ರಾಜಕುಮಾರ ವಿಲಿಯಂ ಕೋವಿಡ್‌ ಸುದ್ದಿ ರಹಸ್ಯ ಇಟ್ಟಿದ್ದ ರಾಜಮನೆತನ!

By Suvarna NewsFirst Published Nov 3, 2020, 3:37 PM IST
Highlights

 ಬ್ರಿಟನ್‌ಗೆ ಮೊದಲ ಅಲೆ ಅಪ್ಪಳಿಸಿದ ವೇಳೆಯಲ್ಲೇ ಪ್ರಧಾನಿ ಜಾನ್ಸನ್‌ ಬೋರಿಸ್‌ಗೆ ಸೋಂಕು| ರಾಜಕುಮಾರ ವಿಲಿಯಂ ಕೋವಿಡ್‌ ಸುದ್ದಿ ರಹಸ್ಯ ಇಟ್ಟಿದ್ದ ರಾಜಮನೆತನ!

ಲಂಡನ್‌(ನ.03): ಬ್ರಿಟನ್‌ ರಾಜಕುಮಾರ ವಿಲಿಯಂಗೆ ಏಪ್ರಿಲ್‌ನಲ್ಲೇ ಸೋಂಕು ತಗುಲಿದ್ದರೂ, ಆ ಸುದ್ದಿಯನ್ನು ರಹಸ್ಯವಾಗಿಡಲಾಗಿತ್ತು ಎಂದು ಲಂಡನ್‌ ಮಾಧ್ಯಮಗಳು ವರದಿ ಮಾಡಿದೆ.

ಬ್ರಿಟನ್‌ಗೆ ಮೊದಲ ಅಲೆ ಅಪ್ಪಳಿಸಿದ ವೇಳೆಯಲ್ಲೇ ಪ್ರಧಾನಿ ಜಾನ್ಸನ್‌ ಬೋರಿಸ್‌ಗೆ ಸೋಂಕು ತಾಗಿತ್ತು. ಈ ವೇಳೆಯಲ್ಲಿ ವಿಲಿಯಂ ಕೂಡ ಸೋಂಕು ಪೀಡಿತರಾಗಿದ್ದರು. ಅವರ ತಂದೆ ಪ್ರಿನ್ಸ್‌ ಚಾರ್ಲ್ಸ್ ಐಸೋಲೇಶನ್‌ಗೆ ಒಳಗಾಗಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.

ವಿಲಿಯಂಗೆ ಸ್ವಲ್ಪ ತೀವ್ರವಾಗಿಯೇ ಸೋಂಕು ಭಾಧಿಸಿತ್ತು. ಆರಮನೆಯ ವೈದ್ಯರು ಶುಶ್ರೂಷೆ ಮಾಡಿದ್ದರು. ಈ ಮಧ್ಯೆಯೂ ಅವರು ವಿವಿಧ ಸಭೆಗಳನ್ನು ನಡೆಸಿದ್ದರು. ಜನರಲ್ಲಿ ಆತಂಕ ತಪ್ಪಿಸಲು ರಾಜಮನೆತನ ಸುದ್ದಿಯನ್ನು ರಹಸ್ಯವಾಗಿ ಇಟ್ಟಿತ್ತು ಎಂದು ಹೇಳಲಾಗಿದೆ.

click me!