ಶೀತ, ಕೆಮ್ಮಿಂದ ಬಳಲಿದ್ದ ಪೋಪ್‌ ಫ್ರಾನ್ಸಿಸ್‌ಗೆ ಕೊರೋನಾ ಇಲ್ಲ!

Published : Mar 04, 2020, 10:22 AM IST
ಶೀತ, ಕೆಮ್ಮಿಂದ ಬಳಲಿದ್ದ ಪೋಪ್‌ ಫ್ರಾನ್ಸಿಸ್‌ಗೆ ಕೊರೋನಾ ಇಲ್ಲ!

ಸಾರಾಂಶ

ಶೀತ, ಕೆಮ್ಮಿಂದ ಬಳಲಿದ್ದ ಪೋಪ್‌ ಫ್ರಾನ್ಸಿಸ್‌ಗೆ ಕೊರೋನಾ ಇಲ್ಲ|  ಶನಿವಾರ ಇದಕ್ಕಿದ್ದಂತೆ ಶೀತ, ಕೆಮ್ಮಿನಿಂದ ಬಳಲಿದ್ದ ಪೋಪ್

ವ್ಯಾಟಿಕನ್‌ ಸಿಟಿ[ಮಾ.04]: ಶೀತ, ಕಫ ಹಾಗೂ ಕೆಮ್ಮಿನಿಂದ ಬಳಲಿದ್ದ ಕ್ರೈಸ್ತರ ಪರಮೋಚ್ಛ ಗುರು ಪೋಪ್‌ ಫಾನ್ಸಿಸ್‌ ಅವರಿಗೆ ಕೊರೋನಾ ಸೋಂಕು ತಗುಲಲಿಲ್ಲ ಎಂದು ಎಂದು ಇಟಲಿಯ ಪತ್ರಿಕೆಯೊಂದು ವರದಿ ಮಾಡಿದೆ.

ಕಳೆದ ಶನಿವಾರ ಇದಕ್ಕಿದ್ದಂತೆ ಶೀತ, ಕೆಮ್ಮಿನಿಂದ ಬಳಲಿದ್ದ ಅವರು ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದರು. ಕೊರೋನಾ ಹರಡುತ್ತಿರುವ ವೇಳೆಯಲ್ಲೇ ಕಾಡಿದ್ದ ಈ ಅನಾರೋಗ್ಯ ಆತಂಕಕ್ಕೆ ಎಡೆ ಮಾಡಿ ಕೊಟ್ಟಿತ್ತು. ಆ ಬಳಿಕ ಅವರಿಗೆ ಪರೀಕ್ಷೆ ಮಾಡಲಾಗಿದ್ದು ಸೋಂಕು ಅಂಟಿಲ್ಲ ಎಂದು ಪತ್ರಿಕೆ ಹೇಳಿದೆ.

ಇಟಲಿಯಲ್ಲಿ ಈವರೆಗೆ 2000 ಮಂದಿಗೆ ಸೋಂಕು ತಾಕಿದ್ದು, 52 ಮಂದಿ ಮೃತ ಪಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಭಾರಿ ಸದ್ದು ಮಾಡ್ತಿದೆ ಪುಟಿನ್​ ತಂದ ಸೂಟ್​ಕೇಟ್: ಅದರ ಹಿಂದಿದೆ ಊಹೆಗೆ ನಿಲುಕದ ವಿಚಿತ್ರ ಸ್ಟೋರಿ! ಏನಿದೆ ಅದರಲ್ಲಿ?
ಪಾಕಿಸ್ತಾನ ಪುಸ್ತಕ ಮೇಳ: ಸೇಲ್ ಆದ ಪುಸ್ತಕ ಬರೀ 35, ಖಾಲಿಯಾದ ಬಿರಿಯಾನಿ, ಶವರ್ಮಾ ಎಷ್ಟು ಕೇಳಿದ್ರೆ ಗಾಬರಿ ಆಗ್ತೀರಿ