ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್‌: 1.1 ಲಕ್ಷ ಕೋಟಿ ಮೌಲ್ಯದ ಚಿನ್ನ ಮಾರಿ ಶಸ್ತ್ರಾಸ್ತ್ರ ಖರೀದಿಗೆ ಭಾರತದ ವೈರಿ ದೇಶ!

Published : Mar 06, 2026, 03:47 PM IST
Poland GOld

ಸಾರಾಂಶ

ಯುದ್ಧದ ಭೀತಿಯಿಂದಾಗಿ, ವಿಶ್ವದ ಪ್ರಮುಖ ಚಿನ್ನದ ದಾಸ್ತಾನುದಾರ ದೇಶವಾದ ಪೋಲೆಂಡ್ ತನ್ನ ರಕ್ಷಣಾ ಪಡೆಯನ್ನು ಬಲಪಡಿಸಲು ಮುಂದಾಗಿದೆ. ಇದಕ್ಕಾಗಿ, ಗಗನಕ್ಕೇರಿರುವ ಚಿನ್ನದ ಬೆಲೆಯ ಲಾಭ ಪಡೆದು, ಸುಮಾರು ₹1.1 ಲಕ್ಷ ಕೋಟಿ ಮೌಲ್ಯದ ಬಂಗಾರವನ್ನು ಮಾರಿ ಯುದ್ಧೋಪಕರಣಗಳನ್ನು ಖರೀದಿಸಲು ನಿರ್ಧರಿಸಿದೆ.

ಬೆಂಗಳೂರು (ಮಾ.6): ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಇದೇ ಹೊತ್ತಿನಲ್ಲಿ ಜಗತ್ತಿನ ಅತಿಹೆಚ್ಚು ಚಿನ್ನದ ದಾಸ್ತಾನು ಹೊಂದಿರುವ ದೇಶವೊಂದು ತನ್ನ ಬಂಗಾರವನ್ನು ಮಾರಿ ಯುದ್ಧೋಪಕರಣಗಳನ್ನು ಖರೀದಿಸಲು ನಿರ್ಧರಿಸಿದೆ. ಇತ್ತ ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಸಮರ ತಾರಕಕ್ಕೇರಿರುವುದು ಈ ಬೆಳವಣಿಗೆಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ.

ಕಳೆದ ಒಂದು ವಾರದಿಂದ ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ದಾಳಿ ನಡೆಸುತ್ತಿವೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಇತರ ದೇಶಗಳಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಈ ಭೀಕರ ಯುದ್ಧವು ಗಲ್ಫ್ ರಾಷ್ಟ್ರಗಳಲ್ಲಿ ಅಸ್ಥಿರತೆ ಉಂಟುಮಾಡಿದ್ದು, ಇದೇ ಕಾರಣಕ್ಕೆ ಯುರೋಪ್ ರಾಷ್ಟ್ರವಾದ ಪೋಲೆಂಡ್ ತನ್ನ ರಕ್ಷಣಾ ಪಡೆಯನ್ನು ಬಲಪಡಿಸಲು ಮುಂದಾಗಿದೆ. ಕಳೆದ ಆಪರೇಷನ್‌ ಸಿಂದೂರ್‌ ವೇಳೆ ಪೋಲೆಂಡ್‌ ದೇಶ ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದು ಭಾರತದ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ವಿಚಾರವಾಗಿ ಭಾರತ ಹಾಗೂ ಪೋಲೆಂಡ್‌ ನಡುವಿನ ವೈಮನಸ್ಯ ಕೂಡ ಹೆಚ್ಚಾಗಿತ್ತು.

ಚಿನ್ನ ಮಾರಿ ₹1.1 ಲಕ್ಷ ಕೋಟಿ ನಿಧಿ ಸಂಗ್ರಹ!

ವಿಶ್ವದಲ್ಲೇ ಅತಿಹೆಚ್ಚು ಚಿನ್ನ ಖರೀದಿಸುತ್ತಿದ್ದ ಪೋಲೆಂಡ್, ಈಗ ತನ್ನ ಮೀಸಲು ಚಿನ್ನವನ್ನು ಮಾರಾಟ ಮಾಡಲು ಉದ್ದೇಶಿಸಿದೆ. ಪೋಲೆಂಡ್‌ನ ಸೆಂಟ್ರಲ್ ಬ್ಯಾಂಕ್ ಗವರ್ನರ್ ಅದಂ ಗ್ಲಾಪಿನ್ಸ್ಕಿ (Adam Glapinski) ಈ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಸುಮಾರು 13 ಬಿಲಿಯನ್ ಡಾಲರ್ (ಅಂದಾಜು ₹1.1 ಲಕ್ಷ ಕೋಟಿ) ಮೌಲ್ಯದ ಚಿನ್ನವನ್ನು ಮಾರಿ ಆಧುನಿಕ ಶಸ್ತ್ರಾಸ್ತ್ರ, ಟ್ಯಾಂಕ್ ಮತ್ತು ಕ್ಷಿಪಣಿಗಳನ್ನು ಖರೀದಿಸುವುದು ಇವರ ಯೋಜನೆಯಾಗಿದೆ. ಪೋಲೆಂಡ್ ಸದ್ಯ 550 ಟನ್ ಚಿನ್ನದ ದಾಸ್ತಾನು ಹೊಂದಿದ್ದು, ವಿಶ್ವದ 12ನೇ ಅತಿದೊಡ್ಡ ಚಿನ್ನದ ನಿಕ್ಷೇಪ ಹೊಂದಿರುವ ದೇಶವಾಗಿದೆ.

ಯುರೋಪಿಯನ್ ಒಕ್ಕೂಟದ ಸಾಲ ಬೇಡ ಎಂದ ಪೋಲೆಂಡ್

ಶಸ್ತ್ರಾಸ್ತ್ರಗಳ ಖರೀದಿಗಾಗಿ ಯುರೋಪಿಯನ್ ಒಕ್ಕೂಟ (EU) ನೀಡುವ ಸಾಲದ ಯೋಜನೆಗೆ (SAFE) ಒಪ್ಪಿಕೊಳ್ಳುವ ಬದಲು, ಪೋಲೆಂಡ್ ತನ್ನದೇ ಆದ 'Polish SAFE 0%' ಎಂಬ ಯೋಜನೆಯನ್ನು ರೂಪಿಸಿದೆ. ಇಯು ಸಾಲದ ಮೇಲೆ ಬಡ್ಡಿ ಹೆಚ್ಚಿರುವುದು ಮತ್ತು ಅದು ಅಮೆರಿಕದೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಪೋಲೆಂಡ್ ಸರ್ಕಾರಕ್ಕಿದೆ. ಆದ್ದರಿಂದ, ಈಗಿನ ಗರಿಷ್ಠ ದರದಲ್ಲಿ ಚಿನ್ನವನ್ನು ಮಾರಿ ಲಾಭ ಮಾಡಿಕೊಳ್ಳುವುದು ಮತ್ತು ಆ ಹಣವನ್ನು ರಕ್ಷಣಾ ವಲಯಕ್ಕೆ ಬಳಸುವುದು ಪೋಲೆಂಡ್‌ನ ತಂತ್ರವಾಗಿದೆ.

ಎರಡೂ ಕಡೆ ಲಾಭದ ತಂತ್ರ (Double Win Strategy)

ಪೋಲೆಂಡ್ ಗವರ್ನರ್ ಪ್ರಕಾರ, ಈಗ ಚಿನ್ನದ ಬೆಲೆ ದಾಖಲೆ ಮಟ್ಟದಲ್ಲಿದೆ. ಈ ಸಮಯದಲ್ಲಿ ಸ್ವಲ್ಪ ಚಿನ್ನ ಮಾರಿ ಲಾಭ ಪಡೆದು, ಅದನ್ನು ಸೇನೆಗೆ ಬಳಸುವುದು ಸೂಕ್ತ. ಭವಿಷ್ಯದಲ್ಲಿ ಚಿನ್ನದ ಬೆಲೆ ಸ್ಥಿರವಾದಾಗ ಮತ್ತೆ ಅದನ್ನು ಖರೀದಿಸಿ ದಾಸ್ತಾನು ಹೆಚ್ಚಿಸಿಕೊಳ್ಳಬಹುದು ಎಂಬುದು ಅವರ ಲೆಕ್ಕಾಚಾರ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಾಂಸಕ್ಕಾಗಿ ಕತ್ತರಿಸಿದ ಬಾತುಕೋಳಿ ಹೊಟ್ಟೆಯಲ್ಲಿ ಸಿಕ್ತು ₹1.6 ಲಕ್ಷ ಮೌಲ್ಯದ ಚಿನ್ನ!
ಇರಾನ್ ಯುದ್ಧದ ಮಧ್ಯೆ ರಷ್ಯಾದ ತೈಲ ಖರೀದಿಸಲು ಭಾರತಕ್ಕೆ ಅಮೆರಿಕದಿಂದ 30 ದಿನಗಳ ವಿನಾಯಿತಿ