ಪತನಗೊಂಡ ವಿಮಾನವೊಂದರಿಂದ ಪೈಲಟ್ ಓರ್ವ ಜಿಗಿದು ಪಾರಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಳೆ ವಿಡಿಯೋ ಇದಾಗಿದ್ದು ಈಗ ವೈರಲ್ ಆಗುತ್ತಿದೆ.
ಲಂಡನ್: ವಿಮಾನದಲ್ಲಿ ಅದರಲ್ಲೂ ಕೆಲ ಯುದ್ಧ ವಿಮಾನದಲ್ಲಿ ಪಯಣಿಸುವುದೆಂದರೆ ಸಾವಿನೊಂದಿಗೆ ಸಾಹಸವೇ ಸರಿ. ಯಾವಾಗ ಏನಾಗುವುದೋ ಹೇಳಲಾಗದು. ಭಾರತದ ವಾಯುಪಡೆಯಲ್ಲಿ ಸ್ಥಾನ ಪಡೆದಿದ್ದ ಮಿಗ್ 27 ಹಾಗೂ ಮಿಗ್ 21 ವಿಮಾನಗಳು ಹಾರಾಡುವ ಶವ ಪೆಟ್ಟಿಗೆಗಳೆಂದೇ ಕುಖ್ಯಾತಿ ಪಡೆದಿದ್ದವು. ಈ ನಡುವೆ ಪತನಗೊಂಡ ವಿಮಾನವೊಂದರಿಂದ ಪೈಲಟ್ ಓರ್ವ ಜಿಗಿದು ಪಾರಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಳೆ ವಿಡಿಯೋ ಇದಾಗಿದ್ದು ಈಗ ವೈರಲ್ ಆಗುತ್ತಿದೆ.
ಮೇಲೆ ಹಾರುತ್ತಿದ್ದ ಬ್ರಿಟಿಷ್ ಪೈಟರ್ ಜೆಟ್ (Fighter Jet) ಇನ್ನೇನು ಲ್ಯಾಂಡ್ ಆಗಬೇಕು ಅನ್ನುವಷ್ಟರಲ್ಲಿ ಪತನಗೊಳುತ್ತದೆ. ವಿಮಾನ ಸಂಪೂರ್ಣ ಬೆಂಕಿಗಾಹುತಿಯಾಗುವ ಕೆಲ ಕ್ಷಣಗಳಿಗೆ ಮುನ್ನ ಅದರ ಪೈಲಟ್ ಪ್ಯಾರಾಚೂಟ್ ಸಹಾಯದಿಂದ ಜಿಗಿದು ಪಾರಾಗುತ್ತಾನೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ. 2009ರಲ್ಲಿ ಅಫ್ಘಾನಿಸ್ತಾನದಲ್ಲಿ(Afghanistan) ನಡೆದ ಘಟನೆ ಇದಾಗಿದೆ. ಬ್ರಿಟನ್‌ನ ರಾಯಲ್ ಏರ್‌ಫೋರ್ಸ್‌ಗೆ (Royal Air Force) ಸೇರಿದ ವಿಮಾನ ಕಂದಹಾರ್‌ನ ವಾಯುನೆಲೆಯಲ್ಲಿ(Kandahar airfield) ಲ್ಯಾಂಡ್ ಆಗಬೇಕು ಅನ್ನುವಷ್ಟರಲ್ಲಿ ವಿಮಾನ ಬೆಂಕಿಗಾಹುತಿಯಾಗಿತ್ತು.
ಜೆಟ್‌ನ ಪೈಲಟ್ ದೊಡ್ಡ ಅನಾಹುತವನ್ನು ತಡೆಯಲು ಪ್ರಯತ್ನಿಸಿದರು. ಆದರೆ ಅಷ್ಟರಲ್ಲೇ ಬೆಂಕಿಯ ಜ್ವಾಲೆಯು ಕಾಕ್‌ಪಿಟ್‌ಗೆ ತಲುಪಿದ್ದರಿಂದ ಅಂತಿಮವಾಗಿ ಅವರು ಅದರಿಂದ ಹಾರಿ ಹೊರಬರುವ ಅವಕಾಶವೊಂದೇ ಉಳಿದಿತ್ತು. ಈ ಮೈ ಜುಮ್ಮೆನಿಸುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ(social Media) ವೈರಲ್ ಆಗಿದ್ದು, ಬೆಂಕಿಯುಂಡೆಯಂತಾಗಿದ್ದ ವಿಮಾನದಿಂದ ಹೊರ ಬರಲು ಪೈಲಟ್ ವಿಳಂಬವೇಕೆ ಮಾಡಿದರು ಎಂದು ವಿಡಿಯೋ ನೋಡಿದವರು ಪ್ರಶ್ನಿಸುತ್ತಿದ್ದಾರೆ.
ರೆಡಿಟ್‌ನಲ್ಲಿ ಪೋಸ್ಟ್ ಆದ 34 ಸೆಕೆಂಡ್‌ಗಳ ವಿಡಿಯೋದಲ್ಲಿ ಫೈಟರ್ ಜೆಟ್ ನೆಲ ಮುಟ್ಟುತ್ತಿದ್ದಂತೆ ಅದರ ಮುಂಭಾಗ ಕಳಚಿಕೊಳ್ಳುತ್ತದೆ. ಹಿಂಭಾಗದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುತ್ತದೆ. ಬಿಬಿಸಿ ಆ ಸಂದರ್ಭದಲ್ಲಿ ಮಾಡಿದ್ದ ವರದಿಯಂತೆ ಇದು ಹ್ಯಾರಿಯರ್ ಜೆಟ್ ಆಗಿದ್ದು, ಜೀವಾಪಾಯದಿಂದ ಪಾರಾದರೂ ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿತ್ತು.
ಸೇನೆಗೆ ‘ಪ್ರಚಂಡ’ ಶಕ್ತಿ: ಭಾರತದ ಬತ್ತಳಿಕೆಯಲ್ಲಿ ಬ್ರಹ್ಮಾಸ್ತ್ರಗಳ ರಾಶಿ!
ಈ ವಿಮಾನವೂ ಅಫ್ಘಾನಿಸ್ತಾನ ಮಿಷನ್ ಕಾರ್ಯಾಚರಣೆಯ (mission in Afghanistan) ಭಾಗವಾಗಿತ್ತು. ಈ ಯುದ್ಧ ವಿಮಾನಗಳು ತಮ್ಮೊಂದಿಗೆ ಮದ್ದುಗುಂಡುಗಳನ್ನು ಹಾಗೂ ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದರು. ಕಂದಹಾರ್‌ನಲ್ಲಿ ವಾಯುನೆಲೆ ಸಮೀಪಿಸುತ್ತಿದ್ದಾಗ ಆಕಾಶದಲ್ಲಿ ಶತ್ರುಪಡೆಗಳು ಕ್ಷಿಪಣಿ ಪ್ರಯೋಗ ಮಾಡಲಿದ್ದಾರೆ ಎಂಬ ಎಚ್ಚರಿಕೆಯ ಸೂಚನೆ ವಿಮಾನಕ್ಕೆ ಸಿಕ್ಕಿತ್ತು. ಕೂಡಲೇ ನಿರ್ದೇಶಿತ ಕ್ಷಿಪಣಿಗಳನ್ನು ಗೊಂದಲಕ್ಕೀಡು ಮಾಡುವ ಜ್ವಾಲೆಗಳನ್ನು ಬಿಡುಗಡೆ ಮಾಡಿ ಕೆಳಗಿಳಿಯುವ ವೇಳೆ ಈ ಅವಘಡ ಸಂಭವಿಸಿತ್ತು. ಆದರೆ ಶತ್ರುಗಳ ಕ್ರಿಯೆಯಿಂದ ನಡೆದ ಘಟನೆ ಇದಲ್ಲ ಎಂಬುದನ್ನು ನಂತರ ಯುಕೆಯ ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿತ್ತು.
ಶ್ರೀಲಂಕಾಗೆ ಡಾರ್ನಿಯರ್ ಯುದ್ಧ ವಿಮಾನ ಉಡುಗೊರೆ ನೀಡಿದ ಭಾರತ
ಹ್ಯಾರಿಯರ್ ಏರ್‌ಕ್ರಾಪ್ಟ್ ಇಳಿಯುವ ಸಾಧ್ಯತೆ ಹೆಚ್ಚಾಗಿತ್ತು. ಆದರೆ ಅದಕ್ಕೆ ಇಳಿಯಲು ಸಾಧ್ಯವಾಗಲಿಲ್ಲ. ಎರಡನೇ ಭಾರಿ ಇಳಿಯುವ ಪ್ರಯತ್ನ ಮಾಡಿದ ವೇಳೆ ವಿಮಾನದ ಬಾಲ ನೆಲಕ್ಕೆ ತಾಗಿತು. ಇದರಿಂದ ಡೆಕ್‌ಗೆ ಬಡಿದು ಲ್ಯಾಂಡಿಂಗ್ ಗೇರ್(landing gear) ಕುಸಿದು 4000 ಅಡಿಗಳವರೆಗೆ ಜಾರಿತು. ಈ ವಿಮಾನದಲ್ಲಿದ್ದ ಪೈಲಟ್, ಮರ್ಟಿನ್ ಪೆರ್ತ್,(Martin Pert) ವಿಮಾನದ ಕಾಕ್‌ಪಿಟ್‌ನಲ್ಲಿದ್ದುಕೊಂಡು, ಟೇಕ್-ಆಪ್‌ಗಾಗಿ ಕಾಯುತ್ತಿರುವ ಇತರ ವಿಮಾನಗಳಿಗೆ ಈ ವಿಮಾನ ಅಪ್ಪಳಿಸುವುದನ್ನು ತಪ್ಪಿಸಲು ಕಾಕ್‌ಪಿಟ್ (cockpit) ಅಲ್ಲಿ ಹ್ಯಾಂಡಲ್ ಮಾಡುತ್ತಿದ್ದರು.ಅಷ್ಟರಲ್ಲಿ ಜ್ವಾಲೆ ಕಾಕ್‌ಪಿಟ್‌ನ್ನು ಕೂಡ ತಲುಪಿತು. ಕೂಡಲೇ ಅವರು ಪ್ಯಾರಾಚೂಟ್ ಸಹಾಯದಿಂದ ಎಸ್ಕೇಪ್ ಆದರು ಎಂದು ಯುಕೆ ರಕ್ಷಣಾ ಸಚಿವಾಲಯ ಹೇಳಿತ್ತು.
ನಿಜಕ್ಕೂ ಪೈಲಟ್‌ನ ಧೈರ್ಯ ಹಾಗೂ ಸಾಹಸ ಮೆಚ್ಚುವಂತದ್ದು ಎಂದು ವಿಡಿಯೋ ನೋಡಿದವರು ಕಾಮೆಂಟ್ ಮಾಡಿದ್ದಾರೆ.