Twitterನಿಂದ 8 ತಿಂಗಳ ಗರ್ಭಿಣಿ ವಜಾ: ಮಹಿಳೆಯ ಟ್ವೀಟ್‌ ವೈರಲ್‌

By BK Ashwin  |  First Published Nov 5, 2022, 10:59 AM IST

ಟ್ವಿಟ್ಟರ್‌ ಉದ್ಯೋಗಿಯಾಗಿದ್ದ 8 ತಿಂಗಳ ಗರ್ಭಿಣಿ ಹಾಗೂ ಇನ್ನೊಂದು ಮಗುವಿನ ತಾಯಿ ರೇಚೆಲ್‌ ಬಾನ್‌ ಅವರನ್ನು ಸಹ ಕಿತ್ತೊಗೆಯಲಾಗಿದೆ. ಶುಕ್ರವಾರ ಇ - ಮೇಲ್‌ ಮೂಲಕ ಲೇಆಫ್‌ ನೋಟಿಸ್‌ ನೀಡುವುದಾಗಿ ಎಲಾನ್‌ ಮಸ್ಕ್‌ ಘೋಷಿಸಿದ ಕೆಲವೇ ಗಂಟೆಗಳ ಬಳಿಕ ರಾತ್ರೋರಾತ್ರಿ ತನ್ನ ಕಚೇರಿಯ ಲ್ಯಾಪ್‌ಟಾಪ್‌ ಆಕ್ಸೆಸ್‌ ಅನ್ನು ತೆಗೆದುಹಾಕಲಾಗಿತ್ತು. 


ಟ್ವಿಟ್ಟರ್‌ನ (Twitter) ನೂತನ ಅಧಿಪತಿ ಹಾಗೂ ಸಿಇಒ ಎಲಾನ್‌ ಮಸ್ಕ್‌ (Elon Musk) ಸಂಸ್ಥೆಯ ಸುಮಾರು ಅರ್ಧದಷ್ಟು ಸಿಬ್ಬಂದಿಯನ್ನು ವಜಾ ಮಾಡಿದ್ದಾರೆ.  ಟ್ವಿಟ್ಟರ್‌ ಕಂಪನಿಯನ್ನು ಸ್ವಾಧೀನಪಡಿಸಿಕೊಂಡ ಆರಂಭದಲ್ಲೇ ಭಾರತ (India) ಮೂಲದ ಸಿಇಒ ಪರಾಗ್‌ ಅಗರ್ವಾಲ್‌ (Parag Agrawal) ಹಾಗೂ ಇತರ ಉನ್ನತ ಎಕ್ಸಿಕ್ಯುಟಿವ್‌ ಅಧಿಕಾರಿಗಳನ್ನು ಸಂಸ್ಥೆಯಿಂದ ಕಿತ್ತೊಗೆದಿದ್ದಾರೆ. ಅಲ್ಲದೆ, ಟ್ವಿಟ್ಟರ್‌ ಬ್ಲೂ ಟಿಕ್‌ (Blue Tick) ಹೊಂದಲು ತಿಂಗಳಿಗೆ 8 ಡಾಲರ್‌ ಅನ್ನು ಘೋಷಿಸಿದ್ದಾರೆ ಎಲಾನ್‌ ಮಸ್ಕ್. ಈ ನಡುವೆ, ಟ್ವಿಟ್ಟರ್‌ನಿಂದ ವಜಾಗೊಂಡ (Layoff) ಹಲವು ಉದ್ಯೋಗಿಗಳು (Employees) ತಮ್ಮ ಸಂಕಷ್ಟಗಳನ್ನು ಮೈಕ್ರೋ ಬ್ಲಾಗಿಂಗ್ ತಾಲತಾಣ ಟ್ವಿಟ್ಟರ್‌ ಅತವಾ ಇತರೆ ಸಾಮಾಜಿಕ ಜಾಲತಾಣದ ಮೂಲಕ ಹೇಳಿಕೊಳ್ಳುತ್ತಿದ್ದಾರೆ. 

ಇದೇ ರೀತಿ, ಟ್ವಿಟ್ಟರ್‌ ಉದ್ಯೋಗಿಯಾಗಿದ್ದ 8 ತಿಂಗಳ ಗರ್ಭಿಣಿ ಹಾಗೂ ಇನ್ನೊಂದು ಮಗುವಿನ ತಾಯಿ ರೇಚೆಲ್‌ ಬಾನ್‌ ಅವರನ್ನು ಸಹ ಕಿತ್ತೊಗೆಯಲಾಗಿದೆ. ಶುಕ್ರವಾರ ಇ - ಮೇಲ್‌ ಮೂಲಕ ಲೇಆಫ್‌ ನೋಟಿಸ್‌ ನೀಡುವುದಾಗಿ ಎಲಾನ್‌ ಮಸ್ಕ್‌ ಘೋಷಿಸಿದ ಕೆಲವೇ ಗಂಟೆಗಳ ಬಳಿಕ ರಾತ್ರೋರಾತ್ರಿ ತನ್ನ ಕಚೇರಿಯ ಲ್ಯಾಪ್‌ಟಾಪ್‌ ಆಕ್ಸೆಸ್‌ ಅನ್ನು ತೆಗೆದುಹಾಕಲಾಗಿತ್ತು (ಕಂಪನಿಯ ವೆಬ್‌ಸೈಟ್‌ ಲಾಗಿನ್‌ ಅವಕಾಶ ತೆಗೆದುಹಾಕಲಾಗಿದೆ) ಎಂದು ಟ್ವೀಟ್‌ ಮೂಲಕವೇ ಹೇಳಿಕೊಂಡಿದ್ದಾರೆ. ಅಲ್ಲದೆ, 9 ತಿಂಗಳ ಮಗುವನ್ನು ಹೊತ್ತುಕೊಂಡಿರುವ ಫೋಟೋವನ್ನು ಸಹ ಗರ್ಬಿಣಿ ಹಾಗೂ ತಾಯಿಯೂ ಆಗಿರುವ ರೇಚೆಲ್‌ ಬಾನ್‌ ಪೋಸ್ಟ್‌ ಮಾಡಿದ್ದಾರೆ. 

Tap to resize

Latest Videos

ಇದನ್ನು ಓದಿ: Twitter ಭಾಗವಾಗಿಲ್ಲ ಎಂದು ಪರಾಗ್‌ ಅಗರ್ವಾಲ್‌ ಸ್ಪಷ್ಟನೆ : ಭಾರತೀಯ ಮೂಲದವರಿಗೆ ಸಿಗುವ ಪರಿಹಾರ ಎಷ್ಟು ಗೊತ್ತಾ..?

Last Thursday in the SF office, really the last day Twitter was Twitter. 8 months pregnant and have a 9 month old.
Just got cut off from laptop access 💙 https://t.co/rhwntoR98l pic.twitter.com/KE8gUwABlU

— rachel bonn (@RachBonn)

ಕಳೆದ ಗುರುವಾರ (ಅಮೆರಿಕದ) ಸ್ಯಾನ್‌ ಫ್ರಾನ್ಸಿಸ್ಕೋ ಕಚೇರಿಯಲ್ಲಿ ತನ್ನ ಟ್ವಿಟ್ಟರ್‌ನ ಕೊನೆಯ ದಿನ. 8 ತಿಂಗಳ ಗರ್ಭೀಣಿ ಹಾಗೂ 9 ತಿಂಗಳ ಮಗುವನ್ನು ಹೊಂದಿದ್ದೇನೆ. ಲ್ಯಾಪ್‌ಟಾಪ್‌ ಆಕ್ಸೆಸ್‌ ಅನ್ನು ಈಗಷ್ಟೇ ತೆಗೆದುಹಾಕಲಾಗಿದೆ ಎಂದು ಆಕೆ ಬರೆದುಕೊಂಡಿದ್ದಾರೆ. ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ಕಂಟೆಂಟ್‌ ಮಾರ್ಕೆಟಿಂಗ್ ಮ್ಯಾನೇಜರ್‌ ಆಗಿ ರೇಚೆಲ್‌ ಬಾನ್‌ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ. 

ಇನ್ನು, ವಜಾಗೊಂಡಿರುವ ಹಲವು ಮಾಜಿ ಉದ್ಯೋಗಿಗಳು ಟ್ವಿಟ್ಟರ್‌ ಕಂಪನಿ ವಿರುದ್ಧ ಕಾನೂನು ಮೊಕದ್ದಮೆ ಹೂಡಿದ್ದಾರೆ ಎಂದು ದಿ ಗಾರ್ಡಿಯನ್‌ ಅಂತಾರಾಷ್ಟ್ರೀಯ ಪತ್ರಿಕೆ ವರದಿ ಮಾಡಿದೆ. ಕೆಲಸದಿಂದ ತಮ್ಮನ್ನು ತೆಗೆದುಹಾಕಿರುವ ಬಗ್ಗೆ ಅಮೆರಿಕದ ಫೆಡೆರಲ್‌ ಕಾನೂನಿನ ಪ್ರಕಾರ ಸರಿಯಾದ ನೋಟಿಸ್‌ ಕೊಟ್ಟಿಲ್ಲ. ಗುರುವಾರ ತಮ್ಮ ಕಚೇರಿಯ ಅಕೌಂಟ್‌ಗಳನ್ನು ಲಾಕ್‌ ಮಾಡಿದ ನಂತರವೇ ಈ ಬಗ್ಗೆ ಅರಿವಿಗೆ ಬಂದಿದೆ ಎಂದು ಹಲವು ಮಾಜಿ ಉದ್ಯೋಗಿಗಳು ಕೇಸ್‌ ಹಾಕಿದ್ದಾರೆ. 

ಇದನ್ನೂ ಓದಿ: ಬ್ಲೂ ಟಿಕ್ ಪರಿಶೀಲಿಸಿದ Twitter ಖಾತೆಗಳಿಗೆ ತಿಂಗಳಿಗೆ 662 ರೂ. ಶುಲ್ಕ: ಎಲಾನ್‌ ಮಸ್ಕ್‌ ಘೋಷಣೆ
ಈ ಮಧ್ಯೆ, ಭಾರತದಲ್ಲೂ ಸಹ ಟ್ವಿಟ್ಟರ್‌ ಶುಕ್ರವಾರ ಹಲವು ಉದ್ಯೋಗಿಗಳನ್ನು ವಜಾಗೊಳಿಸಿದೆ. ಎಂಜಿನಿಯರ್‌ಗಳು ಹಾಗೂ ಮಾರ್ಕೆಟಿಂಗ್‌ ಮತ್ತು ಸಂವಹನ ಇಲಾಖೆಯ ಎಲ್ಲರನ್ನೂ ತೆಗೆದುಹಾಕಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಸಾಮಾಜಿಕ ಜಾಲತಾಣದ ಹೊಸ ಮಾಲೀಕ ಎಲಾನ್‌ ಮಸ್ಕ್‌ ನಿರ್ದೇಶನದ ಮೇರೆಗೆ ಜಗತ್ತಿನಾದ್ಯಂತ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಭಾಗವಾಗಿ ಭಾರತೀಯರನ್ನೂ ತೆಗೆದುಹಾಕಲಾಗಿದೆ. 

ಭಾರತದ ಎಷ್ಟು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂಬ ಬಗ್ಗೆ ಸದ್ಯ ಮಾಹಿತಿ ಲಭ್ಯವಾಗಿಲ್ಲವಾದರೂ ಟ್ವಿಟ್ಟರ್‌ ಇಂಡಿಯಾದ ಶೇ. 50 ಕ್ಕಿಂತಲೂ ಹೆಚ್ಚು ಉದ್ಯೋಗಿಗಳನ್ನು ಕಿತ್ತು ಹಾಕಲಾಗಿದೆ ಎಂದು ಮೂಲಗಳು ಹೇಳಿವೆ. ಭಾರತದಲ್ಲಿ ಟ್ವಿಟ್ಟರ್‌ನ 200ಕ್ಕೂ ಹೆಚ್ಚು ಉದ್ಯೋಗಿಗಳಿದ್ದು ಈ ಪೈಕಿ ಎಂಜಿನಿಯರಿಂಗ್‌, ಮಾರಾಟ ಮತ್ತು ಮಾರುಕಟ್ಟೆವಿಭಾಗದ ಬಹುತೇಕ ಸಿಬ್ಬಂದಿಯನ್ನು ಹುದ್ದೆಯಿಂದ ತೆಗೆದು ಹಾಕಲಾಗಿದೆ. ಜಾಗತಿಕ ಮಟ್ಟದಲ್ಲೂ ಇದೇ ಬೆಳವಣಿಗೆ ನಡೆದಿದೆ.

ಶುಕ್ರವಾರ ಬೆಳಗ್ಗೆಯಿಂದಲೇ ಸಿಬ್ಬಂದಿಗಳಿಗೆ ಮಾಹಿತಿ ರವಾನಿಸಿದ್ದ ಟ್ವಿಟ್ಟರ್‌, ನೀವು ಕಚೇರಿಗೆ ಹೊರಟಿದ್ದರೆ, ಹೋಗಬೇಡಿ. ಮನೆಗೆ ಮರಳಿ. ನೀವು ಉದ್ಯೋಗದಲ್ಲಿ ಮುಂದುವರೆಯುತ್ತೀರೋ ಇಲ್ಲವೋ ಎಂಬುದನ್ನು ಶೀಘ್ರವೇ ನಿಮಗೆ ತಿಳಿಸಲಾಗುವುದು ಎಂದು ಹೇಳಿತ್ತು. ಅದರ ಬೆನ್ನಲ್ಲೇ ಬಹುತೇಕ ಸಿಬ್ಬಂದಿಗಳಿಗೆ ಕಂಪನಿಯ ವೆಬ್‌ಸೈಟ್‌ಗೆ ಲಾಗಿನ್‌ ಆಗುವ ಅವಕಾಶವನ್ನೂ ನಿರಾಕರಿಸಲಾಗಿತ್ತು.

click me!