿನ್ ಶಾಂತಿ ಮಾತು!
ವ್ಯಾಗ್ನರ್ ಪಡೆಯ ಮುಖ್ಯಸ್ಥನೇ ದುರಂತ ಅಂತ್ಯಕಂಡಿರುವ ಬೆನ್ನಲ್ಲೇ ವ್ಯಾಗ್ನರ್ ಪಡೆ ಅತಂತ್ರವಾಗಿದೆ. ಮುಂದಿನ ನಾಯಕ ಯಾರು ಅನ್ನೋ ಕುರಿತು ಗೊಂದಲ ಹೆಚ್ಚಾಗಿದೆ. ವ್ಯಾಗ್ನರ್ ಅನ್ನೋ ಖಾಸಗಿ ಪಡೆ ಪುಟಿನ್ ಸಾಕಿ ಸಲಹಿದ ಪಡೆಯಾಗಿದೆ. ಆದರೆ ಪ್ರಿಗೋಜಿನ್ ಈ ಪಡೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದರು. ಬಳಿಕ ಪುಟಿನ್ ವಿರುದ್ಧವೇ ತಿರುಗಿಸಿದ್ದರು. ಇದೀಗ ಪ್ರಿಗೋಜಿನ್ ಹತ್ಯೆಗೂ ಮೊದಲೇ ಪುಟಿನ್ ವ್ಯಾಗ್ನರ್ ಪಡೆಯನ್ನು ತನ್ನ ಹಿಡಿತಕ್ಕೆ ತರಲು ಯತ್ನಿಸಿದ್ದರು. ರಷ್ಯಾ ಸರ್ಕಾರಕ್ಕೆ ವಿಧೇಯರಾಗಿರಬೇಕು. ಸರ್ಕಾರ ಸೂಚಿಸಿದಂತೆ ಕೆಲಸ ನಿರ್ವಹಿಸಬೇಕು ಎಂದು ಸಹಿ ಹಾಕಿ ಒಪ್ಪಂದ ಪತ್ರ ನೀಡುವಂತೆ ಸೂಚನೆ ನೀಡಲಾಗಿದೆ.
ವ್ಯಾಗ್ನರ್ ಪಡೆ ರಷ್ಯಾ ಮಾತ್ರವಲ್ಲ, ಅಫ್ರಿಕ ಹಾಗೂ ಅರಬ್ ದೇಶದಲ್ಲೂ ಕೆಲಸ ಮಾಡುತ್ತಿತ್ತು. ಅಲ್ಲಿನ ಐಸಿಸ್ ಹಾಗೂ ಅಲ್ ಖೈದಾ ಉಗ್ರರ ವಿರುದ್ಧ ಆಫ್ರಿಕಾ ದೇಶದ ಪಡೆಗಳು ಸೆಣಸಲು ಅದು ಸಹಾಯ ಮಾಡುತ್ತಿತ್ತು. ಹೀಗಾಗಿ ಪ್ರಿಗೋಜಿನ್ ಅಕಾಲಿಕ ದುರ್ಮರಣವು ಆಫ್ರಿಕ ದೇಶಗಳನ್ನು ಚಿಂತೆಗೀಡು ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ