ಒಬ್ಬ ವ್ಯಕ್ತಿ ಬ್ಯಾಂಕ್ ಸಾಲ ಪಾವತಿಸದಿದ್ರೆ ಆಸ್ತಿ ಹರಾಜು ಹಾಕ್ತಾರೆ; ಒಂದು ದೇಶ ವಿಫಲವಾದರೆ ಏನಾಗುತ್ತೆ?
Sovereign Default : ಒಬ್ಬ ಸಾಮಾನ್ಯ ವ್ಯಕ್ತಿ ಬ್ಯಾಂಕ್ ಅಥವಾ ಖಾಸಗಿಯಾಗಿ ಸಾಲ ತೆಗೆದುಕೊಳ್ಳುತ್ತಾನೆ. ಹಣ ಪಾವತಿಸದಿದ್ದರೆ ಆ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಆದರೆ ಯಾವುದಾದರೂ ಒಂದು ದೇಶ ಸಾಲವನ್ನು ಮರುಪಾವತಿ ಮಾಡದಿದ್ದರೆ ಏನಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?
ಒಂದು ದೇಶ ಸಾಲ ಮರುಪಾವತಿಸದಿದ್ದರೆ ಏನಾಗುತ್ತೆ?
ಸಾಮಾನ್ಯವಾಗಿ ಒಬ್ಬ ಮನುಷ್ಯ ವೈಯಕ್ತಿಕ ಕಾರಣಕ್ಕೆ ಅಥವಾ ಬ್ಯುಸಿನೆ ಆರಂಭಿಸಲು ಬ್ಯಾಂಕ್‌ಗಳಲ್ಲಿ ಸಾಲ ಪಡೆಯುತ್ತಾನೆ. ಬಳಿಕ ಹಣವನ್ನು ಹಂತ ಹಂತವಾಗಿ ಪಾವತಿಸುತ್ತಾನೆ. ಒಂದು ವೇಳೆ ಹಣ ಪಾವತಿಸಲು ವಿಫಲನಾದರೆ ಬ್ಯಾಂಕ್ ಕಾನೂನು ಕ್ರಮ ಜರುಗಿಸುತ್ತೆ. ಕಾರು ಖರೀದಿಸಲು ಮಾಡಿದ ಸಾಲ ಮರುಪಾವತಿಸದಿದ್ದರೆ ಕಾರು ವಾಪಸ್ ಪಡೆಯುವುದಲ್ಲದೇ ಉಳಿದ ಹಣಕ್ಕಾಗಿ ಸಾಲಗಾರನ ಮನೆ, ಆಸ್ತಿಪಾಸ್ತಿಗಳನ್ನ ಹರಾಜು ಹಾಕಬಹುದು. ಅದೇ ರೀತಿ ಒಂದು ದೇಶ ಕೋಟ್ಯಂತರ ಡಾಲರ್ ಸಾಲ ಪಡೆದು ಮರುಪಾವತಿಸಲು ವಿಫಲವಾದರೆ ಏನಾಗುತ್ತೆ? ಹೌದು ಒಂದು ದೇಶ ಸಾಲ ಮರುಪಾತಿಸದಿದ್ದರೆ ಏನಾಗುತ್ತೆ ಎಂಬ ಪ್ರಶ್ನೆ ನಿಮಗೂ ಬಂದಿದೆಯಲ್ಲವೇ? ಇಲ್ಲಿ ನೊಡೋಣ.
ಒಂದು ದೇಶ ಸಾಲ ಮರುಪಾವತಿಸದಿದ್ದರೆ ಏನಾಗುತ್ತೆ?
ನೀವು ವಾಸಿಸುವ ದೇಶ ಅಥವಾ ಬೇರೆ ಯಾವುದೇ ದೇಶ ವಿವಿಧ ಆರ್ಥಿಕ ಕಾರಣಗಳಿಗಾಗಿ, ಬೃಹತ್ ಯೋಜನೆಗಳಿಗಾಗಿ ಮಿಲಿಯನ್, ಬಿಲಿಯನ್ ಡಾಲರ್‌ಗಟ್ಟಲೆ ಸಾಲ ಪಡೆಯುತ್ತವೆ ಎಂಬುದು ನಿಮಗೆ ತಿಳಿದಿದೆಯೇ? ಹೌದು ಹೀಗೆ ಸಾಲ ಪಡೆಯುವ ದೇಶಗಳ ಸಾಲಿನಲ್ಲಿ ಅಮೆರಿಕ ಭಾರತ ಸೇರಿದಂತೆ ಬಹುತೇಕ ದೇಶಗಳಿವೆ ಮತ್ತು ಕಾಲ ಕಾಲಕ್ಕೆ ಮರುಪಾವತಿಸುತ್ತಿವೆ. ಒಂದು ವೇಳೆ ಮರುಪಾವತಿಸದಿದ್ದರೆ?
ಒಂದು ದೇಶ ಸಾಲ ಮರುಪಾವತಿಸದಿದ್ದರೆ ಏನಾಗುತ್ತೆ?
ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ಪ್ರಕಾರ, ವಿಶ್ವದಲ್ಲಿ ಹೆಚ್ಚು ಸಾಲದ ದೇಶಗಳ ಪಟ್ಟಿಯನ್ನು ಪ್ರತಿ ವರ್ಷವೂ ಬಿಡುಗಡೆ ಮಾಡುತ್ತದೆ. ಉದಾಹರಣೆಗೆ, ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ 2023 ರ ಡೇಟಾದ ವರದಿಯನ್ನ ನೋಡುವುದಾದರೆ ಆ ಪಟ್ಟಿಯಲ್ಲಿ ಅಮೆರಿಕದ ಹೆಸರು ಅಗ್ರಸ್ಥಾನದಲ್ಲಿದೆ. ಅಮೆರಿಕವು 33229 ಬಿಲಿಯನ್ ಡಾಲರ್ ಸಾಲವನ್ನು ಹೊಂದಿದೆ . ಚೀನಾದ ಹೆಸರು ಎರಡನೇ ಸ್ಥಾನದಲ್ಲಿದೆ. ಜಪಾನ್ ಮೂರನೇ ಸ್ಥಾನದಲ್ಲಿದೆ. ಜಪಾನ್ 10,797 ಬಿಲಿಯನ್ ಡಾಲರ್ ಸಾಲವನ್ನು ಹೊಂದಿದೆ. ನಾಲ್ಕನೇ ಸ್ಥಾನದಲ್ಲಿ ಯುಕೆ 3,469 ಶತಕೋಟಿ ಡಾಲರ್ ಸಾಲವನ್ನು ಹೊಂದಿದೆ ಮತ್ತು ಐದನೇ ಸ್ಥಾನದಲ್ಲಿ ಫ್ರಾನ್ಸ್ ಇದೆ. ಫ್ರಾನ್ಸ್ 3,354 ಶತಕೋಟಿ ಡಾಲರ್ ಸಾಲವನ್ನು ಹೊಂದಿದೆ. ಈ ಪಟ್ಟಿಯಲ್ಲಿ ಭಾರತ ಏಳನೇ ಸ್ಥಾನದಲ್ಲಿದೆ, ಭಾರತವು 3,057 ಶತಕೋಟಿ ಡಾಲರ್ ಸಾಲವನ್ನು ಹೊಂದಿದೆ.
ಸಾಲ ಮರುಪಾವತಿ ಮಾಡದಿದ್ದರೆ ಏನು ಕ್ರಮ?

ಇಷ್ಟೊಂದು ಪ್ರಮಾಣದ ಸಾಲ ಮರುಪಾವತಿ ಮಾಡದಿದ್ದರೆ ಗತಿಯೇನು? ಅಂತಾ ನಿಮಗೆ ಪ್ರಶ್ನೆ ಮೂಡಿದೆಯಲ್ವ? ಒಂದು ದೇಶವು ತನ್ನ ಸಾಲವನ್ನು ಮರುಪಾವತಿಸದಿದ್ದರೆ, ಎಲ್ಲಕ್ಕಿಂತ ಮೊದಲು ಇತರ ದೇಶಗಳು ಅದರೊಂದಿಗೆ ವ್ಯಾಪಾರವನ್ನು ನಿಲ್ಲಿಸುತ್ತವೆ. ಇದರಿಂದ ಸಾಲ ಪಡೆಯುವ ದೇಶದ ಆರ್ಥಿಕತೆ ಮತ್ತಷ್ಟು ಕುಸಿಯುತ್ತಿದೆ. ಒಂದು ದೇಶದ ಆರ್ಥಿಕ ಅಭಿವೃದ್ಧಿ ಎಂದರೆ ಅಲ್ಲಿನ ವ್ಯಾಪಾರ. ಇತರೆ ದೇಶಗಳು ವ್ಯಾಪಾರವೇ ನಿಲ್ಲಿಸಿದಾಗ ಸಾಲ ಮರುಪಾವತಿಸುವುದು ಹೇಗೆ? ಈ ಸಾಲ ಮರುಪಾವತಿಸಲು ಬೇರೆ ಯಾವ ಮೂಲಗಳಿಂದಲೂ ಸಾಲ ಸಿಗುವುದಿಲ್ಲ. ಸಾಲವನ್ನು ತೀರಿಸದ ಆ ದೇಶವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ. ಈಗಿನ ಪಾಕಿಸ್ತಾನ ಪರಿಸ್ಥಿತಿ ಹೀಗೆ ಇದೆ ಎಂಬುದು ಗಮನಿಸಿ.
ಸಾಲ ಮರುಪಾವತಿಸದ ದೇಶಗಳು ದಿವಾಳಿಯಾಗುತ್ತವೆ. ಅರಾಜಕತೆ ಸೃಷ್ಟಿಯಾಗಿ ಸಂಪೂರ್ಣವಾಗಿ ಆರ್ಥಿಕ ವ್ಯವಸ್ಥೆಯೇ ಹದಗೆಡುತ್ತದೆ. ಈ ವೇಳೆ ಬೇರೆ ಯಾವ ದೇಶಗಳು, ಹಣಕಾಸು ಸಂಸ್ಥೆಗಳು ಸಾಲ ಕೊಡಲು ಮುಂದೆ ಬರುವುದಿಲ್ಲ.