80 ಸಾವಿರ ಭಾರತೀಯ ನೌಕರರಿಗೆ ಸ್ಯಾಲರಿ ಹೈಕ್ ಮಾಡಿದ ಫ್ರೆಂಚ್ ಕಂಪನಿ!

By Suvarna News  |  First Published Apr 15, 2020, 8:45 PM IST
ಕೊರೋನಾ ವೈರಸ್ ಹಾಗೂ ಲಾಕ್‌ಡೌನ್‌ನಿಂದ ಜನರು ಪರದಾಡುತ್ತಿದ್ದಾರೆ. ಇತ್ತ ವ್ಯವಹಾರಗಳು ಬಂದ್ ಆಗಿವೆ. ಕಂಪನಿಗಳು ತಾತ್ಕಾಲಿಕ ಸ್ಥಗಿತಗೊಂಡಿದೆ. ಹಲವು ಕಂಪನಿಗಳು ಮನೆಯಿಂದ ಕೆಲಸ ಮಾಡುವ ಆಯ್ಕೆ ನೀಡಿದೆ. ಆದರೂ ಉದ್ಯೋಗ ಕಡಿತ, ವೇತನ ಕಡಿತ ಸೇರಿದಂತೆ ಹಲವು ಸಂಕಷ್ಟಗಳನ್ನು ನೌಕರರು ಎದುರಿಸುತ್ತಿದ್ದಾರೆ. ಇದರ ನಡುವೆ ಫ್ರೆಂಚ್ ಕಂಪನಿಯೊಂದು ಭಾರತೀಯ ನೌಕರರಿಗೆ ಬರೋಬ್ಬರಿ ಶೇರದಾ 70 ರಷ್ಟು ವೇತನ ಹೆಚ್ಚಿಸಿದೆ.

ನವದೆಹಲಿ(ಏ.15): ಕೊರೋನಾ ಲಾಕ್‌ಡೌನ್ ವಿಸ್ತರಣೆಯಾಗುತ್ತಿದ್ದಂತೆ ವೇತನ ಪಡೆಯುತ್ತಿದ್ದ ಉದ್ಯೋಗಿಗಳ ದುಗುಡ ಹೆಚ್ಚಾಗಿದೆ. ಕಾರಣ ಎಲ್ಲಿ ಕೆಲಸ ಕಳೆದುಕೊಳ್ಳುತ್ತೇವೆ ಎಂಬ ಭಯ. ಮತ್ತೊಂದೆಡೆ ವೇತನ ಕಡಿತ. ಇದರ ನಡುವೆ ಜೀವನವೇ ಅಯೋಮಯವಾಗಿದೆ. ಆದರೆ ಫ್ರೆಂಚ್ ಬಹುರಾಷ್ಟ ಕಂಪನಿಯಾದ ಕೇಪ್‌ಜೆಮಿನಿ ಭಾರತದ ನೌಕರರಿಗೆ ಸ್ಯಾಲರಿ ಹೈಕ್ ಮಾಡಿದೆ. ಶೇಕಡಾ 70 ರಷ್ಟು ವೇತನ ಹೆಚ್ಚಿಸಿ, ಆಲೋವೆನ್ಸ್ ರೂಪದಲ್ಲಿ ಉದ್ಯೋಗಿಗಳಿಗೆ ನೀಡಿದೆ.

WHOಗೆ ಆರ್ಥಿಕ ನೆರವು ಕಟ್ ಮಾಡಿದ ಅಮೆರಿಕ, ಟ್ರಂಪ್ ನಿರ್ಧಾರಕ್ಕೆ ವಿಶ್ವವೇ ಹಿಡಿಶಾಪ!

ಫ್ರೆಂಚ್ ಕಂಪನಿಯಾದ ಕೇಪ್‌ಜೆಮೆನಿ ಭಾರತದಲ್ಲಿ 1.2 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. ಇದರಲ್ಲಿ 84,000 ಉದ್ಯೋಗಿಗಳಿಗೆ ವೇತನ ಹೆಚ್ಚಿಸಿದೆ. ಕೇಪ್‌ಜೆಮಿನಿ ಕಂಪನಿ ಸದ್ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡಲು ಹೇಳಿದೆ. ಇದರ ನಡುವೆ ನೌಕರರಿಗೆ ಸಮಸ್ಯೆಯಾಗಬಾರದು ಎಂದು ಶೇಕಡಾ 70 ರಷ್ಟು ವೇತನ ಹೆಚ್ಚಿಸಿದೆ. ಈ ತಿಂಗಳಿನಿಂದಲೇ ಉದ್ಯೋಗಿಗಳಿಗೆ ಸ್ಯಾಲರಿ ಹೈಕ್ ಅನ್ವಯವಾಗಲಿದೆ.

ಪಿ.ಜಿ ಸೇರಿದಂತೆ ಸೂಕ್ತ ವ್ಯವಸ್ಥೆಗಳಿಲ್ಲದ ಕಡೆ ತಂಗುತ್ತಿರುವ ಉದ್ಯೋಗಿಗಳಿಗೆ ವೇತನ ಹೆಚ್ಚಳದ ಜೊತೆಗೆ 10,000 ರೂಪಾಯಿ ನಗದು ಹಣವನ್ನು ನೀಡಿದೆ. ಉದ್ಯೋಗಿಗಳೇ ನಮ್ಮ ಸಂಸ್ಥೆಯ ಆಧಾರ. ಈ ಸಂಕಷ್ಟದ ಸಮಯದಲ್ಲಿ ಕಂಪನಿ ನೌಕರರ ಜೊತೆಗಿರಲಿದೆ. ಹೀಗಾಗಿ ವೇತನ ಹೆಚ್ಚಳ ಮಾಡಿದ್ದೇವೆ. ಜೊತೆಗೆ ಕೆಲವರಿಗೆ ಹೆಚ್ಚುವರಿ ಹಣವನ್ನು ನೀಡುತ್ತಿದ್ದೇವೆ ಎಂದು ಕೇಪ್‌ಜೆಮಿನಿ ಕಂಪನಿಯ ಭಾರತದ ಸಿಇಓ ಅಶ್ವಿನ್ ಯಾದ್ರಿ ಹೇಳಿದ್ದಾರೆ.
 
click me!