ಗೆಳತಿಯ ನೋಡಲು ಹೊಟೇಲ್ ನಿಂದ ಹೊರಟ/ ಪೊಲೀಸರ ಕೈಗೆ ಸಿಕ್ಕಿಬಿದ್ದವನಿಗೆ ಜೈಲು ಶಿಕ್ಷೆ/ 14 ದಿನಗಳ ಕ್ವಾರಂಟೈನ್ ಮುರಿದ ಪ್ರೇಮಿ
ಪರ್ತ್(ಏ. 15) ಲಾಕ್ ಡೌನ್ ಎನ್ನುವುದು ಇಡೀ ಪ್ರಪಂಚಕ್ಕೇ ಇದೆ. ಪ್ರೇಮಿಗಳಿಗೂ ಲಾಕ್ ಡೌನ್ ಸರಿಯಾದ ಪರಿಣಾಮವನ್ನೇ ನೀಡಿದೆ. ಈ ಪುಣ್ಯಾತ್ಮನಿಗೆ ತನ್ನ ಗೆಳತಿಯನ್ನು ಬಿಟ್ಟಿರಲು ಸಾಧ್ಯವಾಗಲೇ ಇಲ್ಲ. ಲಾಕ್ ಡೌನ್ ಆದೇಶ ಮುರಿದು ಹೊಟೇಲ್ ನಿಂದ ಹೊರಹಾರಿದ್ದ. ಹೊರಬಂದವನನ್ನು ಪೊಲೀಸರು ಬಂಧಿಸಿದ್ದಾರೆ.
35 ವರ್ಷದ ಜೋನಾಥನ್ ಡೇವಿಡ್ ತನ್ನ ಪ್ರಿಯತಮೆಯನ್ನು ನೋಡಲು ಹೊರಟಿದ್ದ. ಪರ್ತ್ ನ್ಯಾಯಾಲಯ ಈತನಿಗೆ ಶಿಕ್ಷೆಯನ್ನು ವಿಧಿಸಿದೆ.
ಟ್ರಾವೆಲ್ ಲಾಡ್ಜ್ ಹೊಟೇಲ್ ನಲ್ಲಿ ಡೇವಿಡ್ ಗೆ 14 ದಿನಗಳ ಕ್ವಾರಂಟೈನ್ ವಿಧಿಸಲಾಗಿತ್ತು. ಆದರೆ ಅಲ್ಲಿಂದ ಎಸ್ಕೇಪ್ ಆಗಿ ರೈಲು ಹತ್ತುವ ಯತ್ನ ಮಾಡಿದ್ದ ಎನ್ನಲಾಗಿದೆ. ತನ್ನ ಪ್ರೇಯಸಿಯ ಭೇಟಿ ಮಾಡಲು, ಆಹಾರ ತರಲು ಹಲವಾರು ಸಾರಿ ಹೊಟೇಲ್ ನಿಂದ ಹಾರಿದ್ದ. ಈತನಿಗೆ 1300 ಡಾಲರ್ ದಂಡ ಮತ್ತು ಒಂದು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ