ರಷ್ಯಾ ಅಧ್ಯಕ್ಷರಿಗೆ ಕರೆ ಮಾಡಿದ ಮೋದಿ.. ಕಾರಣ ಸರಳ!

By Suvarna News  |  First Published Oct 7, 2020, 7:21 PM IST

ರಷ್ಯಾ ಅಧ್ಯಕ್ಷರಿಗೆ ಕರೆ ಮಾಡಿದ ನರೇಂದ್ರ ಮೋದಿ/ ಜನ್ಮದಿನ ಶುಭಾಶಯ ತಿಳಿಸಿದ ಪ್ರಧಾನಿ/ ಪ[ುಟಿನ್ ಸ್ವಾಗತಕ್ಕೆ ಕಾಯುತ್ತಿದ್ದೇನೆ/ ಕೊರೋನಾ ವಿರುದ್ಧ ಹೋರಾಟದಲ್ಲಿ ಉಭಯ ರಾಷ್ಟ್ರಗಳಿಂದ ಕ್ರಮ


ನವದೆಹಲಿ (ಅ. 07) ಪ್ರಧಾನಿ ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಕರೆ ಮಾಡಿ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.  ಕೊರೋನಾ ಪರಿಸ್ಥಿತಿ ಸುಧಾರಣೆಯಾದ ಮೇಲೆ  ಭಾರತಕ್ಕೆ ರಷ್ಯಾದ ಅಧ್ಯಕ್ಷ ಪುಟಿನ್ ರನ್ನು ಸ್ವಾಗತಿಸಲು ಕಾಯುತ್ತಿದ್ದೇನೆ ಎಂದು ಮೋದಿ ತಿಳಿಸಿದ್ದಾರೆ.

ಭಾರತ ಮತ್ತು ರಷ್ಯಾದ ಬಾಂಧವ್ಯವನ್ನು ಉಲ್ಲೇಖ ಮಾಡಿದ್ದಾರೆ. ಎರಡು ರಾಷ್ಟ್ರಗಳು ಒಂದಾಗಿ ಮುನ್ನಡೆಯುತ್ತಿವೆ ಎಂದು  ಹೇಳಿದ್ದಾರೆ.  ಕೊರೋನಾ ಸವಾಲುಗಳನ್ನು ಎರಡು ರಾಷ್ಟ್ರಗಳು ಒಟ್ಟಾಗಿ ಎದುರಿಸುತ್ತಿದ್ದು ಪರಿಹಾರ ಕಂಡುಕೊಳ್ಳಲು ಮುಂದಾಗಿವೆ ಎಂದು ಹೇಳಿದ್ದಾರೆ.

Tap to resize

Latest Videos

undefined

ಪ್ರಧಾನಿ ನರೇಂದ್ರ ಮೋದಿ ಮಹಾಯೋಗಗಳು

ಕೊರೋನಾಕ್ಕೆ ಲಸಿಕೆ ಕಂಡುಹಿಡಿದಿದ್ದೇವೆ ಎಂದು ರಷ್ಯಾ ಈ ಹಿಂದೆಯೇ ಹೇಳಿಕೊಂಡಿತ್ತು.   ಪುಟಿನ್ ಮಗಳ ಮೇಲೆಯೂ ಲಸಿಕೆ ಪ್ರಯೋಗ ಮಾಡಲಾಗಿತ್ತು. ಭಾರತದಲ್ಲಿಯೂ ಮೂರನೇ ಹಂತದ ಲಸಿಕೆ ಪ್ರಯೋಗ ಮಾಡಲಾಗುತ್ತದೆ.  ಭಾರತದೊಂದಿಗೆ ರಷ್ಯಾ ಕೈಜೋಡಿಸಲಿದೆ ಎಂದು ರಷ್ಯಾ ಹೇಳಿತ್ತು. 

Spoke to my friend President Vladimir Putin to greet him on his birthday today. Appreciated his immense personal contribution to strengthening the Special & Privileged Strategic Partnership between India and Russia.

— Narendra Modi (@narendramodi)
click me!