
ಮಾಸ್ಕೋ(ಜು.10): ಉಕ್ರೇನ್ ಮೇಲೆ ಸಮರ ಸಾರಿರುವ ರಷ್ಯಾಗೆ ಮತ್ತೊಮ್ಮೆ ಶಾಂತಿ ಮಂತ್ರದ ಬೋಧನೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, 'ಬಾಂಬ್‌ಗಳ ಭೋರ್ಗರೆತ, ಗುಂಡು ಹಾಗೂ ಬಂದೂಕಿನ ಸದ್ದುಗಳ ಮಧ್ಯೆ ಶಾಂತಿ ಸ್ಥಾಪನೆ ಸಾಧ್ಯವಿಲ್ಲ. ಯುದ್ಧಭೂಮಿಯಲ್ಲಿ ಯಾವುದೇ ವಿಷಯಗಳನ್ನು ಇತ್ಯರ್ಥ ಮಾಡಲು ಆಗವುದಿಲ್ಲ' ಎಂದು ಹೇಳಿದ್ದಾರೆ. ಈ ಮೂಲಕ ಯುದ್ಧ ನಿಲ್ಲಿಸುವಂತೆ ರಷ್ಯಾಗೆ ಪರೋಕ್ಷ ಮನವಿ ಮಾಡಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜತೆ ತಮ್ಮ ಭೇಟಿಯ 2ನೇ ಹಾಗೂ ಕೊನೆಯ ದಿನವಾದ ಮಂಗಳವಾರ ದ್ವಿಪಕ್ಷೀಯ ಮಾತುಕತೆ ನಡೆಸಿದ ಮೋದಿ 'ಮುಂದಿನ ಪೀಳಿಗೆಯ ಸುಭದ್ರ ಭವಿಷ್ಯಕ್ಕೆ ಶಾಂತಿ ಅತ್ಯಗತ್ಯವಾಗಿದೆ. ಹೀಗಾಗಿ ಶಾಂತಿ ಮರುಸ್ಥಾಪನೆ ಆಗಲು ಭಾರತವು ಸಾಧ್ಯವಾದ ಎಲ್ಲ ಸಹಕಾರವನ್ನು ನೀಡಲು ಸಿದ್ಧವಿದೆ' ಎಂದು ಹೇಳಿದರು.
ಪ್ರಧಾನಿಗೆ ಚಾಲಕನಾದ ರಷ್ಯಾ ಅಧ್ಯಕ್ಷ : ಇಲೆಕ್ಟ್ರಿಕ್ ಕಾರ್‌ನಲ್ಲಿ ಮೋದಿ ಪುಟಿನ್ ರೌಂಡ್ಸ್
ಇದೇ ವೇಳೆ, ತಾವು ರಷ್ಯಾಗೆ ಆಗಮಿಸಿದ ದಿನವೇ ಉಕ್ರೇನ್‌ನ ಮಕ್ಕಳ ಆಸ್ಪತ್ರೆಯೊಂದರ ಮೇಲೆ ನಡೆದ ಕ್ಷಿಪಣಿ ದಾಳಿಯನ್ನು ಪ್ರಸ್ತಾಪಿಸಿದ ಮೋದಿ, 'ಮಾನವೀಯತೆಯನ್ನು ನಂಬಿರುವ ಪ್ರತಿಯೊಬ್ಬರಿಗೂ ಪ್ರಾಣಹಾನಿ ಸಂಭವಿಸಿದರೆ ನೋವಾಗುತ್ತದೆ. ಅದರಲ್ಲಿಯೂ ಅಮಾಯಕ ಮಕ್ಕಳು ಹತ್ಯೆಯಾದರೆ, ಅಮಾಯಕ ಮಕ್ಕಳು ಸತ್ತರೆ ಅದು ಹೃದಯ ವಿದ್ರಾವಕವಾಗಿರುತ್ತದೆ ಮತ್ತು ತುಂಬಾ ನೋವಿನಿಂದ ಕೂಡಿರುತ್ತದೆ' ಎಂದು ಮೋದಿ ಹೇಳಿದರು.
“ನಿನ್ನೆ ನಿಮ್ಮ ಜತೆ ನಡೆದ ಭೋಜನಕೂಟದ ಸಭೆಯಲ್ಲೇ ಉಕ್ರೇನ್ ಬಗ್ಗೆನಮ್ಮ ಅಭಿಪ್ರಾಯ ಹಂಚಿಕೊಂಡೆವು. ಆಗ 'ಜಾಗತಿಕ ದಕ್ಷಿಣ ದೇಶಗಳು' (ಅಮೆರಿಕ ಹಾಗೂ ರಷ್ಯಾ ಹೊರ ತಾದ ಅಭಿವೃದ್ಧಿಶೀಲ ದೇಶಗಳು) ಹೊಂದಿರುವ ಶಾಂತಿಹಾಗೂಸುಭದ್ರತೆ ಕುರಿತ ಅಭಿಪ್ರಾಯದ ಬಗ್ಗೆ ನಾನು ತಿಳಿಸಿದೆ. ಅದಕ್ಕೆ ಪುಟಿನ್ ನೀಡಿದ ಪ್ರತಿಕ್ರಿಯೆ ಆಶಾದಾಯಕವಾಗಿತ್ತು' ಎಂದೂ ಮೋದಿ ನುಡಿದರು.
ಇದೇ ವೇಳೆ, ಉಗ್ರವಾದದ ಬಗ್ಗೆಯೂ ಪ್ರಸ್ತಾಪಿಸಿದ ಮೋದಿ, 'ಭಾರತ ಕಳೆದ 40 ವರ್ಷಗಳಿಂದ ಭಯೋತ್ಪಾದನೆಯ ಸವಾಲನ್ನು ದರಿಸುತ್ತಿದೆ. ಎಲ್ಲ ಬಗೆಯ ಉಗ್ರವಾದವನ್ನು ವು ಖಂಡಿಸುತ್ತೇವೆ' ಎಂದ ಮೋದಿ, 'ಕಳೆದ ವರ್ಷಗಳಲ್ಲಿ ಜಗತ್ತು ಹೊಸ ಸವಾಲನ್ನು ಎದುರಿಸುತ್ತಿದೆ. ಮೊದಲನೆಯದು ಕೋವಿಡ್ -19. ನಂತರದ ಸವಾಲು ವಿವಿಧ ಯುದ್ಧಗಳು' ಎಂದು ಪುಟಿನ್‌ರನ್ನು ಸೂಚ್ಯವಾಗಿ ತಿವಿದರು.
ರಷ್ಯಾ ಸಹಾಯಕ್ಕೆ ಧನ್ಯವಾದ: ಇಂಧನ ಕ್ಷೇತ್ರ ದಲ್ಲಿ ಭಾರತಕ್ಕೆ ರಷ್ಯಾ ನೀಡಿದ ಸಹಾಯವನ್ನು ಸ್ಮರಿಸಿದ ಪ್ರಧಾನಿ, 'ಜಗತ್ತು ಆಹಾರ, ಇಂಧನ ಮತ್ತು ರಸಗೊಬ್ಬರಗಳ ಕೊರತೆಯನ್ನು ಎದುರಿ ಸುತ್ತಿರುವಾಗ, ನಮ್ಮ ರೈತರಿಗೆ ಯಾವುದೇ ಸಮಸ್ಯೆಯನ್ನು ಎದುರಿಸಲು ನಾವು ಅವಕಾಶ ನೀಡಲಿಲ್ಲ ಮತ್ತು ರಷ್ಯಾದೊಂದಿಗಿನ ನಮ್ಮ ಸ್ನೇಹವು ಅದರಲ್ಲಿ ಪಾತ್ರ ವಹಿಸಿದೆ' ಎಂದು ಕೃತಜ್ಞತೆ ಸಲ್ಲಿಸಿದರು.
ಸಿಡ್ನಿಯಲ್ಲಿ ಬಾಲ್ಕನಿಯಲ್ಲೇ ಮನೆ ಮಾಸಿಕ ಬಾಡಿಗೆ 81 ಸಾವಿರ ರೂಪಾಯಿ
'ಮುಂದಿನ ದಿನಗಳಲ್ಲಿ ಭಾರತ-ರಷ್ಯಾ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿದೆ. ಇಂಧನ ಸಹಕಾರ ವಿಷಯದಲ್ಲಿ ನಮ್ಮ ಇಬ್ಬರ ಬಂಧ ಇಡೀ ಜಗತ್ತಿಗೇ ಒಳಿತು ಮಾಡಿದೆ. ಭಾರತದ ರೈತರ ಅನುಕೂಲಕ್ಕಾಗಿ ರಷ್ಯಾ ಜತೆ ಇನ್ನಷ್ಟು ಸಹಕಾರವನ್ನು ಮುಂದಿನ ದಿನದಲ್ಲಿ ಬಯಸುತ್ತೇವೆ' ಎಂದು ಪ್ರಧಾನಿ ನರೇಂದ್ರ ಮೋದಿ ನುಡಿದರು.
ಪ್ರಧಾನಿ ಮೋದಿಗೆ ರಷ್ಯಾದ ಅತ್ಯುನ್ನತ ನಾಗರಿಕ ಗೌರವ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಷ್ಯಾ ಸರ್ಕಾರ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದೆ. ಮಂಗಳವಾರ ಮಾಸ್ಕೋದಲ್ಲಿ ನಡೆದ ಕಾಠ್ಯಕ್ರಮದಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು 'ಆರ್ಡ‌್ರಆಫ್ ಸೇಂಟ್ ಅಂದ್ರೂ ದಿ ಅಪೋಸ್ಟಲ್' ಗೌರವ ಪ್ರದಾನ ಮಾಡಿ ದರು. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿ ಸಲು ಮೋದಿ ನೀಡಿದ ಅನನ್ಯ ಸೇವೆ ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ