ಢಾಕಾದ ಕಟ್ಟಡದಲ್ಲಿ ಸ್ಫೋಟ, 20 ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ!

By Suvarna NewsFirst Published Mar 7, 2023, 8:01 PM IST
Highlights

ಢಾಕಾದಲ್ಲಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದೆ. ಕಟ್ಟಡದಲ್ಲಿಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
 

ಢಾಕಾ(ಮಾ.07): ಬಾಂಗ್ಲಾದೇಶ ರಾಜಧಾನಿಯ ಕಟ್ಟಡದಲ್ಲಿ ಸಂಭವಿಸಿದ ಭೀಕರ ಸ್ಫೋಟಕ್ಕೆ 20 ಮಂದಿ ಮೃತಪಟ್ಟಿದ್ದಾರೆ. ಗಾಯಾಗಳುಗಳ ಸಂಖ್ಯೆ 100ಕ್ಕೂ ಹೆಚ್ಚಾಗಿದೆ. ಇದೀಗ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಡಾಕಾ ಬಸ್ ನಿಲ್ದಾಣದ ಬಳಿಯ ಗುಲಿಸ್ತಾನ ಬಳಿಯಲ್ಲಿನ ಕಟ್ಟದಲ್ಲಿ ಈ ಸ್ಫೋಟ ಸಂಭವಿಸಿದೆ. ಸಂಜೆ 4.50ಕ್ಕೆ ಬಾಂಬ್ ಸ್ಫೋಟ ಸಂಭವಿಸಿದೆ.ಸ್ಫೋಟಕ್ಕೆ ಕಾರಣ ಸ್ಪಷ್ಟವಾಗಿಲ್ಲ.

ಮಾಹಿತಿ ತಿಳಿಯುತ್ತಿದ್ದಂತ ರಕ್ಷಣಾ ತಂಡ, ಅಗ್ನಿಶಾಮಕ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಫೋಟದ ತೀವ್ರತೆಗೆ ಕಟ್ಟಡ ನೆಲಕ್ಕುರುಳಿದೆ. 7ಅಗ್ನಿಶಾಮಕ ವಾಹನ ಸ್ಥಳದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದೆ. ರಕ್ಷಣಾ ತಂಡಗಳು ಕ್ಷಿಪ್ರ ಕಾರ್ಯಾಚರಣೆ ನಡೆಸುತ್ತಿದೆ.  ಅಧಿಕಾರಿಗಳು ಸ್ಥಳದಲ್ಲಿದ್ದೂ ಪರಿಶೀಲನೆ ನಡೆಸುತ್ತಿದ್ದಾರೆ. 

Latest Videos

ಪಾಕ್‌ನ ಬಲೋಚಿಸ್ತಾನ ಪ್ರಾಂತ್ಯದಲ್ಲಿ ಸುಸೈಡ್ ಬಾಂಬರ್ ದಾಳಿಗೆ 9 ಪೊಲೀಸರ ಬಲಿ

ಕಟ್ಟಡದಲ್ಲಿನ ಸಿಲಿಂಡರ್ ಸ್ಫೋಟಗೊಂಡು ಈ ಘಟನೆ ಸಂಭವಿಸಿದೆಯಾ? ಅಥವಾ ಶಾರ್ಟ್ ಸರ್ಕ್ಯೂಟ್‌‌ನಿಂದ ಅವಘಡ ಸಂಭವಸಿದೆಯಾ ಅನ್ನೋ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇತ್ತ ಇದು ಬಾಂಬ್ ಸ್ಫೋಟವೇ ಅನ್ನೋ ಆಯಾಮದಲ್ಲೂ ತನಿಖೆ ಆರಂಭಗೊಂಡಿದೆ. ಭಾರಿ ಶಬ್ದ ಕೇಳಿಬಂದ ಹಿನ್ನಲೆಯಲ್ಲಿ ಸ್ಥಳೀಯರು, ಪಕ್ಕದ ಕಟ್ಟಡದಲ್ಲಿದ್ದ ಹಲವರು ಹೊರಬಂದು ನೋಡಿದ್ದಾರೆ. ಈ ವೇಳೆ ಸ್ಫೋಟ ಸಂಭವಿಸಿದ ಕಟ್ಟದ ಕುಸಿಯಲು ಆರಂಭಿಸಿದೆ. ಚೀರಾಟ, ನರಳಾಟಗಳು ಕೇಳಿಸತೊಡಗಿದೆ ಎಂದು ಘಟನೆಯನ್ನು ಹತ್ತಿರದಿಂದ ನೋಡಿದವರು ವಿವರಿಸಿದ್ದಾರೆ.

ತಕ್ಷಣವೆ ಹಲವರು ನೆರವಿಗೆ ಧಾವಿಸಿದ್ದಾರೆ. ರಕ್ಷಣಾ ತಂಡಗಳು ಧಾವಿಸಿದೆ. ಆರಂಭಿಕ ಹಂತದಲ್ಲಿ 7 ಮತೃ ದೇಹ ಹೊರತೆಗೆಯಲಾಗಿತ್ತು. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಇತ್ತ ಸಾವಿನ ಸಂಖ್ಯೆ 20ಕ್ಕೆ ಏರಿಕೆಯಾಗಿದ್ದರೆ, ಗಾಯಾಳುಗಳ ಸಂಖ್ಯೆ 100 ದಾಟಿದೆ. ಹಲವರು ಸ್ಥಿತಿ ಗಂಭೀರವಾಗಿದೆ.

ಪ್ರಧಾನಿ ಮೋದಿ ಪಾಟ್ನಾ ರ‍್ಯಾಲಿ ಬಾಂಬ್ ಸ್ಫೋಟ ಪ್ರಕರಣ, ನಾಲ್ವರು ಆರೋಪಿಗಳ ಬಂಧಿಸಿದ NIA!

ಘಟನಾ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದಾರೆ.ಮಾಹಿತಿ ತಿಳಿಯುತ್ತಿದ್ದಂತೆ 5 ಸಾವಿರಕ್ಕೂ ಹೆಚ್ಚು ಮಂದಿ ಸ್ಥಳಕ್ಕೆ ಧಾವಿಸಿ ಘಟನೆ ವೀಕ್ಷಿಸಲು ಮುಂದಾಗಿದ್ದಾರೆ. ಹಲವರು ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಣಕ್ಕೆ ಮುಂದಾಗಿದ್ದಾರೆ. ಇದರಿಂದ ರಕ್ಷಣಾ ಕಾರ್ಯಕ್ಕೆ ಅಡಚಣೆಯಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವ ಕಾರಣ ರಕ್ಷಣ ವಾಹನ, ಆ್ಯಂಬುಲೆನ್ಸ್, ಗಾಯಳುಗಳನ್ನು ಆಸ್ಪತ್ರೆ ಸಾಗಿಸಲು ಹರಸಹಾಸ ಪಡಬೇಕಾಗಿದೆ. ಇೀಗ ಪೊಲೀಸರು ಜನರನ್ನ ಚದುರಿಸುವ ಕೆಲಸ ಮಾಡಿದ್ದಾರೆ. 

click me!