ಔಷಧ, ಇಂಧನ ಯುಪಿಐ ಸೇರಿ ಭಾರತ 10 ಒಪ್ಪಂದ; ಇನ್ಮುಂದೆ ಈ ದೇಶದಲ್ಲಿಯೂ UPI ಸೇವೆ ಆರಂಭ

Published : Nov 21, 2024, 08:33 AM IST
ಔಷಧ, ಇಂಧನ ಯುಪಿಐ ಸೇರಿ ಭಾರತ 10 ಒಪ್ಪಂದ; ಇನ್ಮುಂದೆ ಈ ದೇಶದಲ್ಲಿಯೂ UPI ಸೇವೆ ಆರಂಭ

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಗಯಾನಾಕ್ಕೆ ಭೇಟಿ ನೀಡಿ, ಅಧ್ಯಕ್ಷ ಇರ್ಫಾನ್ ಅಲಿ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿ 10 ಒಪ್ಪಂದಗಳಿಗೆ ಸಹಿ ಹಾಕಿದರು. ಅಲ್ಲದೆ, ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸಿದರು. ಕ್ಯಾರಿಕೋಮ್ ಶೃಂಗಸಭೆಯಲ್ಲಿ ಭಾಗವಹಿಸಿದರು.

ಜಾರ್ಜ್‌ಟೌನ್ (ಗಯಾನಾ): 'ವಿವಿಧ ಕ್ಷೇತ್ರಗಳಲ್ಲಿ ಕೆರಿಬಿಯನ್ (ವೆಸ್ಟ್ ಇಂಡೀಸ್) ದೇಶಗಳೊಂದಿಗಿನ ಸಹಕಾರ ವೃದ್ಧಿಸಲು ಭಾರತ ಉತ್ಸುಕವಾಗಿದೆ ' ಎಂದು ವಿಂಡೀಸ್ ದ್ವೀಪ ಸಮೂಹದ ಗಯಾನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗಯಾನಾಗೆ ಭೇಟಿ ನೀಡಿ ಅಲ್ಲಿನ ಅಧ್ಯಕ್ಷ ಇರ್ಫಾನ್ ಅಲಿ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದಮೋದಿ, ಉಭಯ ದೇಶಗಳ ನಡುವೆ ಔಷಧ, ಇಂಧನ, ಕೆರಿಬಿಯನ್‌ನಲ್ಲಿ ಯುಪಿಐ ಡಿಜಿಟಲ್ ಪೇಮೆಂಟ್ ಸೇವೆ ಆರಂಭಸೇರಿದಂತೆ 10 ಒಪ್ಪಂದಕ್ಕೆ ಸಹಿ ಹಾಕಿದರು. ಅಲ್ಲದೆ, 2ನೇ ಭಾರತ- ಕ್ಯಾರಿಕೋಮ್ ಶೃಂಗಸಭೆಯಲ್ಲಿ ಮಾತನಾಡಿದರು. 'ಗಯಾನಾಗೆ56 ವರ್ಷ ನಂತರಭಾರತದ ಪ್ರಧಾನಿಭೇಟಿನೀಡುತ್ತಿ ದ್ದಾರೆ.

ಈ ವೇಳೆ ಏರ್ಪಟ್ಟ ಸಹಕಾರವು ಆರ್ಥಿಕ ಸಹಕಾರ. ಕೃಷಿ ಹಾಗೂ ಆಹಾರ ಭದ್ರತೆ, ಆರೋಗ್ಯ ಹಾಗೂ ಔಷಧ, ವಿಜ್ಞಾನ, ಯುಪಿಐ ಮತ್ತು ನಾವೀನ್ಯತೆ ಕ್ಷೇತ್ರಗಳಲ್ಲಿನ ಸಂಬಂಧ ಮತ್ತಷ್ಟು ಬಲಪಡಿಸಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ, ವಿಂಡೀಸ್‌ನಲ್ಲಿ ಯುಪಿಐ ಸೇವೆ ಆರಂಭವಾಗಲಿದ್ದು, ಈ ಸೇವೆ ಆರಂಭಿಸಿರುವ 7ನೇ ದೇಶ ವೆಸ್ಟ್ ಇಂಡೀಸ್ ಆಗಲಿದೆ ಎಂದು ಹರ್ಷಿಸಿದರು.

ನಿಜ್ಜರ್‌ ಹತ್ಯೆ ಸಂಚು ಮೋದಿಗೆ ತಿಳಿದಿತ್ತು: ವರದಿ
ಕೆನಡಾದ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಕೊಲೆಗೆ ಸಂಚು ನಡೆದಿತ್ತು ಎಂಬುದು ಬಾರತದ ಪ್ರಧಾನಿ ನರೇಂದ್ರ ಮೋದಿಗೆ ಗೊತ್ತಿತ್ತು ಎಂದು ಕೆನಡಾದ ‘ಗ್ಲೋಬ್‌ ಆ್ಯಂಡ್‌ ಮೇಲ್‌’ ಪತ್ರಿಕೆ ಬುಧವಾರ ವರದಿ ಮಾಡಿದೆ. ಆದರೆ ಇದಕ್ಕೆ ಕಿಡಿಕಾರಿರುವ ಭಾರತದ ವಿದೇಶಾಂಗ ಇಲಾಖೆ ಈ ಮಾಧ್ಯಮ ವರದಿಯು ‘ಸುಳ್ಳಿನ ಅಭಿಯಾನ’ ಎಂದು ತಳ್ಳಿಹಾಕಿದೆ.

ಸುದ್ದಿಗಾರರ ಜತೆ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ರಣಧೀರ್‌ ಜೈಸ್ವಾಲ್‌ ಮಾತನಾಡಿ, ‘ನಾವು ಮಾಧ್ಯಮ ವರದಿ ಬಗ್ಗೆ ಸಾಮಾನ್ಯವಾಗಿ ಪ್ರತಿಕ್ರಿಯಿಸಲ್ಲ. ಆದರೆ ಸರ್ಕಾರಿ ಮೂಲ ಉಲ್ಲೇಖಿಸಿ ಇದನ್ನು ಬರೆಯಲಾಗಿದೆ ಎಂದು ವರದಿ ಹೇಳಿದೆ. ಆದರೆ ಇದು ಸುಳ್ಳು ಅಭಿಯಾನವಾಗಿದೆ’ ಎಂದರು. ನಿಜ್ಜರ್‌ ಹತ್ಯೆಯಲ್ಲಿ ಭಾರತದ ಗೃಹ ಸಚಿವ ಅಮಿತ್‌ ಶಾ ಪಾತ್ರವಿದೆ ಎಂದು ಇತ್ತೀಚೆಗೆ ಕೆನಡಾ ಸರ್ಕಾರ ಹೇಳಿತ್ತು.

ಇದನ್ನೂ ಓದಿ: ಕರ್ನಾಟಕ ಉಪಚುನಾವಣೆ 2024: ಪಿ-ಮಾರ್ಕ್ ಸಮೀಕ್ಷೆ ಪ್ರಕಾರ ಗೆಲ್ಲುವುದು ಇವರೇ ನೋಡಿ!

ಅನಿವಾಸಿ ಭಾರತೀಯರ ಜೊತೆ ಮೋದಿ ಸಂವಾದ
ಮೂರು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬುಧವಾರ ತಮ್ಮ ಪ್ರವಾಸದ ಕೊನೆಯ ಭಾಗವಾಗಿ ಗಯಾನಗೆ ಭೇಟಿ ನೀಡಿದರು. ಈ ವೇಳೆ ಅನಿವಾಸಿ ಭಾರತೀಯರ ಜೊತೆ ಸಂವಾದ ನಡೆಸಿದರು. ಸುಮಾರು 50 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಇದೇ ಮೊದಲ ಬಾರಿಗೆ ಗಯಾನಾಗೆ ಭೇಟಿ ನೀಡಿದ್ದಾರೆ. ನೈಜಿರಿಯಾ, ಬ್ರೆಜಿಲ್‌ ಬಳಿಕ ಗಯಾನಾಗೆ ಆಗಮಿಸಿದ ಮೋದಿಯವರನ್ನು ಅನಿವಾಸಿ ಭಾರತೀಯರು ಅದ್ಧೂರಿಯಾಗಿ ಸ್ವಾಗತಿಸಿದರು. ಸಾಂಪ್ರಾದಾಯಿಕ ದಿರಿಸುಗಳನ್ನು ಧರಿಸಿ , ಕೈಯಲ್ಲಿ ತ್ರಿ ವರ್ಣ ಧ್ವಜವನ್ನು ಹಿಡಿದು, ಘೋಷಣೆಗಳನ್ನು ಕೂಗಿ ಸ್ವಾಗತಿಸಿದರು. ಬಳಿಕ ಅನಿವಾಸಿ ಭಾರತೀಯರೊಂದಿಗೆ ಸಂವಾದ ನಡೆಸಿದರು.

ಈ ಕುರಿತು ಮೋದಿ ತಮ್ಮ ಎಕ್ಸ್‌ನಲ್ಲಿ ವಿವರ ನೀಡಿದ್ದು, ‘ಗಯಾನಾದಲ್ಲಿರುವ ಭಾರತೀಯ ಸಮುದಾಯದವರ ಆತ್ಮೀಯ ಮತ್ತು ಉತ್ಸಾಭರಿತ ಸ್ವಾಗತಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ಒಬ್ಬರ ಬೇರುಗಳೊಂದಿಗೆ ಸಂಪರ್ಕದಲ್ಲಿರುವ ದೂರವು ಎಂದಿಗೂ ಅಡ್ಡಿಯಾಗುವುದಿಲ್ಲ. ಸಮುದಾಯವು ವಿವಿಧ ಕ್ಷೇತ್ರಗಳಲ್ಲಿ ಗುರುತಿಕೊಳ್ಳುವುದನ್ನು ನೋಡಲು ಸಂತೋಷವಾಗಿದೆ’ ಎಂದು ಬರೆದಿದ್ದಾರೆ. ಗಯಾನಾದಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಭಾರತೀಯರಿದ್ದಾರೆ.

ಇದನ್ನೂ ಓದಿ: 

ಇದಕ್ಕೂ ಮುನ್ನ ಮೋದಿಯವರನ್ನು ವಿಮಾನ ನಿಲ್ದಾಣದಲ್ಲಿ ಗಯಾನಾ ಅಧ್ಯಕ್ಷ ಇರ್ಫಾನ್‌ ಅಲಿ ಬರಮಾಡಿಕೊಂಡರು. ಭಾರತ ಮತ್ತು ಗಯಾನಾ ನಡುವಿನ ನಿಕಟ ಸಂಬಂಧಕ್ಕೆ ಸಾಕ್ಷಿಯಾಗಿ ‘ಜಾರ್ಜ್‌ಟೌನ್ ನಗರ ಕೀ’ ಹಸ್ತಾಂತರಿಸಲಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ ಎಂದ ಪಾಕಿಸ್ತಾನ ಸೇನೆ, ಕೋಲಾಹಲ ಶುರು