ಕೊರೋನಾ ಔಷಧ ಕಂಡು ಹಿಡಿಯುವ ಪೈಪೋಟಿ ಮಧ್ಯೆ ಸಿಕ್ತು ಏಡ್ಸ್‌ಗೆ ಮದ್ದು!

By Suvarna News  |  First Published Jul 10, 2020, 2:24 PM IST

ಕೊರೋನಾತಂಕ ನಡುವೆ ಎಚ್‌ಐವಿಗೆ ಸಿಕ್ತು ಮದ್ದು| ಪ್ರಯೋಗ ನಡೆಸಿ ಸಂಪೂರ್ಣ ಗುಣಮುಖವಾದರೆ ಮಾರುಕಟಟ್ಟೆಗೆ ಔಷಧಿ| ಏಡ್ಸ್ ಪೀಡಿತರಿಗೆ ಕೊಂಚ ಸಮಾಧಾನ ಕೊಟ್ಟ ಔಷಧಿ ಸುದ್ದಿ


ನವದೆಹಲಿ(ಜು. 10): ಮಹಾಮಾರಿ ಕೊರೋನಾ ಇಡೀ ವಿಶ್ವದ ನಿದ್ದೆಗೆಡಿಸಿದೆ ದಿನೇ ದಿನೇ ಹೆಚ್ಚುತ್ತಿರುವ ಕೊರೋನಾಗೆ ಅಪಾರ ಪ್ರಾಣ ಹಾನಿ ಸಂಭವಿಸಿದೆ. ಹೀಗಿರುವಾಗ ಹೇಗಾದರೂ ಮಾಡಿ ಕೊರೋನಾವನ್ನು ನಿಯಂತ್ರಿಸಲೇಬೆಕೆಂಬ ವಿಜ್ಞಾನಿಗಳು ಇದಕ್ಕೊಂದು ಔಷಧ ಕಂಡು ಹಿಡಿಯುವಲ್ಲಿ ತಲ್ಲೀನರಾಗಿದ್ದಾರೆ. ಈಗಾಗಲೇ ಅನೇಕ ಲಸಿಕೆಗಳು ತಯಾರಾಗಿದ್ದು, ಪ್ರಯೋಗಗಳು ನಡೆಯುತ್ತಿವೆ. ಆದರೀಗ ಈ ಎಲ್ಲಾ ಪೈಪೋಟಿ ನಡುವೆ ಕೊರೋನಾಗೆ ಔ‍ಷಧಿ ಹುಡುಕುವ ವೇಳೆ ಏಡ್ಸ್‌ ಗುಣಪಡಿಸುವ ಔಷಧ ಸಿದ್ಧವಾಗಿದ್ದು, ಸದ್ಯ ಇದನ್ನು ಮಾನವರ ಮೇಲೆ ಪ್ರಯೋಗ ನಡೆಸಲಾಗುತ್ತದೆ.

ಕೊರೋನಾ ಮಧ್ಯೆ ಗುಡ್‌ ನ್ಯೂಸ್: ಇನ್ಮುಂದೆ ಒಂದೇ ವಾರದಲ್ಲಿ ಗುಣವಾಗುತ್ತೆ ಮಾರಕ ಕ್ಯಾನ್ಸರ್!

Tap to resize

Latest Videos

ಈ ಹಿಂದೆ ಎಚ್‌ಐವಿ ಪ್ರಕರಣಗಳಲ್ಲಿ ರೋಗಿಯ ದೇಹದಲ್ಲಿರುತ್ತಿದ್ದ ಎಚ್‌ಐವಿ ವೈರಸ್‌ಗಳು ಜೀವಕೋಶದೊಳಗೆ ಸೇರುತ್ತಿದ್ದವು. ಇವು ಗೋಚರಿಸದೇ ಇರುವುದರಿಂದ ಗುಣಪಡಿಸುವುದು ಅಸಾಧ್ಯವಾಗಿತ್ತು. ಸದ್ಯ ಅಭಿವೃದ್ಧಿಪಡಿಸಲಾದ ಔಷಧಿಯಿಂದ ದೇಹದಲ್ಲಿರುವ ಎಚ್‌ಐವಿ ವೈರಸ್ ಗೋಚರಿಸುತ್ತದೆ ಈ ಮೂಲಕ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಹಾಯವಾಗುತ್ತದೆ. 

ಅಭಿವೃದ್ಧಿಪಡಿಸಲಾದ ಔಷಧ ದೇದಲ್ಲಿರುವ ಎಚ್‌ಐವಿ ವೈರಸ್‌ ವಿರುದ್ಧ ಹೋರಾಡಿ ಅದನ್ನು ಹತ್ತಿಕ್ಕುತ್ತದೆ ಎಂಬುವುದು ವಿಜ್ಞಾನಿಗಳ ಮಾತಾಗಿದೆ. ಸದ್ಯ ಅಭಿವೃದ್ಧಿಪಡಿಸಲಾದ ಈ ಔಷಧ ಪ್ರಯೋಗದಲ್ಲಿ ಪಾಸಾದರೆ ಎಚ್‌ಐವಿ ರೋಗಿಗಳ ಮುಖದಲ್ಲಿ ಮಂದಹಾಸ ಮೂಡುವುದರಲ್ಲಿ ಅನುಮಾನವಿಲ್ಲ.

click me!