ನಮಗೆ ನಿಮಗೆ ಮಾತ್ರ ಅಲ್ಲ ಆನೆಗೂ ತುರಿಕೆಯಾಗುತ್ತೆ... ಇಲ್ಲೊಂದು ಆನೆ ಏನ್ ಮಾಡ್ತು ನೋಡಿ

By Anusha KbFirst Published Nov 4, 2022, 10:17 PM IST
Highlights

ಆನೆಯ ಶಕ್ತಿ ಸಾಮರ್ಥ್ಯ ಪ್ರದರ್ಶಿಸುವ ವಿಡಿಯೋವೊಂದು ವೈರಲ್ ಆಗಿದೆ. ಆದರೆ ಈ ವಿಡಿಯೋವನ್ನು ಕೊನೆಯವರೆಗೂ ನೋಡಿದರೆ ನೀವು ಬಿದ್ದು ಬಿದ್ದು ನಗುವುದಂತೂ ಪಕ್ಕಾ.

ಆನೆಗಳು ಭೂಮಿಯ ಮೇಲಿರುವ ಅತ್ಯಂತ ಶಕ್ತಿಶಾಲಿ ಪ್ರಾಣಿಗಳಲ್ಲಿ ಒಂದು. ಇವು ದೊಡ್ಡ ದೊಡ್ಡ ಗಾತ್ರದ ಮರಗಳನ್ನು ತಮ್ಮ ಸೊಂಡಿಲಿನಿಂದಲೇ ಅಲುಗಾಡಿಸಿ ಬೀಳಿಸುತ್ತವೆ. ಕೆಲ ದಿನಗಳ ಹಿಂದೆ ಆನೆಯೊಂದು ದೊಡ್ಡದಾದ ಮರದಲ್ಲಿದ್ದ ಹಲಸಿನ ಕಾಯಿಗಳನ್ನು ಸೊಂಡಿಲಿನಿಂದ ಮರವನ್ನು ಜೋರಾಗಿ ಅಲುಗಾಡಿಸುವ ಮೂಲಕ ಕುಟ್ಟಿ ಬೀಳಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಈಗ ಅಂತಹದ್ದೇ ಆನೆಯ ಶಕ್ತಿ ಸಾಮರ್ಥ್ಯ ಪ್ರದರ್ಶಿಸುವ ವಿಡಿಯೋವೊಂದು ವೈರಲ್ ಆಗಿದೆ. ಆದರೆ ಈ ವಿಡಿಯೋವನ್ನು ಕೊನೆಯವರೆಗೂ ನೋಡಿದರೆ ನೀವು ಬಿದ್ದು ಬಿದ್ದು ನಗುವುದಂತೂ ಪಕ್ಕಾ.

ಸಾಮಾನ್ಯವಾಗಿ ದೇಹದ ಭಾಗಗಳಲ್ಲಿ ತುರಿಕೆಯಾದಾಗ ಯಾರಿಗೂ ಸುಮ್ಮನಿರಲಾಗುವುದಿಲ್ಲ. ಮನುಷ್ಯರಾದರೂ ಅಷ್ಟೇ ಪ್ರಾಣಿಗಳಾದರೂ ಅಷ್ಟೇ ಜೋರಾಗಿ ಕೆರೆದುಕೊಳ್ಳುವವರೆಗೆ ಸಮಾಧಾನವಾಗದು. ಮನುಷ್ಯರಿಗಾದರೋ ತುರಿಕೆಯಾದಾಗ (itching) ಕೆರೆದುಕೊಳ್ಳಲು ಕೈಗಳಿವೆ. ಆದರೆ ಪ್ರಾಣಿಗಳ(Animal) ಕತೆ ಏನು ನಾಯಿ(Dog) ಬೆಕ್ಕುಗಳಾದರೆ(Cat) ತಮ್ಮ ಕಾಲುಗಳಲ್ಲಿ ಕೆದರಿಕೊಳ್ಳುತ್ತವೆ. ದನ ಹಸುಗಳು ಬಾಲದಲ್ಲಿ ಹೊಡೆದುಕೊಂಡು ಸಮಾಧಾನಪಡುತ್ತವೆ. ಆದರೆ ಭಾರಿ ಗಾತ್ರದ ಆನೆ ಏನು ಮಾಡಬೇಕು ಹೇಳಿ. ದೊಡ್ಡದಾದ ದೇಹವಿದ್ದರೂ. ತುರಿಕೆಯಾದಾಗ ತುರಿಸಿಕೊಳ್ಳಲು ಪುಟ್ಟ ಕೈಗಳಿಲ್ಲ. ಹಾಗಂತ ಸುಮ್ಮನೆ ಕೂರಲಂತೂ ಸಾಧ್ಯವೇ ಇಲ್ಲ. ಇದೇ ಕಾರಣಕ್ಕೆ ಇಲ್ಲೊಂದು ಆನೆ ತುರಿಕೆ ತಡೆದುಕೊಳ್ಳಲಾಗದೇ ದೊಡ್ಡದಾದ ಮರವೊಂದನ್ನು ತನ್ನ ತಲೆ ಹಾಗೂ ಸೊಂಡಿಲಿನಿಂದ ಕುಟ್ಟಿ ಬೀಳಿಸಿದೆ. ಬೀಳಿಸಿದೆ ತಡ ಮರದ ಮೇಲೆ ಕೂತು ಏನು ಮಾಡಿದೆ ಎಂಬುದನ್ನು ನೀವು ವೀಡಿಯೋದಲ್ಲೇ ನೋಡಬೇಕು. 

ಕೆಸರಿನಿಂದ ರಕ್ಷಿಸಿದ ಮಹಿಳೆಗೆ ಧನ್ಯವಾದ ಹೇಳಿದ ಮರಿ ಆನೆ: ವಿಡಿಯೋ ವೈರಲ್

OckhamsKatana ಎಂಬ ಹೆಸರಿನಿಂದ ರೆಡಿಟ್‌ನಲ್ಲಿ ಈ ವಿಡಿಯೋ ಪೋಸ್ಟ್ ಆಗಿದ್ದು, 17 ಸೆಕೆಂಡ್‌ನ ಈ ವಿಡಿಯೋದ ಕೊನೆಭಾಗ ನಿಮ್ಮನ್ನು ನಕ್ಕು ನಗಿಸುವುದರಲ್ಲಿ ಸಂಶಯವೇ ಇಲ್ಲ. ಹಳ್ಳಿಯ ಕಡೆಯ ಮಣ್ಣು ರಸ್ತೆಯ ಪಕ್ಕದಲ್ಲಿ ಇರುವ ಬೃಹತ್ ಗಾತ್ರದ ಮರವನ್ನು ತನ್ನ ಸೊಂಡಿಲು(trunk) ಹಾಗೂ ದಂತದಿಂದ(Tusker) ಹೊಡೆದು ಬೀಳಿಸಿದ ಒಂಟಿ ಸಲಗ ನಂತರ ಅದರ ಮೇಲೆ ಕುಳಿತು ದೇಹವನ್ನು ಅತ್ತಿತ್ತ ತಿರುಗಿಸುತ್ತಾ ತನ್ನ ತುರಿಕೆಯನ್ನು ನೀಗಿಸಿಕೊಳ್ಳಲು ಪ್ರಯತ್ನಿಸಿದೆ. 

ಅಂದಹಾಗೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ವರದಿ ಆಗಿಲ್ಲ. ಆದರೆ ಸಫಾರಿ ಪಾರ್ಕೊಂದರ ದೃಶ್ಯ ಇದು ಎನ್ನಲಾಗುತ್ತಿದ್ದು, ಪ್ರವಾಸಿಗರು ಈ ದೃಶ್ಯವನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ ಎನ್ನಲಾಗುತ್ತಿದೆ.  ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು, ಕೆಲವರು ಕೇವಲ ತುರಿಕೆಗಾಗಿ ಮರವನ್ನೇ ಬೀಳಿಸಿದ ಆನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಗಾಡಿ ನಿಲ್ಸ್ರೋ... ಬಸ್ ಅಡ್ಡ ಹಾಕಿ ಏರಲು ಬಂದ ಆನೆ : ವಿಡಿಯೋ ವೈರಲ್

ಸಾಮಾನ್ಯವಾಗಿ ಆನೆಗಳು ವಿಶೇಷ ಬುದ್ಧಿಶಕ್ತಿಯುಳ್ಳ ಪ್ರಾಣಿಗಳಾಗಿದ್ದು, ಭಾವಜೀವಿಯೂ ಆಗಿದ್ದು, ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಮರ್ಥವಾಗಿದೆ. ಕಾಡು ಹಾಗೂ ಪರಿಸದ ಸಮತೋಲನ ಕಾಯ್ದುಕೊಳ್ಳುವಲ್ಲಿ ಆನೆಗಳು ಪ್ರಮುಖ ಪಾತ್ರವಹಿಸುತ್ತವೆ. ಇವುಗಳು ಕುಡಿಯುವ ನೀರಿನ ಮೂಲಗಳನ್ನು ಪತ್ತೆ ಮಾಡಿ ಹೊಂಡ ಅಗೆಯುವುದು ಸೇರಿದಂತೆ ಈ ದೈತ್ಯ ಪ್ರಾಣಿಗಳು  ಪರಿಸರ ವ್ಯವಸ್ಥೆಗಳನ್ನು ಬೆಂಬಲಿಸುವ ಆಧಾರಸ್ತಂಭಗಳಾಗಿವೆ. 
 

click me!