ಸಾವಿನಿಂದ ಕ್ಷಣದಲ್ಲಿ ಪಾರಾದ ಸ್ಟೀವ್‌ ಇರ್ವಿನ್ ಪುತ್ರ... ಭಯಾನಕ ವಿಡಿಯೋ ವೈರಲ್

Suvarna News   | Asianet News
Published : Feb 08, 2022, 04:37 PM IST
ಸಾವಿನಿಂದ ಕ್ಷಣದಲ್ಲಿ ಪಾರಾದ ಸ್ಟೀವ್‌ ಇರ್ವಿನ್ ಪುತ್ರ... ಭಯಾನಕ ವಿಡಿಯೋ ವೈರಲ್

ಸಾರಾಂಶ

ಮೊಸಳೆ ಪಳಗಿಸುವುದರಲ್ಲಿ ಪರಿಣಿತರಾಗಿದ್ದ ಸ್ಟೀವ್‌ ಇರ್ವಿನ್ ತಂದೆಯ ಹಾದಿಯಲ್ಲೇ ನಡೆಯುತ್ತಿರುವ ಪುತ್ರ ರಾಬರ್ಟ್ ಇರ್ವಿನ್‌ 2006ರಲ್ಲಿ ಸ್ಟಿಂಗ್ ರೇ ಮೀನಿನ ದಾಳಿಯಿಂದಾಗಿ ಸಾವಿಗೀಡಾದ ಸ್ಟೀವ್ 

ಸ್ಟೀವ್‌ ಇರ್ವಿನ್‌ ಯಾರಿಗೆ ಗೊತ್ತಿಲ್ಲ. 2006ರಲ್ಲಿ ಸ್ಟಿಂಗ್ ರೇ ಮೀನೊಂದು ಚುಚ್ಚಿದ ಪರಿಣಾಮ ಸಾವಿಗೀಡಾದ ಆಸ್ಟ್ರೇಲಿಯಾದ ಸ್ಟೀವ್‌ ಇರ್ವಿನ್‌ ಕಾಡು ಪ್ರಾಣಿಗಳನ್ನು ಅದರಲ್ಲೂ ವಿಶೇಷವಾಗಿ ಮೊಸಳೆಗಳನ್ನು ಪಳಗಿಸುವ ವಿಧಾನದಿಂದ ಪ್ರಪಂಚದಾದ್ಯಂತ ಸಾಕಷ್ಟು ಖ್ಯಾತಿ ಗಳಿಸಿದ್ದರು. ಈಗ ಇವರ ಪುತ್ರ  ರಾಬರ್ಟ್ ಇರ್ವಿನ್‌(Robert Irwin) ತಂದೆಯ ಹಾದಿಯನ್ನೇ ಹಿಡಿದಿದ್ದು, ಮೊಸಳೆಗಳೊಂದಿಗೆ ಸಾಹಸ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರು ದಾಳಿ ಮಾಡಲು ಬಂದ ಮೊಸಳೆಯೊಂದರಿಂದ ಕೂದಲೆಳೆ ಅಂತರದಲ್ಲಿ ಎಸ್ಕೇಪ್‌ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ತಂದೆ ಸ್ಟೀವ್‌ ಇರ್ವಿನ್‌ರನ್ನು ನೆನಪಿಸುತ್ತಿದೆ ಈ ವಿಡಿಯೋ. 

ವನ್ಯಜೀವಿ ಛಾಯಾಗ್ರಾಹಕರೂ ಆಗಿರುವ ರಾಬರ್ಟ್ ಇರ್ವಿನ್‌ ಈ ದೃಶ್ಯವನ್ನು ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಪ್ರಾಣಿಗಳ ಆರೈಕೆಯ ವೇಳೆ ಮೃಗಾಲಯದ ಸಿಬ್ಬಂದಿ ಎದುರಿಸುವ ಸವಾಲುಗಳನ್ನು ಈ ವಿಡಿಯೋ ತೋರಿಸುತ್ತಿದೆ. ಈ ಭಯಾನಕ ವೀಡಿಯೊದಲ್ಲಿ, ವನ್ಯಜೀವಿ ಹೋರಾಟಗಾರ ಮತ್ತು ಆಸ್ಟ್ರೇಲಿಯಾ ಮೃಗಾಲಯದ (Australia Zoo) ಸದಸ್ಯನೂ ಆಗಿರುವ ರಾಬರ್ಟ್ ಇರ್ವಿನ್ ಬೃಹತ್ ಗಾತ್ರದ ಉಪ್ಪುನೀರಿನ ಮೊಸಳೆಗೆ ಆಹಾರ ನೀಡಲು ಪ್ರಯತ್ನಿಸುತ್ತಿರುವಾಗ ಅದು ಮೇಲೆರಗಿ ಬಂದಿದ್ದು, ರಾಬರ್ಟ್‌ ತಮ್ಮ ಜೀವ ಉಳಿಸಿಕೊಳ್ಳಲು ಓಡಿ ಪಾರಾಗುವ ದೃಶ್ಯ ಈ ವಿಡಿಯೋದಲ್ಲಿ ಇದೆ.

ತಂದೆ ರೀತಿ ಮೊಸಳೆಗೆ ಆಹಾರ ಕೊಟ್ಟ ಇರ‌್ವಿನ್ ಪುತ್ರ

ಕೇವಲ 18 ವರ್ಷ ವಯಸ್ಸಿನ ರಾಬರ್ಟ್ ತನ್ನ ಇದುವರೆಗಿನ ಜೀವನದಲ್ಲಿ ಮೃಗಾಲಯದ ಕ್ರೂರ ಸರೀಸೃಪಗಳು ಸೇರಿದಂತೆ ವಿವಿಧ ವನ್ಯಜೀವಿಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾನೆ. ತನ್ನ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ವನ್ಯಜೀವಿ ಛಾಯಾಗ್ರಾಹಕನೂ ಆಗಿರುವ ರಾಬರ್ಟ್, ಪ್ರಾಣಿಗಳ ಆರೈಕೆ ಮಾಡುವಾಗ ಮೃಗಾಲಯದ ಸಿಬ್ಬಂದಿ ಎದುರಿಸುವ ಸವಾಲುಗಳನ್ನು ತೋರಿಸಿದ್ದಾರೆ.

 

ಈ ವಿಡಿಯೋ ಮೃಗಾಲಯದಲ್ಲಿನ ತನ್ನ ಕುಟುಂಬದ ಜೀವನವನ್ನು ಆಧರಿಸಿದ ದೂರದರ್ಶನ ಕಾರ್ಯಕ್ರಮವಾದ ಇರ್ವಿನ್‌ ಟಿವಿ ಶೋ ಕ್ರಿಕಿಯ ಕೊನೆಯ ಸಂಚಿಕೆಯ ಭಾಗವಾಗಿತ್ತು. ಈ ವಿಡಿಯೋದ ಆರಂಭದಲ್ಲಿ ಈ ಮೃಗಾಲಯದಲ್ಲಿರುವ ಅತ್ಯಂತ ಕ್ರೂರ ಪ್ರಾಣಿ ಕ್ಯಾಸ್ಪರ್‌ ಹೆಸರಿನ ಮೊಸಳೆಯ ಬಗ್ಗೆ ಅವರು ವಿವರವಾಗಿ ತಿಳಿಸಲು ಆರಂಭ ಮಾಡಿದ್ದರು. 

ಆಹಾರಕ್ಕಾಗಿ ಹೋರಾಟ... ಜಿಂಕೆಯನ್ನು ಕಚ್ಚಿ ಅತಿಂದಿತ್ತ ಎಳೆದಾಡಿದ ಸಿಂಹ, ಮೊಸಳೆ

ಆದರೆ ಕ್ಯಾಸ್ಪರ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ  ಮೊದಲು, ರಾಬರ್ಟ್ ಮತ್ತು ಇತರ ಸಿಬ್ಬಂದಿ ಸದಸ್ಯರು ಹೊಸ ಸುತ್ತಮುತ್ತಲಿನ ಪ್ರದೇಶಗಳಿಗೆ ಕ್ಯಾಸ್ಪರ್ ಚೆನ್ನಾಗಿ ಹೊಂದಿಕೊಳ್ಳುತ್ತಿದ್ದಾನೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.  ಏಕೆಂದರೆ ಹೊಸ ಪರಿಸರದಲ್ಲಿ ಮೊಸಳೆಗಳು ಹೇಗೆ ವರ್ತಿಸುತ್ತವೆ ಎಂಬುದು ತಿಳಿಯುವುದಿಲ್ಲ. ಇದಕ್ಕೆ ಇಂದು ನಾನೇ ಉದಾಹರಣೆ ಎಂದು ರಾಬರ್ಟ್ ಹೇಳುತ್ತಾರೆ.

ರಾಬರ್ಟ್ ಕೊಳದಲ್ಲಿ ನೀರಿನ ಅಡಿಯಲ್ಲಿ ಈಜುತ್ತಿರುವ ಮೊಸಳೆಯನ್ನು ನೋಡುತ್ತಾ ವಿವರಿಸುತ್ತಾರೆ.  ಈಗ ನಾವು ಅವನಿಂದ ಉತ್ತಮವಾದ, ದೊಡ್ಡ ಪ್ರತಿಕ್ರಿಯೆಯನ್ನು ನೋಡಲು ಬಯಸುತ್ತೇವೆ ಎಂದು ರಾಬರ್ಟ್‌ ಇರ್ವಿನ್ ಅವರು ಹಸಿದ ಸರೀಸೃಪಕ್ಕೆ ಕೆಲವು ಮಾಂಸದೊಂದಿಗೆ ನಡೆದುಕೊಂಡು ಹೋಗುತ್ತಿರುವಾಗ ಆ ಮೊಸಳೆಯು ಒಮ್ಮೆಗೆ ಇವರ ಮೇಲೆರಗಿ ಬರುತ್ತದೆ ಈ ವೇಳೆ ರಾಬರ್ಟ್ ಓಡಲು ಶುರು ಮಾಡುತ್ತಾರೆ. ಈ ಭಯಾನಕ ದೃಶ್ಯ ಮೈನವಿರೇಳಿಸುವಂತೆ ಮಾಡುತ್ತದೆ. ಅಲ್ಲದೇ ಸ್ಟಿಂಗ್‌ ರೇ ಮೀನಿನಿಂದಾಗಿ ಪ್ರಾಣ ಬಿಟ್ಟ ಅವರ ತಂದೆಯನ್ನು ನೆನಪಿಸುತ್ತಿದೆ. ನೆಟ್ಟಿಗರು ಕೂಡ ಸ್ಟೀವ್ ಇರ್ವಿನ್‌ ಅವರನ್ನು ನೆನಪು ಮಾಡಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ