ಆಪತ್ತಿಗೆ ಆದ ರಷ್ಯಾ ಸ್ನೇಹಿತ, ಮೋದಿ ಮಾತಿಗೆ ದೊಡ್ಡ ಮೊತ್ತವ ದೇಣಿಗೆ ನೀಡಿದ

By Suvarna NewsFirst Published Apr 15, 2020, 11:02 PM IST
Highlights
ಪ್ರಧಾನಿ ಮೋದಿ ಮಾತಿಗೆ ರಷ್ಯಾದ ಪ್ರತಿಕ್ರಿಯೆ/ 2 ಮಿಲಿಯನ್ ಡಾಲರ್ ದೇಣಿಗೆ/ ಕೊರೋನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ ರಷ್ಯಾ
ನವದೆಹಲಿ(ಏ. 15)  ಭಾರತದೊಂದಿಗೆ ರಷ್ಯಾ ಹಿಂದಿನ ಕಾಲದಿಂದಲೂ ಸ್ನೇಹ ಸಂಬಂಧ ಬೆಳೆಸಿ ಉಳಿಸಿಕೊಂಡೇ ಬಂದಿದೆ.  ಪ್ರಧಾನಿ ನರೇಂದ್ರ ಮೋದಿ ಅವರ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ರಷ್ಯಾ ರಕ್ಷಣಾ ಇಲಾಖೆ 2  ಮಿಲಿಯನ್ ಡಾಲರ್ ದೇಣಿಗೆ ನೀಡಿದೆ.

ಪ್ರಧಾನಿ ಮೋದಿ ಹೇಳಿದ್ದ ಪಿಎಂ ಕೇರ್ಸ್ ವಿಭಾಗಕ್ಕೆ ದೇಣಿಗೆ ಸಂದಾಯವಾಗಿದೆ.  ರಷ್ಯಾದ ರಕ್ಷಣಾ ವಿಭಾಗದ  Rosoboronexport ಈ ದೇಣಿಗೆಯನ್ನು ನೀಡಿದೆ. Rosoboronexport ಮಿಲಿಟರಿ ಉತ್ಪನ್ನಗಳನ್ನು ರಫ್ತು ಮಾಡುವುದಕ್ಕೆ ಹೆಸರುವಾಸಿ. ಈಗ ಕಂಪನಿ ಭಾರತದ ನೆರವಿಗೆ ಈ ರೀತಿಯಲ್ಲಿ ಬಂದಿದೆ. 

ಕೊರೋನಾ ಹೋರಾಟದ ಸಂದರ್ಭದಲ್ಲಿ ಮೆಡಿಕಲ್ ಉತ್ಪನ್ನಗಳ ಗತಯಾರಿಕೆ ಮತ್ತು ಔಷಧ ಉಪಚಾರಕ್ಕೆ ಈ ಹಣ ಬಳಕೆ ಮಾಡಿಕೊಳ್ಳಲಾಗುತ್ತದೆ.

ಎಸ್-400 ಕ್ಷಿಪಣಿಗಳನ್ನು ಇದೇ ವಿಭಾಗದಿಂದ 2018ರಲ್ಲಿ ಭಾರತ ಖರೀದಿ ಮಾಡಿತ್ತು.  15000 ಭಾರತೀಯ ವಿದ್ಯಾರ್ಥಿಗಳು ರಷ್ಯಾದಲ್ಲಿ ಇದ್ದರೆ, 1500 ರಷ್ಯಾ ಪ್ರವಾಸಿಗರು ಭಾರತದಲ್ಲಿ ಇದ್ದಾರೆ ಎಂಬ ಮಾಹಿತಿಯೂ ಇದೆ.  ಒಟ್ಟಿನಲ್ಲಿ ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತದ ನೆರವಿಗೆ ರಷ್ಯಾ ಧಾವಿಸಿದೆ. 

 
click me!