ಈ ನೋಟುಗಳನ್ನು ಆರ್‌ಬಿಐ ಮುದ್ರಣ ಮಾಡುತ್ತಿದ್ದರೂ, ಭಾರತದಲ್ಲಿ ಚಲಾವಣೆಯಲ್ಲಿರಲಿಲ್ಲ. ವಿಶೇಷ ವಿದೇಶಿ ಪ್ರವಾಸಿಗರಿಗಾಗಿ ಈ ನೋಟುಗಳ ಮುದ್ರಣ ಆಗುತ್ತಿತ್ತು.
ನವದೆಹಲಿ: ಲಂಡನ್‌ನಲ್ಲಿ ನಡೆದ ಹರಾಜು ಪ್ರಕ್ರಿಕೆಯಲ್ಲಿ ಅಚ್ಚರಿಯ ಘಟನೆ ನಡೆದಿದೆ. ಭಾರತದ 100 ರೂಪಾಯಿ ಮುಖಬೆಲೆಯ ನೋಟ್ ಬರೋಬ್ಬರಿ 56,49,650 ರೂಪಾಯಿಗೆ ಮಾರಾಟ ಮಾಡಿದೆ. ಈ ನೋಟ್‌ನ್ನು ಭಾರತೀಯ ರಿಸರ್ವ್ ಬ್ಯಾಂಕ್ 1950ರಲ್ಲಿ ಮುದ್ರಣ ಮಾಡಿದ್ದು, ಇದರ ಸೀರಿಯಲ್ ನಂಬರ್ HA 078400 ಆಗಿದೆ. ಆದರೆ ಇದು ಸಾಧಾರಣ ನೋಟು ಆಗಿಲ್ಲ. ಈ ನೋಟ್‌ನ್ನು 'ಹಜ್ ನೋಟ್' ಎಂದು ಗುರುತಿಸಲಾಗಿದೆ. 20ನೇ ಶತಮಾನದ ಮಧ್ಯದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿಶೇಷವಾಗಿ ಹಜ್ ಯಾತ್ರೆಗಾಗಿ ಗಲ್ಫ್ ದೇಶಗಳಿಗೆ ಪ್ರಯಾಣಿಸುವ ಭಾರತೀಯ ಯಾತ್ರಾರ್ಥಿಗಳಿಗಾಗಿ ಈ ನೋಟುಗಳನ್ನು ಬಿಡುಗಡೆ ಮಾಡಿತು. ಅಕ್ರಮ ಚಿನ್ನ ಖರೀದಿ ತಡೆಯುವ ಉದ್ದೇಶದಿಂದ ಈ ನೋಟುಗಳನ್ನು ಬಿಡುಗಡೆಗೊಳಿಸಲಾಗಿತ್ತು.
ಈ ನೋಟುಗಳ ಮೊದಲು HA ಎಂಬ ಅಕ್ಷರಗಳಿಂದ ಆರಂಭವಾಗಿದ್ದು, ಸುಲಭವಾಗಿ ಇವುಗಳ ಪ್ರತ್ಯೇಕತೆಯನ್ನು ಗುರುತಿಸಬಹುದಾಗಿದೆ. ಇಷ್ಟು ಮಾತ್ರವಲ್ಲದೇ ಈ ನೋಟುಗಳ ಬಣ್ಣವೂ ವಿಭಿನ್ನವಾಗಿತ್ತು. ಆರ್‌ಬಿಐನಿಂದ ಮುದ್ರಿತವಾದ್ರೂ ಗಲ್ಫ್ ದೇಶಗಳಲ್ಲಿ ಮಾನ್ಯವಾಗಿದ್ದವು. ಗಲ್ಫ್ ದೇಶಗಳಲ್ಲಿ ಭಾರತದ ಈ ನೋಟುಗಳನ್ನು ಸ್ವೀಕರಿಸಲಾಗುತ್ತಿತ್ತು. ಯುಎಇ, ಕತಾರ್, ಬಹ್ರೇನ್, ಕುವೈತ್ ಮತ್ತು ಒಮಾನ್ ದೇಶಗಳಲ್ಲಿ ಮಾನ್ಯವಾಗಿದ್ರೂ, ಭಾರತದಲ್ಲಿ ಇವುಗಳು ಮಾನ್ಯವಾಗಿರಲಿಲ್ಲ.
ತುಂಬಾ ವಿರಳವಾದ ನೋಟುಗಳು
ಮೊದಲು ಕುವೈತ್‌ನಲ್ಲಿ ಭಾರತದ ಕರೆನ್ಸಿಯನ್ನು ಸ್ವೀಕರಿಸಲಾಗುತ್ತಿದ್ದರಿಂದ ಅದಕ್ಕಾಗಿ ಪ್ರತ್ಯೇಕ ನೋಟ್‌ಗಳನ್ನು ಮುದ್ರಿಸಲಾಗುತ್ತಿತ್ತು. 1961ರಲ್ಲಿ ಕುವೈತ್ ತನ್ನ ಕರೆನ್ಸಿಯನ್ನು ಮುದ್ರಣ ಮಾಡಲು ಆರಂಭಿಸಿತು. ಇದಾದ ಬಳಿಕ ಇತರ ಗಲ್ಫ್ ದೇಶಗಳು ಸಹ ನೋಟ್ ಮುದ್ರಣ ಕಾರ್ಯ ಆರಂಭಿಸಿದವು. ಇದಾದ ಬಳಿಕ ಆರ್‌ಬಿಐ 1970ರಲ್ಲಿ ಹಜ್ ನೋಟುಗಳ ಮುದ್ರಣವನ್ನು ಸಂಪೂರ್ಣವಾಗಿ ನಿಲ್ಲಿಸಿತು. ಹಾಗಾಗಿ ಹಜ್ ನೋಟುಗಳನ್ನು ಅಪರೂಪವೆಂದು ಪರಿಗಣಿಸಲಾಗುತ್ತದೆ. ಇಂದಿಗೂ ಭಾರತದಲ್ಲಿ ಹಜ್ ಯಾತ್ರಿಗಳ ಮನೆಯಲ್ಲಿ HA ಅಕ್ಷರವಿರೋ ನೋಟುಗಳು ಇರೋದನ್ನು ಗಮನಿಸಬಹುದು. ಹಾಗಾಗಿ ವಿವಿಧ ಮತ್ತು ಅಪರೂಪದ ಕರೆನ್ಸಿ ಸಂಗ್ರಹಕಾರರು ಈ ನೋಟುಗಳಿಗೆ ಹೆಚ್ಚು ಹಣ ಪಾವತಿಸಲು ಸಿದ್ಧರಿರುತ್ತಾರೆ.
ಇದನ್ನೂ ಓದಿ: ಅಮೆರಿಕನ್ ನಟಿ ಜ್ಯೂಡಿ ಗಾರ್ಲೆಂಡ್ ಧರಿಸಿದ್ದ ಐತಿಹಾಸಿಕ ಶೂ ಭಾರಿ ಮೊತ್ತಕ್ಕೆ ಹರಾಜು
10 ರೂಪಾಯಿ ನೋಟುಗಳು 12 ಲಕ್ಷಕ್ಕೂ ಅಧಿಕ ಬೆಲೆಗೆ ಮಾರಾಟ
ಲಂಡನ್‌ನಲ್ಲಿ ನಡೆದ ಮತ್ತೊಂದು ಹರಾಜಿನಲ್ಲಿ ಎರಡು ಹಳೆಯ 10 ರೂಪಾಯಿ ನೋಟುಗಳು ಭಾರೀ ಬೆಲೆಗೆ ಮಾರಾಟವಾಗಿವೆ. ಒಂದು 6.90 ಲಕ್ಷ ಮತ್ತು ಮತ್ತೊಂದು 5.80 ಲಕ್ಷ ರೂ.ಗಳಿಗೆ ಮಾರಾಟವಾಗಿವೆ. ಮೇ 25, 1918 ರಂದು ಬಿಡುಗಡೆ ಮಾಡಲಾದ ಮಾಹಿತಿ ಪ್ರಕಾರ, 25 ಮೇ 1918ರಂದು ಬಿಡುಗಡೆಯಾದ ಒಂದು ನೋಟು ಅತ್ಯಂತ ಐತಿಹಾಸಿಕ ಮಹತ್ವವನ್ನು ಹೊಂದಿತ್ತು. ಇದು ಮೊದಲ ಮಹಾಯುದ್ಧದ ಕೊನೆಯ ವರ್ಷದಲ್ಲಿ ಮುದ್ರಿತವಾಗಿದೆ. ಈ ನೋಟು ಸಹ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ ಎಂದು ವರದಿಯಾಗಿದೆ
ಇದನ್ನೂ ಓದಿ: ಒಬ್ಬ ವ್ಯಕ್ತಿ ಬ್ಯಾಂಕ್ ಸಾಲ ಪಾವತಿಸದಿದ್ರೆ ಆಸ್ತಿ ಹರಾಜು ಹಾಕ್ತಾರೆ; ಒಂದು ದೇಶ ವಿಫಲವಾದರೆ ಏನಾಗುತ್ತೆ?