ಭಾರತದ ನ್ಯೂಸ್‌ ಚಾನಲ್‌ಗಳಿಗೆ ನೇಪಾಳ ನಿಷೇಧ!

By Kannadaprabha NewsFirst Published Jul 10, 2020, 9:41 AM IST
Highlights

ಚೀನಾ ಕುಮ್ಮಕ್ಕಿನಿಂದ ಭಾರತದ ಜತೆ ಇತ್ತೀಚಿನ ದಿನಗಳಲ್ಲಿ ಸಂಘರ್ಷ| ಭಾರತದ ನ್ಯೂಸ್‌ ಚಾನಲ್‌ಗಳಿಗೆ ನೇಪಾಳ ನಿಷೇಧ!| ದೂರದರ್ಶನ ಹೊರತುಪಡಿಸಿ ಭಾರತದ ಎಲ್ಲ ಖಾಸಗಿ ಸುದ್ದಿವಾಹಿನಿಗಳಿಗೆ ಹಠಾತ್‌ ನಿಷೇಧ 

ಕಾಠ್ಮಂಡು(ಜು.10): ಚೀನಾ ಕುಮ್ಮಕ್ಕಿನಿಂದ ಭಾರತದ ಜತೆ ಇತ್ತೀಚಿನ ದಿನಗಳಲ್ಲಿ ಸಂಘರ್ಷಕ್ಕೆ ಇಳಿದಿರುವ ಚೀನಾ, ಇದೀಗ ಮತ್ತೊಂದು ಕ್ಯಾತೆ ತೆಗೆದಿದೆ. ದೂರದರ್ಶನ ಹೊರತುಪಡಿಸಿ ಭಾರತದ ಎಲ್ಲ ಖಾಸಗಿ ಸುದ್ದಿವಾಹಿನಿಗಳಿಗೆ ಹಠಾತ್‌ ನಿಷೇಧ ಹೇರಿದೆ.

ಈ ಕುರಿತು ನೇಪಾಳ ಸರ್ಕಾರ ಅಧಿಕೃತ ಆದೇಶ ಹೊರಡಿಸಿಲ್ಲವಾದರೂ, ನೇಪಾಳದಲ್ಲಿ ಭಾರತದ ಚಾನಲ್‌ಗಳ ಪ್ರಸಾರ ಸ್ಥಗಿತಗೊಂಡಿದೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿದೆ. ಇದನ್ನು ನೇಪಾಳ ಮಲ್ಟಿಸಿಸಂ್ಟಆಪರೇಟರ್‌ ಸಂಘ ಕೂಡ ಖಚಿತಪಡಿಸಿದೆ.

ಭಾರತದ 3 ಭೂಭಾಗಗಳನ್ನು ಸೇರ್ಪಡೆ ಮಾಡಿಕೊಂಡು ಹೊಸ ರಾಜಕೀಯ ನಕ್ಷೆಯನ್ನು ನೇಪಾಳ ಅಂಗೀಕರಿಸುವುದರೊಂದಿಗೆ ಉಭಯ ದೇಶಗಳ ನಡುವಣ ಬಾಂಧವ್ಯಕ್ಕೆ ಧಕ್ಕೆಯಾಗಿತ್ತು. ಇದರ ಬೆನ್ನಲ್ಲೇ ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ತಲೆದಂಡಕ್ಕೆ ಪ್ರಯತ್ನಗಳು ಆರಂಭವಾಗಿದ್ದವು. ಈ ಕುರಿತು ಭಾರತದ ಮಾಧ್ಯಮಗಳೂ ವಿಸ್ತೃತ ವರದಿ ಪ್ರಸಾರ ಮಾಡಿದ್ದವು. ಹೀಗಾಗಿ ಚಾನಲ್‌ಗಳಿಗೆ ನಿಷೇಧ ಹೇರಿದೆ ಎಂದು ಹೇಳಲಾಗುತ್ತಿದೆ.

ಕಾಠ್ಮಂಡು ನಕ್ಷೆ ವಿಚಾರಕ್ಕೆ ಭಾರತ ಮತ್ತು ನೇಪಾಳದ ಮಧ್ಯೆ ತ್ವೇಷಮಯ ವಾತಾವರಣ ನಿರ್ಮಾಣವಾಗಿರುವ ಬೆನ್ನಲ್ಲೇ ದೂರದರ್ಶನ ವಾಹಿನಿಯನ್ನು ಬಿಟ್ಟು ಉಳಿದ ಎಲ್ಲಾ ಭಾರತೀಯ ಸುದ್ದಿ ವಾಹಿನಿಗಳನ್ನು ನೇಪಾಳ ಸರ್ಕಾರ ನಿಷೇಧಿಸಿದೆ ಎಂದು ಎಎನ್‌ಐ ವರದಿ ಮಾಡಿದೆ. ಆದರೆ ನಿಷೇಧ ಸಂಬಂಧ ಯಾವುದೇ ಅಧಿಕೃತ ಆದೇಶ ಪ್ರತಿ ಹೊರಬಿದ್ದಿಲ್ಲ. ಭಾರತೀಯ ಸುದ್ದಿವಾಹಿನಿಗಳ ನಿಷೇಧದ ಬಗ್ಗೆ ಮೆಗಾ ಮ್ಯಾಕ್ಸ್‌ ಟಿವಿ ಆಪರೇಟರ್‌ ಧೃಬಾ ಶರ್ಮಾ ಸುಳಿವು ನೀಡಿದ್ದಾಗಿ ವರದಿಯಾಗಿದೆ.

‘ಭಾರತದ ಮಾಧ್ಯಮಗಳು ನೇಪಾಳ ಮತ್ತು ಇಲ್ಲಿನ ಪ್ರಧಾನಿ ವಿರುದ್ಧದ ಆಧಾರ ರಹಿತ ಅಪಪ್ರಚಾರವನ್ನು ನಿಲ್ಲಿಸಬೇಕು’ ಎಂದು ನೇಪಾಳ ಉಪ ಪ್ರಧಾನಿ ನಾರಾಯಣ್‌ ಕಜಿ ಶ್ರೇಷ್ಟಅವರು ಆಕ್ರೋಶ ವ್ಯಕ್ತಪಡಿಸಿದ ಕೆಲವೇ ಗಂಟೆಗಳಲ್ಲಿ ಈ ವಿಷಯ ಹೊರಬಿದ್ದಿದೆ. ಅದಕ್ಕೂ ಮೊದಲು ಪ್ರಧಾನಮಂತ್ರಿಯ ವಿದೇಶಾಂಗ ಇಲಾಖೆಯ ಸಲಹಾಗಾರ ರಂಜನ್‌ ಭಟ್ಟಾರೈ, ‘ನೇಪಾಳ ಪ್ರಧಾನಿ ಕೆ.ಪಿ ಶರ್ಮಾ ಒಲಿ ವಿರುದ್ಧದ ಭಾರತೀಯ ಮಾಧ್ಯಮಗಳ ವರದಿ ಆಕ್ಷೇಪಾರ್ಹ’ ಎಂದು ಟ್ವೀಟ್‌ ಮಾಡಿದ್ದರು.

click me!