8 ವರ್ಷ ಕಾಲ 7 ಲಕ್ಷ ಬೆಂಕಿಕಡ್ಡಿ ಬಳಸಿ ನಿರ್ಮಿಸಿದ್ದ ಐಫೆಲ್‌ ಟವರ್‌ಗೆ 'ಗಿನ್ನೀಸ್‌ ವರ್ಲ್ಡ್‌ ರೆಕಾರ್ಡ್‌' ಮಿಸ್‌!

By Santosh Naik  |  First Published Feb 8, 2024, 9:12 PM IST

ಒಂದಲ್ಲ ಎರಡಲ್ಲ ಬರೋಬ್ಬರಿ 8 ವರ್ಷಗಳ ಬಾಲ 7 ಲಕ್ಷ ಬೆಂಕಿ ಕಡ್ಡಿಯನ್ನು ಬಳಸಿಕೊಂಡು ಐಫೆಲ್‌ ಟವರ್‌ಅನ್ನು ನಿರ್ಮಿಸಿದ್ದ ವ್ಯಕ್ತಿಗೆ ನಿರಾಸೆಯಾಗಿದೆ. ಗಿನ್ನೀಸ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌ ಇದಕ್ಕೆ ವಿಶ್ವದಾಖಲೆಯ ಮಾನ್ಯತೆ ನೀಡಲು ನಿರಾಕರಿಸಿದೆ.
 


ನವದೆಹಲಿ (ಫೆ.8): ಐಫೆಲ್‌ ಟವರ್‌ನ ಮಾದರಿಯನ್ನು ನಿರ್ಮಿಸಿ ಆ ಮೂಲಕ ಗಿನ್ನೇಸ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್ಸ್‌ಗೆ ಸೇರುವುದು ಆತನ ಅತೀವ ಆಸೆಯಾಗಿತ್ತು. ಅದಕ್ಕಾಗಿ ಆತ ಬೆಂಕಿಕಡ್ಡಿಯಿಂದ ಐಫೆಲ್‌ ಟವರ್‌ಅನ್ನು ನಿರ್ಮಾಣ ಮಾಡುವ ಐಡಿಯಾ ಮಾಡುತ್ತಾನೆ. ಅದರಂತೆ 8 ವರ್ಷಗಳ ಕಾಲ 7 ಲಕ್ಷಕ್ಕೂ ಅಧಿಕ ಬೆಂಕಿಕಡ್ಡಿಯಿಂದ ಐಫೆಲ್‌ ಟವರ್‌ನ ಮಾದರಿಯನ್ನಿ ನಿರ್ಮಿಸಿ ಗಿನ್ನೇಸ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್ಸ್‌ ಅಧಿಕಾರಿಗೆ ತೋರಿಸಿದಾಗ ಅವರು ಸುತಾರಾಂ ಇದಕ್ಕೆ ವಿಶ್ವದಾಖಲೆ ನೀಡಲು ಸಾಧ್ಯವಾಗೋದಿಲ್ಲ ಎನ್ನುತ್ತಾರೆ. ಅದರೊಂದಿಗೆ ಫ್ರೆಂಚ್‌ ವ್ಯಕ್ತಿಯ 8 ವರ್ಷದ ಪರಿಶ್ರಮ ಕೂಡ ಮಣ್ಣುಪಾಲಾಗಿದೆ. ಮೂಲಗಳ ಪ್ರಕಾರ ಈ ವ್ಯಕ್ತಿ ತಪ್ಪಾದ ಬೆಂಕಿಕಡ್ಡಿಯನ್ನು ಬಳಸಿರುವ ಕಾರಣಕ್ಕೆ ಗಿನ್ನೇಸ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್ಸ್‌ ವಿಶ್ವದಾಖಲೆಯನ್ನು ನೀಡಲು ನಿರಾಕರಿಸಿದೆ. ಫ್ರಾನ್ಸ್‌ನ ರಿಚರ್ಡ್ ಪ್ಲೌಡ್  ಹೆಸರಿನ ವ್ಯಕ್ತಿ ಒಟ್ಟು 706,900 ಬೆಂಕಿಕಡ್ಡಿಗಳನ್ನು ಬಳಸಿ ಶ್ರಮವಹಿಸಿ ತಯಾರಿಸಿದ ಐಫೆಲ್ ಟವರ್‌ನ 23.6 ಅಡಿ ಎತ್ತರವಾಗಿದೆ. ಹಾಗೇನಾದರೂ ವಾಣಿಜ್ಯವಾಗಿ ಲಭ್ಯವಿರುವ ಬೆಂಕಿಕಡ್ಡಿಯನ್ನು ಹಾಗೇನಾದರೂ ಬಳಸಿಕೊಂಡಿದ್ದರೆ, ಇದು ವಿಶ್ವದ ಅತೀ ಎತ್ತರದ ಶಿಲ್ಪವಾಗುವ ಎಲ್ಲಾ ಸಾಧ್ಯತೆಗಳಿದ್ದವು.

ನಾನು ನಿರ್ಮಿಸಿರುವ ಮಾದರಿಯನ್ನೇ ಅವರು ಈವರೆಗೂ ವೀಕ್ಷಣೆ ಮಾಡಿಲ್ಲ. ಅದಕ್ಕೂ ಮುನ್ನವೇ ಗಿನ್ನೇಸ್‌ ಬುಕ್‌ ಸಂಸ್ಥೆಯ ಅಧಿಕಾರಿಗಳು ತಮ್ಮ ತೀರ್ಪನ್ನು ನೀಡಿದ್ದಾರೆ' ಎಂದು ರಿಚರ್ಡ್‌ ಪ್ಲೌಡ್‌ ತಮ್ಮ ಶಿಲ್ಪ ಅನರ್ಹವಾಗಿರುವ ಬಗ್ಗೆ ಇನ್ಸ್‌ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಪಶ್ಚಿಮ ಫ್ರಾನ್ಸ್‌ನ ಪೊಯಿಟೌ-ಚರೆಂಟೆಸ್‌ನ ಸೌಜೋನ್‌ನಲ್ಲಿ ಕೌನ್ಸಿಲ್ ವರ್ಕರ್‌ ಆಗಿರುವ ಪ್ಲೌಡ್, ಅವರು ನೀಡಿದ್ದ ಮಾರ್ಗಸೂಚಿಗಳ ಪ್ರಕಾರ, ಬೆಂಕಿಕಡ್ಡಿಗಳನ್ನು ಯಾವುದೇ ಕಾರಣಕ್ಕೂ ಕತ್ತರಿಸಬಾರದು. ಅವುಗಳನ್ನು ಬದಲಾವಣೆ ಮಾಡಬಾರದು. ಹಾಗೂ ಗುರುತಿಸಲಾಗದಷ್ಟು ವಿರೂಪ ಮಾಡಬಾರದ ಎನ್ನಲಾಗಿತ್ತು.

ಆದರೆ, ನಾನು ಬಳಸಿರುವ ಬೆಂಕಿಕಡ್ಡಿಗಳು ವಾಣಿಜ್ಯವಾಗಿ ಲಭ್ಯವಿಲ್ಲ. ಅದಲ್ಲದೆ, ಅವುಗಳನ್ನು ಬೆಂಕಿಕಡ್ಡಿಗಳು ಎಂದು ಹೇಳಲು ಸಾಧ್ಯವಿಲ್ಲದ ಕಾರಣ ನನ್ನ ಮಾದರಿಯನ್ನು ವಿಶ್ವದಾಖಲೆಯಿಂದ ಅನರ್ಹ ಮಾಡಲಾಗಿದೆ ಎಂದು ಆತ ಬರೆದುಕೊಂಡಿದ್ದಾರೆ.

706,900 ಬೆಂಕಿಕಡ್ಡಿಗಳನ್ನು ಒಂದಕ್ಕೊಂದು ಅಂಟಿಸಲಾಗಿದೆ. ಆ ಕಾರಣಕ್ಕಾಗಿ ಇವುಗಳನ್ನು ಬೆಂಕಿಕಡ್ಡಿ ಎನ್ನಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ಅದಲ್ಲದೆ, ಗುರುತಿಸಲಾಗದಷ್ಟು ಬೆಂಕಿಕಡ್ಡಿಯನ್ನು ವಿರೂಪ ಮಾಡಲಾಗಿದೆ ಎಂದು ತಿಳಿಸಿದ್ದಾರೆ ಎಂದು ಪ್ಲೌಡ್‌ ಹೇಳಿದ್ದು, ಅವರ ಇಂಗ್ಲೀಷ್‌ ನನಗೆ ಬಹಳ ಭಿನ್ನವಾಗಿ ಕಂಡಿದೆ ಎಂದಿದ್ದಾರೆ.

Tap to resize

Latest Videos

ತಾಜ್‌ಮಹಲ್‌ ನಾನು ನೋಡಿದ ಅತ್ಯಂತ ರೋಮ್ಯಾಂಟಿಕ್‌ ಸ್ಥಳ: ಮ್ಯಾಕ್ರನ್‌!

ಹಲವಾರು ಸೋಶಿಯಲ್‌ ಮೀಡಿಯಾ ಬಳಕೆದಾರರು ಪ್ಲೌಡ್‌ಗೆ ಸಹಾನುಭೂತಿ ವ್ಯಕ್ತಪಡಿಸಿದ್ದು,  ಅವರು ವಾಸ್ತವವನ್ನು ಲೆಕ್ಕಿಸದೆ ಗಿನ್ನೆಸ್ ವಿಶ್ವ ದಾಖಲೆಗೆ ಅರ್ಹರಾಗಿದ್ದಾರೆ ಎಂದು ಹೇಳಿದರು. ಇವರ ಶಿಲ್ಪವನ್ನು ಅನರ್ಹ ಮಾಡಿರುವುದು ಬೋಗಸ್‌. ಬೆಂಕಿಕಡ್ಡಿಗಳು ಬೆಂಕಿಕಡ್ಡಿಗಳಷ್ಟೇ. ಹಾಗಿದ್ದರೂ, ಇದನ್ನು ಕಟ್ಟುವ ಮುನ್ನ ಬೇಕಾದ ಅಗತ್ಯಗಳನ್ನು ಅವರು ರಿವ್ಯೂ ಮಾಡಿರಲಿಲ್ಲವೇ? ಮಾಡದೇ ಇದ್ದಲ್ಲಿ ಅವರ ನಿರ್ಧಾರ ಸರಿಯಾಗಿದೆ.  ವಾಣಿಜ್ಯೇತರ ಬೆಂಕಿಕಡ್ಡಿಯಿಂದ ನಿರ್ಮಿಸಲಾದ ಅತಿದೊಡ್ಡ ಐಫೆಲ್ ಟವರ್‌ಗಾಗಿ ನೀವು ದಾಖಲೆ ಪಡೆಯಬೇಕು ಎಂದು ನಾನು ಭಾವಿಸುತ್ತೇನೆ. ಇರಲಿ, ಅದೊಂದು ವಿಜಯೋತ್ಸವ. ಅದ್ಭುತ ಕೆಲಸ, ಸರ್.' ಎಂದು ಬರೆದಿದ್ದಾರೆ.

ರಾಮ ಮಂದಿರ ಉದ್ಘಾಟನೆ ಸಂಭ್ರಮ, ಐಫೆಲ್ ಟವರ್ ಬಳಿ ಪೂಜೆ, ಪ್ಯಾರಿಸ್‌ನಲ್ಲಿ ರಥ ಯಾತ್ರೆ!

click me!