ಮೋದಿ ಅವಧಿಯಲ್ಲಿ ವಾಕ್‌ ಸ್ವಾತಂತ್ರ್ಯಕ್ಕೆ ಕಡಿವಾಣ : ಸಲ್ಮಾನ್‌ ರಶ್ದಿ ಆರೋಪ

Kannadaprabha News   | Kannada Prabha
Published : Dec 09, 2025, 05:17 AM IST
salman rushdie

ಸಾರಾಂಶ

‘ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತದಲ್ಲಿ ಪತ್ರಕರ್ತರು ಮತ್ತು ಬುದ್ಧಿಜೀವಿಗಳ ಮೇಲಿನ ದಾಳಿ ಹೆಚ್ಚುತ್ತಿದೆ’ ಎಂದು ಭಾರತ ಮೂಲದ ಬ್ರಿಟಿಷ್‌ ಲೇಖಕ ಸಲ್ಮಾನ್ ರಶ್ದಿ ಕಳವಳ ವ್ಯಕ್ತಪಡಿಸಿದ್ದಾರೆ.

ಲಂಡನ್‌: ‘ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತದಲ್ಲಿ ಪತ್ರಕರ್ತರು ಮತ್ತು ಬುದ್ಧಿಜೀವಿಗಳ ಮೇಲಿನ ದಾಳಿ ಹೆಚ್ಚುತ್ತಿದೆ’ ಎಂದು ಭಾರತ ಮೂಲದ ಬ್ರಿಟಿಷ್‌ ಲೇಖಕ ಸಲ್ಮಾನ್ ರಶ್ದಿ ಕಳವಳ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಶ್ದಿ, ‘ನನಗೆ ಭಾರತದಲ್ಲಿ ಬಹಳಷ್ಟು ಜನ ಸ್ನೇಹಿತರಿದ್ದಾರೆ. ಈಗ ಅಲ್ಲಿ ಪತ್ರಕರ್ತರು, ಬರಹಗಾರರು, ಬುದ್ಧಿಜೀವಿಗಳು, ಪ್ರಾಧ್ಯಾಪಕರು ಮುಂತಾದವರ ಸ್ವಾತಂತ್ರ್ಯಗಳ ಮೇಲೆ ದಾಳಿಯ ಬಗ್ಗೆ ಎಲ್ಲರೂ ಕಳವಳ ವ್ಯಕ್ತಪಡಿಸುತ್ತಿದ್ದಾರೆ’ ಎಂದಿದ್ದಾರೆ. ಆದರೆ ಇದಕ್ಕೆ ತಿರುಗೇಟು ನೀಡಿರುವ ನೆಟ್ಟಿಗರು, ‘1988ರಲ್ಲಿ ಆಗಿನ ಕಾಂಗ್ರೆಸ್‌ ಸರ್ಕಾರ ನಿಮ್ಮ ‘ದಿ ಸಟ್ಯಾನಿಕ್‌ ವರ್ಸಸ್‌’ ಪುಸ್ತಕವನ್ನು ಇಸ್ಲಾಮಿಸ್ಟ್‌ಗಳ ಒತ್ತಡಕ್ಕೆ ನಿಷೇಧಿಸಿತು. 2024ರಲ್ಲಿ ಬಿಜೆಪಿ ಅದನ್ನು ತೆಗೆದು ಹಾಕಿತು’ ಎಂದು ಇತಿಹಾಸ ನೆನಪಿಸಿದ್ದಾರೆ.

ಫ್ರಾನ್ಸ್‌ನ ಲೂವ್‌ಗೆ ಸಂಕಷ್ಟ: ನೀರು ಸೋರಿ ವಸ್ತುಗಳು ನಾಶ

ನವದೆಹಲಿ: ಅಕ್ಟೋಬರ್‌ನಲ್ಲಿರುವ ಫ್ರಾನ್ಸ್‌ನ ಲೌವ್ರೆ ಮ್ಯೂಸಿಯಂನಲ್ಲಿ ಕಳ್ಳತನ ಬೆನ್ನಲ್ಲೇ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಮ್ಯೂಸಿಯಂನಲ್ಲಿ ನೀರಿನ ಪೈಪ್‌ ಸೋರಿಕೆಯಾಗಿ 300- 400 ಅತ್ಯಮೂಲ್ಯ ಸಂಗ್ರಹಗಳು ಹಾನಿಗೀಡಾಗಿವೆ. ಕಳೆದ ನವೆಂಬರ್‌ 26ರಂದು ಮ್ಯೂಸಿಯಂನಲ್ಲಿ ಅಳವಡಿಸಲಾಗಿರುವ ನೀರಿನ ಪೈಕ್‌ ಸೋರಿಕೆಯಾಗಿತ್ತು. ಪರಿಣಾಮ ಸಂಗ್ರಹಾಲಯದಲ್ಲಿದ್ದ 19,20 ಶತಮಾನಕ್ಕೆ ಸೇರಿದ್ದ ನಿಯತಕಾಲಿಗೆಳು, ಪುರಾತತ್ವ ಶಾಸ್ತ್ರಗಳ ಸಂಶೋಧನೆಗಳು ಸೇರಿದಂತೆ 300ಕ್ಕೂ ಹೆಚ್ಚು ಪುರಾತನ ವಸ್ತುಗಳು ನಾಶವಾಗಿವೆ ಎಂದು ವರದಿಯಾಗಿದೆ. ಲೌವ್ರೆಯಲ್ಲಿ ಇಂತಹ ಸೋರಿಕೆಯಾಗುತ್ತಿರುವುದು ಇದೇ ಮೊದಲೇನಲ್ಲ. ಈ ವರ್ಷದ ಜನವರಿಯಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು. ಅದಾದ ಬಳಿಕ ಸುಮಾರು 895 ಕೋಟಿ ರು. ಮೌಲ್ಯದ ಆಭರಣ ಕಳ್ಳತನವಾಗಿತ್ತು.

ಪ. ಬಂಗಾಳದ ಬಾಬ್ರಿ ಮಸೀದಿಗೆ ₹1.30 ಕೋಟಿ ದೇಣಿಗೆ ಸಂಗ್ರಹ

ಬಹರಾಂಪುರ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಟಿಎಂಸಿಯಿಂದ ಉಚ್ಛಾಟಿತ ಶಾಸಕ ಹುಮಾಯೂನ್‌ ಕಬೀರ್‌ ನಿರ್ಮಿಸಲು ಉದ್ದೇಶಿಸಿರುವ ಅಯೋಧ್ಯೆ ಬಾಬ್ರಿ ಮಸೀದಿ ಮಾದರಿಯ ಮಸೀದಿಗೆ 1.30 ಕೋಟಿ ರ. ದೇಣಿಗೆ ಸಂಗ್ರಹವಾಗಿದೆ. ಕಳೆದ ಶನಿವಾರ ವಿದೇಶಗಳ ಮೌಲ್ವಿ ಕರೆಸಿ ಕಬೀರ್‌ ಮಸೀದಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಬಳಿಕ ರಾಜ್ಯದಲ್ಲಿನ ಮುಸ್ಲಿಂ ಸಮುದಾಯ ಇಷ್ಟು ಹಣವನ್ನು ದೇಣಿಗೆಯಾಗಿ ನೀಡಿದೆ. ಮುಂದಿನ ಪೆಬ್ರುವರಿಯಲ್ಲಿ ಲಕ್ಷ ಕಂಠ ಕುರಾನ್‌ ಪಠಣದ ಬಳಿಕ ಮಸೀದಿ ನಿರ್ಮಾಣ ಕಾರ್ಯ ಆರಂಭಿಸಲು ಉದ್ದೇಶಿಸಲಾಗಿದೆ.

ಮಹಿಳೆ ಮನೆಕೆಲಸವನ್ನೂ ಆರ್ಥಿಕ ದೃಷ್ಟಿಕೋನದಲ್ಲಿ ನೋಡಿ: ಕೇಂದ್ರಕ್ಕೆ ಸಲಹೆ

ನವದೆಹಲಿ: ‘ದೇಶದ ಜನಸಂಖ್ಯೆಯ ಶೇ.50ರಷ್ಟು ಇರುವ ಮಹಿಳೆಯರ ಸಬಲೀಕರಣದ ಉದ್ದೇಶದಿಂದ, ಅವರು ಮನೆಯಲ್ಲಿ ಮಾಡುವ ಕೆಲಸಗಳನ್ನೂ ಆರ್ಥಿಕ ದೃಷ್ಟಿಕೋನದಿಂದ ನೋಡಬೇಕು. ಇದರಿಂದ ಅವರ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನವನ್ನು ಹೆಚ್ಚಸಿ, ದೇಶದ ಜಿಡಿಪಿಗೂ ಕೊಡುಗೆ ಕೊಡುವಂತೆ ಮಾಡಬಹುದು’ ಎಂದು ಬಿಜೆಪಿಯ ರಾಜ್ಯಸಭೆ ಸಂಸದೆ ಚಂದ್ರಪ್ರಭಾ ಅವರು ಕೇಂದ್ರಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಶೂನ್ಯ ವೇಳೆಯಲ್ಲಿ ಮಾತನಾಡಿದ ಅವರು, ‘ಗೃಹಿಣಿಯರ ಕೆಲಸಗಳನ್ನು ಅಧಿಕೃತವಾಗಿ ಗುರುತಿಸಲಾಗುವುದಿಲ್ಲ, ಜತೆಗೆ ಆರ್ಥಿಕ ಲೆಕ್ಕಾಚಾರದಲ್ಲೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಒಂದೊಮ್ಮೆ ಅವುಗಳನ್ನು ಆರ್ಥಿಕವಾಗಿ ಪರಿಗಣಿಸಿದರೆ, ಅದರಿಂದ ಜಿಡಿಪಿ ಸುಧಾರಣೆ ಆಗುವುದರ ಜತೆಗೆ ಮಹಿಳೆಯರ ಸ್ಥಾನಮಾನವೂ ಉತ್ತಮಗೊಳ್ಳುತ್ತದೆ’ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಸೀಸ್‌ನಲ್ಲಿ ಮಕ್ಕಳಿಗೆ ಜಾಲತಾಣ ಬಳಕೆ ನಿಷೇಧ : ನಾಳೆಯಿಂದ ಜಾರಿ
ನಿಮ್ಮ ಪತ್ನಿ ಭಾರತಕ್ಕೆ ಕಳಿಸಿ : ವ್ಯಾನ್ಸ್‌ಗೆ ವಲಸಿಗರ ಟಾಂಗ್‌