ಖ್ಯಾತ ಲೇಖಕರ ಮಗಳು ತೃತೀಯ ಲಿಂಗಿ: ಮಗಳ ಮೇಲೆ ಹೆಮ್ಮೆಯಾಗುತ್ತಿದೆ ಎಂದ ಹೊಸ್ಸೇನಿ

Published : Jul 14, 2022, 02:05 PM IST
ಖ್ಯಾತ ಲೇಖಕರ ಮಗಳು ತೃತೀಯ ಲಿಂಗಿ: ಮಗಳ ಮೇಲೆ ಹೆಮ್ಮೆಯಾಗುತ್ತಿದೆ ಎಂದ ಹೊಸ್ಸೇನಿ

ಸಾರಾಂಶ

ಪ್ರಖ್ಯಾತ ಲೇಖಕ ಖಾಲೆದ್‌ ಹೊಸ್ಸೇನಿ ಮಗಳು ಹ್ಯಾರಿಸ್‌ ತೃತೀಯ ಲಿಂಗಿಯಾಗಿ ಪರಿವರ್ತನೆಯಾಗಿದ್ದಾರೆ. ಸಾಮಾನ್ಯವಾಗಿ ಪೋಷಕರು ಇದನ್ನು ಉತ್ತಮ ರೀತಿಯಿಂದ ಸ್ವೀಕರಿಸುವುದಿಲ್ಲ. ಆದರೆ ಖಾಲೆದ್‌ ಹೊಸ್ಸೇನಿ ತಾವೊಬ್ಬ ಆದರ್ಶ ವ್ಯಕ್ತಿ ಎಂಬುದನ್ನು ನಿರೂಪಿಸಿಕೊಂಡಿದ್ದಾರೆ. ಮಗಳ ನಿರ್ಧಾರ ನನಗೆ ಹೆಮ್ಮೆ ತಂದಿದೆ ಎಂದವರು ಹೇಳಿಕೊಂಡಿದ್ದಾರೆ. 

ನವದೆಹಲಿ: 'ದಿ ಕೈಟ್‌ ರನ್ನರ್‌', 'ಆಂಡ್‌ ಎ ಥೌಸಂಡ್‌ ಸ್ಪ್ಲೆಂಡಿಡ್‌ ಸನ್ಸ್‌' ಮತ್ತಿತರ ಖ್ಯಾತ ಕಾದಂಬರಿಗಳನ್ನು ಬರೆದಿರುವ ಲೇಖಕ ಖಾಲೆದ್‌ ಹೊಸ್ಸೇನಿ ತನ್ನ ಮಗಳಿಗೊಂದು ಬಹಿರಂಗ ಪತ್ರ ಬರೆದಿದ್ದಾರೆ. ಖಾಲೆದ್‌ ಹೊಸ್ಸೇನಿ ಮಗಳ ಹೆಸರು ಹ್ಯಾರಿಸ್‌ ಮತ್ತು ಆಕೆ ತೃತೀಯ ಲಿಂಗಿ. 21 ವರ್ಷದ ತನ್ನ ಮಗಳ ಧೈರ್ಯ ಮತ್ತು ಸತ್ಯವನ್ನು ಎದುರಿಸುವ ಗುಣವನ್ನು ಹೊಸ್ಸೇನಿ ಮನಸಾರೆ ಹೊಗಳಿದ್ದಾರೆ. ಸಾಮಾನ್ಯವಾಗಿ ಮಕ್ಕಳು ತೃತೀಯ ಲಿಂಗಿಯಾಗಿದ್ದರೆ ತಂದೆ ತಾಯಿ ಅವರನ್ನು ಥಳಿಸುವುದು, ಮನೆಯಿಂದ ಆಚೆ ಹಾಕುವುದು ಮತ್ತು ಸಮಾಜದಲ್ಲಿ ಬಹಿಷ್ಕಾರ ಈ ರೀತಿಯ ಘಟನೆಗಳು ನಡೆಯುತ್ತವೆ. ಆದರೆ ಖಾಲೆದ್‌ ಹೊಸ್ಸೇನಿ ತನ್ನ ಮಗಳ ಧೈರ್ಯಕ್ಕೆ ತಲೆಬಾಗಿದ್ದಾರೆ. ತಮ್ಮ ಜೀವನದಲ್ಲಿ ಎಂದೂ ಮಗಳ ಬಗ್ಗೆ ಇಷ್ಟು ಗರ್ವಪಟ್ಟಿರಲಿಲ್ಲ ಎಂದು ಅವರು ಪತ್ರದಲ್ಲಿ ಹೇಳಿಕೊಂಡಿದ್ದಾರೆ. "ನಿನ್ನೆ ನನ್ನ ಮಗಳು ಹ್ಯಾರಿಸ್‌ ತೃತೀಯ ಲಿಂಗಿಯಾಗಿ ಬದಲಾಗಿದ್ದಾಳೆ. ನನ್ನ ಜೀವನದಲ್ಲಿ ಆಕೆಯ ಬಗ್ಗೆ ಇಷ್ಟು ಹೆಮ್ಮೆ ನನಗೆ ಎಂದಿಗೂ ಆಗಿರಲಿಲ್ಲ. ಆಕೆಯ ಧೈರ್ಯ ಮತ್ತು ನೇರನಡತೆಯಿಂದ ನಮ್ಮ ಕುಟುಂಬಕ್ಕೆ ಹೆಮ್ಮೆ ತಂದಿದ್ದಾಳೆ," ಎಂದು ಹೊಸ್ಸೇನಿ ಹೇಳಿದ್ದಾರೆ. 

ಇದನ್ನೂ ಓದಿ: ಅವಳಲ್ಲ ಅವನು: ಮದುವೆಗೆ ಮನೆಯವರಿಂದ ವಿರೋಧ, ಲಿಂಗ ಬದಲಾಯಿಸಿಕೊಂಡ ಯುವತಿ

"ಲಿಂಗ ಬದಲಾವಣೆ ಸುಲಭದ ವಿಚಾರವಲ್ಲ. ಅದೆಷ್ಟು ನರಕ ಯಾತನೆ ಅನುಭವಿಸಬೇಕು ಎಂಬುದರ ಅರಿವಿದೆ. ಆದರೆ ಅವೆಲ್ಲವನ್ನೂ ಸಹಿಸಿಕೊಂಡು ನನ್ನ ಮಗಳು ತೃತೀಯ ಲಿಂಗಿಯಾಗಿ ಬದಲಾಗಿದ್ದಾಳೆ," ಎಂದು ಖಾಲೆದ್‌ ಹೊಸ್ಸೇನಿ ಟ್ವೀಟ್‌ ಮಾಡಿದ್ದಾರೆ. ತೃತೀಯ ಲಿಂಗಿಗಳನ್ನು ಮನುಷ್ಯರೆಂದೇ ಕಾಣದ ಸಮಾಜದ ಮುಂದೆ ಆದರ್ಶ ತಂದೆಯಾಗಿ ಖಾಲೆದ್‌ ಹೊಸ್ಸೇನಿ ತಮ್ಮನ್ನು ತಾವು ನಿರೂಪಿಸಿಕೊಂಡಿದ್ದಾರೆ. ಬದುಕು ಮತ್ತು ಬರಹ ಎರಡೂ ಒಂದೇ ಎಂಬ ತತ್ವವನ್ನು ಅವರ ಈ ಆದರ್ಶ ನಿರೂಪಿಸುತ್ತಿದೆ. 

ಹೊಸ್ಸೇನಿ ತನ್ನ ಮಗಳ ಜೊತೆಗಿರುವ ಹಳೆದ ಫೋಟೊವೊಂದನ್ನು ಕೂಡ ಶೇರ್‌ ಮಾಡಿಕೊಂಡಿದ್ದಾರೆ. ನನ್ನ ಮಗಳು ಸುಂದರವತಿ, ಬುದ್ಧಿಶಾಲಿ ಮತ್ತು ಧೈರ್ಯವಂತೆ. ಆಕೆ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾನವಳ ಜೊತೆ ನಿಲ್ಲುತ್ತೇನೆ. ನಮ್ಮ ಇಡೀ ಕುಟುಂಬ ಅವರ ಪರವಾಗಿ ನಿಲ್ಲುತ್ತದೆ," ಎಂದು ಟ್ವೀಟ್‌ನಲ್ಲಿ ತಿಳಿಸಿದ್ಧಾರೆ.

 

ತೃತೀಯ ಲಿಂಗಿಯಾಗಿ ಬದಲಾದ ಹ್ಯಾರಿಸ್‌ ಜರ್ನಿಯ ಬಗ್ಗೆ ಮಾತನಾಡಿದ ಹೊಸ್ಸೇನಿ, "ನನಗೆ ಹ್ಯಾರಿಸ್‌ ತೃತೀಯ ಲಿಂಗಿಯಾಗಿ ಬದಲಾಗುತ್ತಿರುವುದು ತಿಳಿದಿತ್ತು. ಕಳೆದೊಂದು ವರ್ಷದಿಂದ ನಾನು ಹತ್ತಿರದಿಂದ ಗಮನಿಸುತ್ತಿದ್ದೇನೆ. ಮಾನಸಿಕವಾಗಿ, ದೈಹಿಕವಾಗಿ, ಸಾಮಾಜಿಕವಾಗಿ, ಭಾವನಾತ್ಮಕವಾಗಿ ಪರಿವರ್ತನೆಯಾಗುವುದು ಅಸಾಮಾನ್ಯ ಸಾಧನೆ. ಅದನ್ನು ನನ್ನ ಮಗಳು ವಿವೇಕ, ತಾಳ್ಮೆ ಮತ್ತು ಧೈರ್ಯದಿಂದ ಎದುರಿಸಿ ಗೆದ್ದಿದ್ದಾಳೆ. ಇದರಿಂದ ಹೆಮ್ಮೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾಳೆ. 

ಇದನ್ನೂ ಓದಿ: ಲಿಂಗ ಬದಲಾಯಿಸಿಕೊಳ್ಳಲು ಬಂಗಾರ ಕದ್ದ ಬಾಲಕ

ಹೆಮ್ಮೆಯ ತಂದೆ ಹೊಸ್ಸೇನಿ, "ನನಗೆ ಅತೀವ ಸಂತಸವಾಗಿದೆ. ನನಗೀಗ ಒಂದಲ್ಲ ಎರಡು ಮಗಳು ಸಿಕ್ಕ ಖುಷಿಯಾಗುತ್ತಿದೆ. ಯಾವುದಕ್ಕೂ ಧೃತಿಗೆಡದ ಹ್ಯಾರಿಸ್‌ಳ ವ್ಯಕ್ತಿತ್ವ ನನಗೆ ಪ್ರೇರಣೆಯಾಗಿದೆ," ಎಂದು ಹರ್ಷ ವ್ಯಕ್ತಿಪಡಿಸಿದರು. 

ಇದನ್ನೂ ಓದಿ: ನಾನು ಅವನಲ್ಲ..ಅವಳು ಎಂದಾಗ ಎಲ್ಲರೂ ಗೇಲಿ ಮಾಡಿದರು, ಈಗ ಆಕೆ ಹೆಸರಾಂತ ಡಾಕ್ಟರ್ !

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ