ಹಿಂದೂ ದೇವರ ವೇಷಧರಿಸಿ ಶಿಲುಬೆ ನೆಕ್ಕಿದರ್‍ಯಾಪರ್ ಜೆನಿಸಿಸ್‌ ವಿವಾದ

Published : Jun 23, 2025, 04:36 AM IST
 Tommy Genesis

ಸಾರಾಂಶ

ಭಾರತೀಯ ಮೂಲದ ರ್‍ಯಾಪರ್‌ ಟಾಮಿ ಜೆನಿಸಿಸ್‌ ಹಿಂದೂ ದೇವರ ವೇಷ ಧರಿಸಿ ಅಶ್ಲೀಲವಾಗಿ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಹಿಂದೂಗಳ ಧಾರ್ಮಿಕ ಭಾವನೆಗಳ ಧಕ್ಕೆ ತಂದಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನವದೆಹಲಿ: ಭಾರತೀಯ ಮೂಲದ ರ್‍ಯಾಪರ್‌ ಟಾಮಿ ಜೆನಿಸಿಸ್‌ ಹಿಂದೂ ದೇವರ ವೇಷ ಧರಿಸಿ ಅಶ್ಲೀಲವಾಗಿ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಇದು ಹಿಂದೂಗಳ ಧಾರ್ಮಿಕ ಭಾವನೆಗಳ ಧಕ್ಕೆ ತಂದಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜೆನಿಸಿಸ್‌ ಕಾಣಿಸಿಕೊಂಡಿರುವ ಟ್ರೂ ಬ್ಲೂ ಮ್ಯೂಸಿಕ್ ಎನ್ನುವ ಮ್ಯೂಸಿಕ್‌ ವಿಡಿಯೋ ಸದ್ಯ ವಿವಾದದ ಕೇಂದ್ರವಾಗಿದೆ.

ಅದರಲ್ಲಿ ಆಕೆ ನೀಲಿ ಬಣ್ಣದ ದೇಹ, ಚಿನ್ನದ ಆಭರಣ ಮತ್ತು ಕೆಂಪು ಬಿಂದಿ ಧರಿಸಿ ಹಿಂದೂ ದೇವತೆಯಂತೆ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕ್ರಿಶ್ಚಿಯನ್ ಶಿಲುಬೆಯನ್ನು ಕೈಯಲ್ಲಿ ಹಿಡಿದಿದ್ದಾರೆ.

ಆ ಶಿಲುಬೆಯನ್ನು ನೆಕ್ಕಿ ಅದನ್ನು ತನ್ನ ಹಿಂಬದಿಯಲ್ಲಿ ಹಿಡಿದುಕೊಂಡ ಫೋಸ್‌ ನೀಡುತ್ತಿರುವುದು ವೈರಲ್ ಆಗಿದೆ. ಈ ದೃಶ್ಯಗಳು ಹಿಂದೂ ಮತ್ತು ಕ್ರೈಸ್ತರ ಭಾವನಗಳಿಗೆ ಧಕ್ಕೆಯಾಗಿದೆ ಎರಡೂ ಸಮುದಾಯದವರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2050ರ ವೇಳೆಗೆ ವಿಶ್ವದಲ್ಲಿಯೇ ಅತಿಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶವಾಗಿ ಭಾರತ

2050ರ ವೇಳೆಗೆ ವಿಶ್ವದಲ್ಲಿಯೇ ಅತಿಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶವಾಗಿ ಭಾರತ ಹೊರಹೊಮ್ಮಲಿದೆ ಎಂದು ಅಮೇರಿಕನ್ ಚಿಂತಕರ ಚಾವಡಿ ಪ್ಯೂ ಸಂಶೋಧನಾ ಕೇಂದ್ರ ವರದಿ ನೀಡಿದ ಬೆನ್ನಲ್ಲಿಯೇ ಭಾರತದಲ್ಲಿ ಇದರ ಚರ್ಚೆ ಜೋರಾಗಿದೆ. ಭಾರತವನ್ನು ಹೊರತುಪಡಿಸಿ ಉಳಿದೆಲ್ಲ ದೇಶಗಳಲ್ಲಿ ಹಿಂದೂ ಜನಸಂಖ್ಯೆ ಕಡಿಮೆಯಾಗಲಿದೆ ಎಂದು ಇದೇ ವರದಿ ತಿಳಿಸಿದೆ.

ಎಲ್ಲಾ ಧಾರ್ಮಿಕ ಗುಂಪುಗಳಲ್ಲಿ ಮುಸ್ಲಿಮರು ಅತ್ಯಂತ ಕಿರಿಯ ಸರಾಸರಿ ವಯಸ್ಸು (30) ಹೊಂದಿರುವುದರಿಂದ, ಅದು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಗುಂಪು ಎಂದು ವರದಿ ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಸ್ಲಿಂ ಮುಖಂಡ ಮೌಲಾನಾ ಶಫಿ ಸಾಧಿ, 'ಭಾರತ ಜಾತ್ಯಾತೀತ ರಾಷ್ಟ್ರ. ಇಲ್ಲಿ ನೂರು ಕೋಟಿ ಮುಸ್ಲಿಂ ಜನಸಂಖ್ಯೆ ಆದರೂ ತೊಂದರೆ ಇಲ್ಲ' ಎಂದು ಹೇಳಿದ್ದಾರೆ.

 'ಜಗತ್ತಿನಲ್ಲಿ ಇಸ್ಲಾಂ ಜನಸಂಖ್ಯೆ ಏರಿಕೆಯಾಗಿರುವುದು ಆತಂಕದ ವಿಚಾರವಲ್ಲ. ಜಗತ್ತಿನಲ್ಲಿ ಫಲವತ್ತತೆಯ ಪ್ರಮಾಣ ಕಡಿಮೆಯಾಗಿದೆ. ವಿಶ್ವಸಂಸ್ಥೆಗೆ ಆ ಆತಂಕ ಇಲ್ಲ. ಜನಸಂಖ್ಯೆ ಏರಿಕೆ ಅಭಿವೃದ್ಧಿಗೆ ಅತ್ಯಗತ್ಯ. ಚೀನಾದಲ್ಲಿ ಮೊದಲು ಒಂದು ಮಗು ಸಾಕು ಅಂತ ಕಾನೂನು ಮಾಡಿದ್ದರು. ಈಗ ಅಲ್ಲಿ ಮಕ್ಕಳನ್ನು ಹೆರುವವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡುತ್ತಿದ್ದಾರೆ. ಯಾವುದೇ ಸ್ತ್ರೀ ಆದರೂ ಹೆರಲು ಒಂಭತ್ತು ತಿಂಗಳು ಆಗಲೇ ಬೇಕು. ಮುಸ್ಲಿಮರಲ್ಲೂ ಫರ್ಟಿಲಿಟಿ ರೇಟ್ ಕಡಿಮೆ ಆಗಿದೆ' ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!
ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?