ಕೆನಡಾದ ರಾಮಮಂದಿರ ಮೇಲೆ ಮೋದಿ ವಿರೋಧಿ, ಭಾರತ ವಿರೋಧಿ ಬರಹ

Published : Feb 16, 2023, 01:55 PM IST
 ಕೆನಡಾದ ರಾಮಮಂದಿರ ಮೇಲೆ ಮೋದಿ ವಿರೋಧಿ, ಭಾರತ ವಿರೋಧಿ ಬರಹ

ಸಾರಾಂಶ

ಕೆನಡಾ ರಾಜಧಾನಿ ಟೊರಂಟೋ ಸಮೀಪ ಮಿಸ್ಸಿಸ್ಸೋಗಾ ಪ್ರದೇಶದಲ್ಲಿ ಫೆ.13ರ ರಾತ್ರಿ ಖಲಿಸ್ತಾನಿ ಉಗ್ರರು (Khalistani militant) ಇಲ್ಲಿನ ರಾಮ ಮಂದಿರದ ಗೋಡೆಯ ಮೇಲೆ ಭಾರತ ವಿರೋಧಿ ಹಾಗೂ ಮೋದಿ ವಿರೋಧಿ ಬರಹಗಳನ್ನು ಬರೆದು ವಿರೂಪಗೊಳಿಸಿದ್ದಾರೆ.

ಟೊರಂಟೋ: ಕೆನಡಾ ರಾಜಧಾನಿ ಟೊರಂಟೋ ಸಮೀಪ ಮಿಸ್ಸಿಸ್ಸೋಗಾ ಪ್ರದೇಶದಲ್ಲಿ ಫೆ.13ರ ರಾತ್ರಿ ಖಲಿಸ್ತಾನಿ ಉಗ್ರರು (Khalistani militant) ಇಲ್ಲಿನ ರಾಮ ಮಂದಿರದ ಗೋಡೆಯ ಮೇಲೆ ಭಾರತ ವಿರೋಧಿ ಹಾಗೂ ಮೋದಿ ವಿರೋಧಿ ಬರಹಗಳನ್ನು ಬರೆದು ವಿರೂಪಗೊಳಿಸಿದ್ದಾರೆ. ಗೋಡೆಯ ಮೇಲೆ ಮೋದಿಯನ್ನು ಉಗ್ರ ಎಂದು ಘೋಷಿಸಿ, ಹಿಂದುಸ್ತಾನ್‌ ಮುರ್ದಾಬಾದ್‌ ಎಂದು ಬರೆದು ಖಲಿಸ್ತಾನಿ ಹೋರಾಟಗಾರ ಭಿಂದ್ರನ್‌ವಾಲೆ ಪರ ಬರಹಗಳನ್ನು ಗೀಚಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ದೇವಸ್ಥಾನ, ಈ ಕೃತ್ಯ ನಮಗೆ ಭಯವನ್ನುಂಟು ಮಾಡಿದೆ. ಅಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಭಾರತ ರಾಯಭಾರಿ (Indian Embassy) ಕಚೇರಿಯು ಕೃತ್ಯವನ್ನು ಖಂಡಿಸಿದ್ದು, ಈ ಹೇಯ ಕೃತ್ಯವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಕೆನಡಾ ಆಡಳಿತ (government of Canada) ಈ ಕೂಡಲೇ ಇದರ ಅಪರಾಧಿಗಳನ್ನು ಹಿಡಿದು ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದೆ. ಇತ್ತೀಚಿನ ದಿನಗಳಲ್ಲಿ ಇಂಥ ಅನೇಕ ಘಟನೆಗಳು ಪುನರವರ್ತನೆ ಆಗುತ್ತಲೇ ಇವೆ. ಕಳೆದ ಸೆಪ್ಟೆಂಬರ್‌ನಲ್ಲಿ ಸ್ವಾಮಿನಾರಾಯಣ ದೇವಸ್ಥಾನ ಹಾಗೂ ಜನವರಿಯಲ್ಲಿ ಬ್ರಾಂಪ್ಟನ್‌ನಲ್ಲಿರುವ ಹಿಂದೂ ದೇವಾಲಯವನ್ನು ಖಲಿಸ್ತಾನಿ ಉಗ್ರರು ವಿರೂಪಗೊಳಿಸಿದ್ದರು.

ಆಸ್ಪ್ರೇಲಿಯಾ ದೇಗುಲ ಮೇಲೆ ಖಲಿಸ್ತಾನಿಗಳಿಂದ ಭಾರತ ವಿರೋಧಿ ಬರಹ

ಪಾಕ್‌ನಲ್ಲಿ ನೈಸರ್ಗಿಕ ಅನಿಲ ಬೆಲೆ ಶೇ.96ರಷ್ಟು ಏರಿಕೆ

ಇಸ್ಲಾಮಾಬಾದ್‌: ಹಿಂದೆಂದೂ ಕಂಡಿರದ ಆರ್ಥಿಕ ದುಸ್ಥಿತಿಗೆ (economic crisis) ತಲುಪಿರುವ ಪಾಕಿಸ್ತಾನ ಇದೀಗ ಮತ್ತೆ ನೈಸರ್ಗಿಕ ಅನಿಲದ (natural gas)ಮೇಲಿನ ತೆರಿಗೆಯನ್ನು ಶೇ.96ರಷ್ಟು ಹೆಚ್ಚಿಸಲಾಗಿದೆ. ಅಂದರೆ ತೆರಿಗೆಯನ್ನು ಶೇ.16ರಿಂದ ಶೇ.112ಕ್ಕೆ ಏರಿಕೆ ಮಾಡಲಾಗಿದೆ, ಇದು ಕೈಗಾರಿಕೆಗಳು ಸೇರಿದಂತೆ ಸಾಮಾನ್ಯ ಜನರ ಮೇಲಿನ ಹೊರೆಯನ್ನು ಮತ್ತಷ್ಟು ಹೆಚ್ಚು ಮಾಡಲಿದೆ. ಸಾಲ ನೀಡುವುದಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್‌) ವಿಧಿಸಿರುವ ಷರತ್ತುಗಳನ್ನು ಪೂರ್ಣಗೊಳಿಸುವ ಸಲುವಾಗಿ ಪಾಕಿಸ್ತಾನ ಈ ತೆರಿಗೆ ಹೆಚ್ಚಳವನ್ನು ಕೈಗೊಂಡಿದೆ. ಇದಲ್ಲದೇ ಇತರ ಇಂಧನಗಳ ಮೇಲೆ ಹೆಚ್ಚುವರಿ ತೆರಿಗೆಗಳನ್ನು ವಿಧಿಸಲು ಸಹ ನಿರ್ಧರಿಸಿದೆ. ಜೊತೆಗೆ ವಿದ್ಯುತ್‌ಗೆ ನೀಡುತ್ತಿರುವ ಸಹಾಯಧನವನ್ನು ಸಹ ಕಡಿತಗೊಳಿಸಲು ತೀರ್ಮಾನಿಸಿದೆ.

ಪೆಟ್ರೋಲ್‌ ಬೆಲೆ 32 ರು. ಹೆಚ್ಚಳ ಸಾಧ್ಯತೆ:

ಪಾಕಿಸ್ತಾನದಲ್ಲಿ ಟೀ ಪುಡಿ ಬೆಲೆ ಕೆಜಿಗೆ 1600 ರುಪಾಯಿ

ಆರ್ಥಿಕ ಸಂಕಷ್ಟದಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು 32 ರು. ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಒಂದು ವೇಳೆ 32 ರು. ಹೆಚ್ಚಳ ಮಾಡಿದರೆ 1 ಲೀಟರ್‌ ಪೆಟ್ರೋಲ್‌ ಬೆಲೆ 282 ರು.ಗೆ ಏರಿಕೆಯಾಗಲಿದ್ದು, ಡೀಸೆಲ್‌ 295 ರು.ಗೆ ಏರಲಿದೆ. ಸೀಮೆಎಣ್ಣೆಯ ಮೇಲೂ 28 ರು. ಹೆಚ್ಚಳವಾಗಲಿದ್ದು 1 ಲೀಟರ್‌ ಬೆಲೆ 217 ರು.ಗೆ ಹೆಚ್ಚಲಿದೆ ಎಂದು ವರದಿಗಳು ತಿಳಿಸಿವೆ.

PM Security Breach: ಭದ್ರತಾ ವೈಫಲ್ಯಕ್ಕೆ ಖಲಿಸ್ತಾನಿಗಳ ಸಂಭ್ರಮ, ಸುಪ್ರೀಂನಲ್ಲಿಂದು ವಿಚಾರಣೆ

6ನೇ ಜ್ಯೋತಿರ್ಲಿಂಗ ಅಸ್ಸಾಂನಲ್ಲಿ: ಅಸ್ಸಾಂ ಸರ್ಕಾರದ ನಡೆಗೆ ಮಹಾರಾಷ್ಟ್ರದಲ್ಲಿ ಆಕ್ರೋಶ

ಮುಂಬೈ: ದ್ವಾದಶ ಜ್ಯೋತಿರ್ಲಿಂಗಗಳ ಪೈಕಿ 6ನೇ ಲಿಂಗ ಅಸ್ಸಾಂನ ಡಾಕಿನಿ ಪರ್ವತದಲ್ಲಿದೆ ಎಂದು ಅಸ್ಸಾಂ ಸರ್ಕಾರ (Assam government) ಜಾಹೀರಾತು ಪ್ರಕಟಿಸಿದೆ. ಇದು ವಿವಾದಕ್ಕೆ ಕಾರಣವಾಗಿದೆ. ಈ ಜಾಹೀರಾತಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ವಿಪಕ್ಷಗಳು ಭಾರಿ ಆಕ್ರೋಶ ವ್ಯಕ್ತಪಡಿಸಿವೆ. ಮಹಾರಾಷ್ಟರದ ಪುಣೆ ಬಳಿಯ ಭೀಮಾಶಂಕರ ಲಿಂಗವನ್ನು 6ನೇ ಜ್ಯೋತಿರ್ಲಿಂಗ ಎಂದು ಗುರುತಿಸಲಾಗುತ್ತದೆ. ಆದರೆ ಡಾಕಿನಿ ಪರ್ವತದಲ್ಲಿನ ಲಿಂಗವನ್ನು ಅಸ್ಸಾಂ ಸರ್ಕಾರ 6ನೇ ಲಿಂಗ ಎಂದು ಬಣ್ಣಿಸಿದೆ.

ಅಸ್ಸಾಂ ಸರ್ಕಾರ ಹಕ್ಕುಸಾಧನೆಗೆ ಮಹಾರಾಷ್ಟ್ರ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸಚಿನ್‌ ಸಾವಂತ್‌ (Sachin Sawant) ಪ್ರತಿಕ್ರಿಯಿಸಿದ್ದು, ಕೈಗಾರಿಕೆಗಳನ್ನು ಬಿಡಿ, ಬಿಜೆಪಿ ಸರ್ಕಾರ ಭಗವಾನ್‌ ಶಿವನನ್ನು ಸಹ ಮಹಾರಾಷ್ಟ್ರದಿಂದ ದೋಚಲು ಪ್ರಯತ್ನಿಸುತ್ತಿದೆ. ಅಸ್ಸಾಂನ ಬಿಜೆಪಿ ಸರ್ಕಾರ 6ನೇ ಜ್ಯೋತಿರ್ಲಿಂಗ ತಮ್ಮಲ್ಲಿದೆ ಎಂದು ಹೇಳಿಕೊಳ್ಳುತ್ತಿದೆ. ಈ ವಿವೇಚನಾರಹಿತವಾದ ಹಕ್ಕುಸಾಧನೆಯನ್ನು ನಾವು ಖಂಡಿಸಬೇಕು ಎಂದು ಹೇಳಿದ್ದಾರೆ.  ಅಲ್ಲದೇ ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಸಹ ಆಕ್ರೋಶ ವ್ಯಕ್ತಪಡಿಸಿದ್ದು, ‘ಬಿಜೆಪಿ ಇದೀಗ ನಮ್ಮ ಉದ್ದಿಮೆಗಳ ಜೊತೆಗೆ ಸಾಂಸ್ಕೃತಿಕ ಮತ್ತು ದೈವಿಕ ನಿಧಿಯನ್ನು ಸಹ ಕಿತ್ತುಕೊಳ್ಳುತ್ತಿದೆ. ಅಸ್ಸಾಂನ ಬಿಜೆಪಿ ಸರ್ಕಾರಕ್ಕೆ ರಾಜ್ಯದ ಬಿಜೆಪಿ ಸರ್ಕಾರ ತಕ್ಕ ಉತ್ತರ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ