ಅಮೆರಿಕದಲ್ಲಿ ಮುನೀರ್‌ಗೆ ಪಾಕಿಗಳಿಂದಲೇ ಪ್ರತಿಭಟನೆ ಬಿಸಿ

Published : Jun 18, 2025, 06:05 AM IST
Pakistan Army Chief General Asim Munir

ಸಾರಾಂಶ

ಅಮೆರಿಕ ಪ್ರವಾಸದಲ್ಲಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ ಜ।ಅಸೀಂ ಮುನೀರ್‌ಗೆ ಪ್ರತಿಭಟನೆ ಬಿಸಿ ಎದುರಾಗಿದ್ದು, ಅಮೆರಿಕದಲ್ಲಿರುವ ಪಾಕಿಸ್ತಾನಿ ಪ್ರಜೆಗಳು, ‘ಆಸಿಮ್ ಮುನೀರ್ ಹೇಡಿ, ಸಾಮೂಹಿಕ ಕೊಲೆಗಾರ’ ಎಂದು ಟೀಕಿಸಿ ಪ್ರತಿಭಟಿಸಿದ ಘಟನೆ ನಡೆದಿದೆ.

ವಾಷಿಂಗ್ಟನ್: ಅಮೆರಿಕ ಪ್ರವಾಸದಲ್ಲಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥ ಜ।ಅಸೀಂ ಮುನೀರ್‌ಗೆ ಪ್ರತಿಭಟನೆ ಬಿಸಿ ಎದುರಾಗಿದ್ದು, ಅಮೆರಿಕದಲ್ಲಿರುವ ಪಾಕಿಸ್ತಾನಿ ಪ್ರಜೆಗಳು, ‘ಆಸಿಮ್ ಮುನೀರ್ ಹೇಡಿ, ಸಾಮೂಹಿಕ ಕೊಲೆಗಾರ’ ಎಂದು ಟೀಕಿಸಿ ಪ್ರತಿಭಟಿಸಿದ ಘಟನೆ ನಡೆದಿದೆ.

ವಾಷಿಂಗ್ಟನ್‌ನಲ್ಲಿ ಜ. ಮುನೀರ್‌ ತಂಗಿದ್ದ ಕಟ್ಟಡದ ಬಳಿ ಜಮಾಯಿಸಿದ ಪಾಕಿಸ್ತಾನಿ ಪ್ರಜೆಗಳು ಸೇನಾ ಮುಖ್ಯಸ್ಥನ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಅವರು ಹೊರಬರುತ್ತಿದ್ದಂತೆ ‘ಅಸೀಮ್ ಮುನೀರ್‌ ನೀನು ಹೇಡಿ, ನಿನಗೆ ನಾಚಿಕೆಯಾಗಬೇಕು, ಸಾಮೂಹಿಕ ಕೊಲೆಗಾರ, ಸರ್ವಾಧಿಕಾರಿ, ಪಾಕಿಸ್ತಾನಿಗಳ ಹಂತಕ’ ಎಂದು ಘೋಷಣೆ ಕೂಗಿದ್ದಾರೆ. ಪಾಕಿಸ್ತಾನ ಪ್ರಜೆಗಳು ಘೋಷಣೆ ಕೂಗುತ್ತಿರುವ ವಿಡಿಯೋ ವೈರಲ್ ಆಗಿದೆ.

ಪಾಕಿಸ್ತಾನದ ತೆಹ್ರೀಕ್- ಇ- ಇನ್ಸಾಫ್‌ ಬೆಂಬಲಿಗರು ಈ ಪ್ರತಿಭಟನೆ ನಡೆಸಿದ್ದಾರೆ ಎನ್ನಲಾಗಿದೆ. ಅಮೆರಿಕದಲ್ಲಿ ತಮ್ಮ ದೇಶದವರಿಂದಲೇ ಎದುರಾದ ಈ ಅನಿರೀಕ್ಷಿತ ಆಕ್ರೋಶಕ್ಕೆ ಜ. ಮುನೀರ್‌ ತೀವ್ರ ಮುಖಭಂಗ ಅನುಭವಿಸುವಂತಾಗಿದೆ.

ಪಾಕಿಸ್ತಾನವು ಪ್ರಸ್ತುತ ತನ್ನ ಇತಿಹಾಸದಲ್ಲಿ ಅತ್ಯಂತ ಕೆಟ್ಟ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ

ಪಾಕಿಸ್ತಾನವು ಪ್ರಸ್ತುತ ತನ್ನ ಇತಿಹಾಸದಲ್ಲಿ ಅತ್ಯಂತ ಕೆಟ್ಟ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದಕ್ಕೆ ದೊಡ್ಡ ಕಾರಣವೆಂದರೆ ಸಿಂಧೂ ಜಲ ಒಪ್ಪಂದದಡಿಯಲ್ಲಿ ಭಾರತವು ಒದಗಿಸುವ ನೀರಿನಲ್ಲಿ ಭಾರಿ ಕಡಿತಗೊಳಿಸಿರುವುದು ಎಂದು ನಂಬಲಾಗಿದೆ.

 ಸ್ಥಳೀಯ ಜಲ ತಜ್ಞರ ಪ್ರಕಾರ, ಭಾರತದಿಂದ ಹರಿಯುವ ಚೆನಾಬ್ ನದಿಯ ಹರಿವು 92% ರಷ್ಟು ಕಡಿಮೆಯಾಗಿದೆ, ಇದರಿಂದಾಗಿ ಪಂಜಾಬ್ ಮತ್ತು ಸಿಂಧ್‌ನಂತಹ ದೊಡ್ಡ ಕೃಷಿ ಪ್ರದೇಶಗಳ ಬೆಳೆಗಳು ವಿನಾಶದ ಅಂಚಿನಲ್ಲಿವೆ. ಮೇ 29ರಂದು 98,200 ಕ್ಯೂಸೆಕ್‌ನಿಂದ ಈಗ ಕೇವಲ 7,200 ಕ್ಯೂಸೆಕ್‌ಗೆ ಕುಸಿದಿದೆ, ಇದು 'ಡೆಡ್‌ ಲೆವೆಲ್'ಕ್ಕಿಂತಲೂ ಕೆಳಗಿಳಿದಿದೆ. ಇದರಿಂದ ಖಾರಿಫ್ ಬೆಳೆಗಳ 40% ಒಣಗಿದ್ದು, ಉಳಿದವು ಅಪಾಯದಲ್ಲಿವೆ.

ಆರೂವರೆ ಕೋಟಿ ರೈತರಿಂದ ಇಸ್ಲಾಬಾದ್‌ಗೆ ಪಾದಾಯಾತ್ರೆ ಎಚ್ಚರಿಕೆ:

ಚೆನಾಬ್‌ಗೆ ಅವಲಂಬಿತವಾಗಿರುವ ಪಂಜಾಬ್ ಮತ್ತು ಸಿಂಧ್‌ನ 6.5 ಕೋಟಿ ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ನೀರಿನ ಕೊರತೆ ಮತ್ತು ಬೆಳೆ ನಾಶದಿಂದ ಕಂಗಾಲಾದ ರೈತ ಸಂಘಟನೆಗಳು ಇಸ್ಲಾಮಾಬಾದ್‌ಗೆ ಪಾದಯಾತ್ರೆ ನಡೆಸುವ ಎಚ್ಚರಿಕೆ ನೀಡಿವೆ. ಸರ್ಕಾರದ ನಿಷ್ಕ್ರಿಯತೆ ಮತ್ತು ಭಾರತದ ವಿರುದ್ಧ ರಾಜತಾಂತ್ರಿಕ ಕ್ರಮಗಳ ಕೊರತೆಯನ್ನು ರೈತ ಮುಖಂಡರು ಖಂಡಿಸಿದ್ದಾರೆ.

4,500 ಬಿಲಿಯನ್ ರೂ. ನಷ್ಟ, ಆಹಾರ ಬಿಕ್ಕಟ್ಟು ಆತಂಕ:

ಕೃಷಿ ಸಂಸ್ಥೆ 'ಪಿಆರ್‌ಎ' ಮತ್ತು ನೀರಾವರಿ ಇಲಾಖೆಯ ವರದಿಗಳ ಪ್ರಕಾರ, ಮಳೆ ಕೊರತೆ ಮತ್ತು ಸಿಂಧ್ ನೀರು ಬಂದ್ ಆಗಿರುವುದರಿಂದ ಪಾಕಿಸ್ತಾನಕ್ಕೆ 4,500 ಬಿಲಿಯನ್ ರೂ. ನಷ್ಟವಾಗಿದೆ. ಅಂತರ್ಜಲ ಮಟ್ಟ ಕುಸಿದಿದ್ದು, ಸಾವಿರಾರು ಕೊಳವೆ ಬಾವಿಗಳು ಬತ್ತಿವೆ. ಮಂಗಳಾ ಅಣೆಕಟ್ಟಿನಂತಹ ಪ್ರಮುಖ ನೀರಿನ ಮೂಲಗಳು ಒಣಗಿದ್ದು, ತಜ್ಞರು ರಾಷ್ಟ್ರೀಯ ಆಹಾರ ಬಿಕ್ಕಟ್ಟಿನ ಎಚ್ಚರಿಕೆ ನೀಡಿದ್ದಾರೆ.

ಭಾರತಕ್ಕೆ ಪಾಕಿಸ್ತಾನದ ಮನವಿ

ಸಿಂಧೂ ಜಲ ಒಪ್ಪಂದದ ಪುನಃಸ್ಥಾಪನೆಗೆ ಪಾಕಿಸ್ತಾನವು ಭಾರತಕ್ಕೆ ನಾಲ್ಕು ಔಪಚಾರಿಕ ಪತ್ರಗಳನ್ನು ಕಳುಹಿಸಿದೆ, ಇವುಗಳಲ್ಲಿ ಒಂದು 'ಆಪರೇಷನ್ ಸಿಂದೂರ್' ನಂತರದ್ದು. ಈ ಪತ್ರಗಳನ್ನು ಪಾಕ್ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಸೈಯದ್ ಅಲಿ ಮುರ್ತಾಜಾ ಭಾರತದ ಜಲಶಕ್ತಿ ಸಚಿವಾಲಯಕ್ಕೆ ಕಳುಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಒಮ್ಮೆ ಕುಳಿತು ನೋಡಿ, ಮದುವೆಯಲ್ಲಿ ಆಫೀಸ್ ಕೆಲಸ ಮಾಡಿ ಟೀಕೆ ಗುರಿಯಾಗಿದ್ದ ವಧುವಿನ ಬೆಂಕಿ ಉತ್ತರ
ಐದು ವರ್ಷ ಬಳಿಕ ಖುಲಾಯಿಸಿದ ಅದೃಷ್ಠ, 24 ಲಕ್ಷ ರೂ ದುಬೈ ಲಾಟರಿ ಗೆದ್ದ ಭಾರತ ಮೂಲದ ನರ್ಸ್‌