General Qamar Javed Bajwa: ಆರೇ ವರ್ಷದಲ್ಲಿ 460 ಕೋಟಿಯ ಒಡೆಯನಾದ ಪಾಕ್‌ ಆರ್ಮಿ ಚೀಫ್‌!

By Santosh NaikFirst Published Nov 21, 2022, 4:17 PM IST
Highlights


ಪಾಕಿಸ್ತಾನದ ಆರ್ಮಿ ಚೀಫ್‌ ಖಮರ್‌ ಜಾವೇದ್‌ ಬಜ್ವಾ ಇನ್ನು 8  ದಿನಗಳಲ್ಲಿ ನಿವೃತ್ತರಾಗಲಿದ್ದಾರೆ. ಈ ವೇಳೆ ಅವರ ಕುಟುಂಬದ ಆಸ್ತಿಯ ಬಗ್ಗೆ ವಿವರಗಳು ಪ್ರಕಟವಾಗಿದೆ. ಅಚ್ಚರಿ ಎನ್ನುವಂತೆ ಕೇವಲ ಆರು ವರ್ಷದ ಅವಧಿಯಲ್ಲಿ ಬಜ್ವಾ ಅವರ ಕುಟುಂಬ ಕೋಟ್ಯಧಿಪತಿಯಾಗಿದೆ.

ಕರಾಚಿ (ನ.21): ಕಳೆದ ಆರು ವರ್ಷದ ಅವಧಿಯಲ್ಲಿ ಪಾಕಿಸ್ತಾನದ ಆರ್ಮಿ ಚೀಫ್‌ ಜನರಲ್‌ ಖಮರ್‌ ಜಾವೇದ್‌ ಬಜ್ವಾ ಹಾಗೂ ಅವರ ಆಪ್ತ ಕುಟುಂಬ ಸದಸ್ಯರ ಆಸ್ತಿ ನಿರೀಕ್ಷೆಗೂ ಮೀರಿ ಏರಿಕೆ ಕಂಡಿದೆ ಎಂದು ವರದಿ ತಿಳಿಸಿದೆ. ಖಮರ್‌ ಜಾವೇದ್‌ ಬಜ್ವಾ ಅವರ ಅವಧಿ ಇನ್ನು 8 ದಿನಗಳಲ್ಲಿಯೇ ಮುಕ್ತಾಯ ಕಾಣಲಿರುವ ಬೆನ್ನಲ್ಲಿಯೇ ಈ ವರದಿ ಪ್ರಕಟಗೊಂಡಿದೆ. ಈ ಕುರಿತಾಗಿ ಫ್ಯಾಕ್ಟ್‌ ಫೋಕಸ್‌ ಪತ್ರಿಕೆಗೆ ಬರೆದಿರುವ ಪಾಕಿಸ್ತಾನದ ಪತ್ರಕರರ್ತ ಅಹ್ಮದ್ ನೂರಾನಿ, 'ಖಮರ್‌ ಜಾವೇದ್‌ ಬಜ್ವಾ ಅವರ ಕುಟುಂಬ ಹಾಗೂ ಕುಟುಂಬದ ಆಪ್ತರು ಹೊಸ ಉದ್ಯಮವನ್ನು ಆರಂಭಿಸಿದ್ದಾರೆ. ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಇವರು ಫಾರ್ಮ್‌ ಹೌಸ್ಅನ್ನು ಆರಂಭ ಮಾಡಿದ್ದಲ್ಲದೆ, ವಿದೇಶಗಳಲ್ಲಿ ಆಸ್ತಿಯನ್ನು ಖರೀದಿ ಮಾಡಿದ್ದಾರೆ. ಅದಲ್ಲದೆ, ಡಾಲರ್‌ಗಳ ಲೆಕ್ಕದಲ್ಲಿ ಹಣವನ್ನು ಸಂಪಾದನೆ ಮಾಡಿದ್ದಾರೆ' ಎಂದು ಬರೆದಿದ್ದಾರೆ. ಇದಕ್ಕಾಗಿ ಅವರು ಸಾಕಷ್ಟು ಡೇಟಾಗಳನ್ನು ಸಂಶೋಧನೆ ಮಾಡಿದ್ದಾರೆ. ಖಮರ್ ಜಾವೇದ್ ಬಾಜ್ವಾ ಅವರ ಪತ್ನಿ ಆಯೇಷಾ ಅಮ್ಜದ್, ಅವರ ಸೊಸೆ ಮಹ್ನೂರ್ ಸಬೀರ್ ಮತ್ತು ಇತರ ನಿಕಟ ಕುಟುಂಬ ಸದಸ್ಯರ ಆರ್ಥಿಕ ವ್ಯವಹಾರವನ್ನು ಪರಿಶೀಲನೆ ಮಾಡಿದ ಸಾಕಷ್ಟು ಡೇಟಾವನ್ನು ಇದರಲ್ಲಿ ನೀಡಲಾಗಿದೆ.

"ಆರು ವರ್ಷಗಳಲ್ಲಿ, ಎರಡೂ ಕುಟುಂಬಗಳು ಕೋಟ್ಯಧಿಪತಿಗಳಾಗಿವೆ. ಅಂತರರಾಷ್ಟ್ರೀಯ ವ್ಯಾಪಾರವನ್ನು ಕೂಡ ಪ್ರಾರಂಭ ಮಾಡಿದ್ದಾರೆ. ಸಾಕಷ್ಟು ವಿದೇಶಿ ಆಸ್ತಿಗಳನ್ನು ಖರೀದಿ ಮಾಡಿದ್ದಾರೆ. ನಂಬಿಕಸ್ತ ದೇಶಗಳಿಗೆ ತಮ್ಮ ಬಂಡವಾಳವನ್ನು ವರ್ಗಾವಣೆ ಮಾಡಲು ಪ್ರಾರಂಭ ಮಾಡಿದ್ದಾರೆ. ಕಮರ್ಷಿಯಲ್‌ ಪ್ಲಾಜಾಗಳು, ವಾಣಿಜ್ಯ ಮಳಿಗೆಗಳು, ಪಾಕಿಸ್ತಾನದ ದೊಡ್ಡ ನಗರಗಳಾದ ಇಸ್ಲಾಮಾಬಾದ್‌ ಮತ್ತು ಕರಾಚಿಯಲ್ಲಿ ಬೃಹತ್‌ ಫಾರ್ಮ್‌ಹೌಸ್‌ಗಳು, ಲಾಹೋರ್‌ನಲ್ಲಿ ದೊಡ್ಡ ಪ್ರಮಾಣದ ರಿಯಲ್‌ ಎಸ್ಟೇಟ್‌ ಕಂಪನಿಯನ್ನು ಈ ಕುಟುಂಬ ಆರಂಭಿಸಿದೆ. ಕಳೆದ ಆರು ವರ್ಷಗಳಲ್ಲಿ ಬಾಜ್ವಾ ಕುಟುಂಬವು ಪಾಕಿಸ್ತಾನದ ಒಳಗೆ ಹಾಗೂ ಹೊರಗಿನಿಂದ ಸಂಗ್ರಹ ಮಾಡಿರುವ ಆಸ್ತಿಗಳು ಮತ್ತು ವ್ಯವಹಾರಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ ಅಂದಾಜು 12.7 ಶತಕೋಟಿ ಪಾಕಿಸ್ತಾನ ರೂಪಾಯಿ (460 ಕೋಟಿ ಭಾರತೀಯ ರೂಪಾಯಿ) ಆಗಿರಬಹುದು' ಎಂದು ವರದಿಯಲ್ಲಿ ಹೇಳಲಾಗಿದೆ.

2013 ಮತ್ತು 2017 ರ ನಡುವೆ ಖಮರ್‌ ಜಾವೇದ್ ಬಜ್ವಾ ಅವರು 2013 ರ ಸಂಪತ್ತಿನ ಹೇಳಿಕೆಯನ್ನು ಮೂರು ಬಾರಿ ಪರಿಷ್ಕರಿಸಿದ್ದಾರೆ ಎಂಬುದನ್ನು ವರದಿಯು ಗಮನಿಸಿದೆ. '2013ರಲ್ಲಿ ಸಲ್ಲಿಕೆ ಮಾಡಿದ ಸಂಪತ್ತಿನ ಪರಿಷ್ಕರಣೆ ಮಾಡಿದ ದಾಖಲೆಯಲ್ಲಿ ಜನರಲ್‌ ಬಾಜ್ವಾ, ಡಿಎಚ್‌ಎ ಲಾಹೋರ್‌ನ 8ನೇ ಹಂತದಲ್ಲಿ ವಾಣಿಜ್ಯ ಆಸ್ತಿಯನ್ನು ಹೊಂದಿರುವುದಾಗಿ ಹೇಳಿದ್ದರು. ಆದರೆ, 2013ರಲ್ಲಿ ಈ ಫ್ಲ್ಯಾಟ್‌ಅನ್ನು ತಾವು ಖರೀದಿಸಿದ್ದಾಗಿ ಹೇಳಿದ್ದು, ಘೋಷಣೆ ಮಾಡಲು ಮರೆತಿದ್ದೆ ಎಂದಿದ್ದರು. ಮುಂದಿನ ನಾಲ್ಕು ವರ್ಷಗಳ ಕಾಲ ಕೂಡ ಅವರು ಈ ಆಸ್ತಿಯನ್ನು ಘೋಷಣೆ ಮಾಡುವುದನ್ನು ಮರೆತುಬಿಟ್ಟಿದ್ದರು. ಆದರೆ, 2017ರಲ್ಲಿ ಆರ್ಮಿ ಚೀಫ್‌ ಆದ ಒಂದು ವರ್ಷದ ಬಳಿಕ ಅವರಿಗೆ ಮತ್ತೆ ಈ ಆಸ್ತಿಯ ಬಗ್ಗೆ ನೆನಪಾಗಿ ಮತ್ತೊಂದು ಪರಿಷ್ಕರಣೆಯ ಸಂಪತ್ತಿನ ದಾಖಲೆ ನೀಡುತ್ತಾರೆ' ಎಂದು ವರದಿ ಹೇಳಿದೆ.

ಬಜ್ವಾ ಸೇವಾವಧಿ ವಿಸ್ತರಿಸದ ಪಾಕ್ ಸುಪ್ರೀಂಕೋರ್ಟ್: ಸೇನಾ ಕ್ರಾಂತಿ ನಕ್ಕಿ?

 

ಇನ್ನು ಬಾಜ್ವಾ ಅವರ ಸೊಸೆ ಅಹ್ನೂರ್‌ ಸಬೀರ್‌ 2018ರ  ಅಕ್ಟೋಬರ್‌ನ ಕೊನೆಯ ವಾರದ ವೇಳೆ, ತನ್ನ ಘೋಷಿತ ಆಸ್ತಿ ಸೊನ್ನೆ ಂದು ಹೇಳಿದ್ದರು. ಆದರೆ, 2018ರ ನವೆಂಬರ್‌ 2ರ ವೇಳೆಗೆ ಅಂದರೆ ಮದುವೆಯಾಗುವ ಒಂದು ವಾರಕ್ಕೂ ಮುನ್ನ ಅವರ ಆಸ್ತಿ ಒಂದು ಬಿಲಿಯನ್‌ (1271 ಮಿಲಿಯನ್‌ ಪಾಕಿಸ್ತಾನ ರೂಪಾಯಿ) ಆಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

 

ಗುಂಡು, ಉಸಿರಿರುವವರೆಗೂ ಕಾಶ್ಮೀರಕ್ಕಾಗಿ ಹೋರಾಟ: ಪಾಕ್ ಸೇನಾ ಮುಖ್ಯಸ್ಥ!

ಅದೇ ರೀತಿ 2016 ರಲ್ಲಿ ಆಯೇಶಾ ಅಮ್ಜದ್ ಅವರು ಹೆಚ್ಚಿನ ವಿವರಗಳನ್ನು ನೀಡದೆ ಇತರ ಎಂಟು ಆಸ್ತಿಗಳನ್ನು ಘೋಷಿಸಿದರು. ಇದನ್ನು  ಬಜ್ವಾ ಪಾಕ್‌ ಸೇನಾ ಮುಖ್ಯಸ್ಥರಾದಾಗಾ 2018ರ ಏಪ್ರಿಲ್ 17 ರಂದು ಪರಿಷ್ಕರಿಸಲಾಯಿತು. ಕಳೆದ ಹಣಕಾಸು ವರ್ಷದಲ್ಲಿ 2015 ರಲ್ಲಿ ಶೂನ್ಯ ಆಸ್ತಿಯನ್ನು ಹೊಂದಿರುವುದಾಗಿ ಆಯೇಶಾ ಘೋಷಿಸಿದ್ದರು, ಆದರೆ ಆರು ವರ್ಷಗಳಲ್ಲಿ ವಸತಿ ಮತ್ತು ವಾಣಿಜ್ಯ ಪ್ಲಾಟ್‌ಗಳ ಅನುಮಾನಾಸ್ಪದ ವಹಿವಾಟಿನ ನಂತರ ಆಸ್ತಿ ಶೂನ್ಯದಿಂದ 2.2 ಬಿಲಿಯನ್‌ಗೆ ಏರಿದೆ. ಬಾಜ್ವಾ ಅವರ ಸೊಸೆ ಮಹ್ನೂರ್ ಸಬೀರ್ ಅವರ ಸಂಪತ್ತಿನ ಹೆಚ್ಚಳವೂ ಆಘಾತಕಾರಿಯಾಗಿದೆ ಎಂದು ತಿಳಿಸಲಾಗಿದೆ.

click me!