ಬಿಡುವಿರದ ಅಮೆರಿಕ ಕಾರ್ಯಕ್ರಮದಲ್ಲಿ ಡಜನ್ ಲೀಡರ್ಸ್ ಭೇಟಿಯಾಗ್ತಾರೆ ಮೋದಿ

Published : Jun 20, 2023, 12:45 PM IST
ಬಿಡುವಿರದ ಅಮೆರಿಕ ಕಾರ್ಯಕ್ರಮದಲ್ಲಿ ಡಜನ್ ಲೀಡರ್ಸ್ ಭೇಟಿಯಾಗ್ತಾರೆ ಮೋದಿ

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ 4 ದಿನ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಈಗಾಗಲೇ ಅಮೆರಿಕಾದಗೆ ತೆರಳಿರುವ ಮೋದಿ, ಈ ನಾಲ್ಕು ದಿನಗಳಲ್ಲಿ ಸಾಲು ಸಾಲು ಗಣ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ 4 ದಿನ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಈಗಾಗಲೇ ಅಮೆರಿಕಾದಗೆ ತೆರಳಿರುವ ಮೋದಿ, ಈ ನಾಲ್ಕು ದಿನಗಳಲ್ಲಿ ಸಾಲು ಸಾಲು ಗಣ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಸ್ಪೇಸ್ ಎಕ್ಸ್‌ ಸಂಸ್ಥಾಪಕ ಎಲಾನ್ ಮಸ್ಕ್ ಸೇರಿದಂತೆ   ಸಮಾಜದ  ವಿವಿಧ ಸಮುದಾಯದ ವಿವಿಧ ಕ್ಷೇತ್ರಗಳ ಉದ್ಯಮಿಗಳು ತಂತ್ರಜ್ಞರು,  ನೊಬೆಲ್ ಪ್ರಶಸ್ತಿ ವಿಜೇತರು, ಅರ್ಥಶಾಸ್ತ್ರಜ್ಞರು, ಕಲಾವಿದರು, ವಿಜ್ಞಾನಿಗಳು, ವಿದ್ವಾಂಸರು, ವಾಣಿಜ್ಯೋದ್ಯಮಿಗಳು, ಶಿಕ್ಷಣ ತಜ್ಞರು, ಆರೋಗ್ಯ ಕ್ಷೇತ್ರದ ತಜ್ಞರು ಮುಂತಾದ ಬಹುತೇಕ ಎಲ್ಲಾ ಕ್ಷೇತ್ರದ ಡಜನ್‌ಗೂ ಹೆಚ್ಚು ಗಣ್ಯರನ್ನು ಪ್ರಧಾನಿ ಭೇಟಿ ಮಾಡಲಿದ್ದಾರೆ. 

ನೀಲ್ ಡಿಗ್ರಾಸ್ ಟೈಸನ್, ಪಾಲ್ ರೋಮರ್, ನಿಕೋಲಸ್ ನಾಸಿಮ್ ತಾಲೇಬ್, ರೇ ಡಾಲಿಯೊ, ಫಾಲು ಶಾ, ಜೆಫ್ ಸ್ಮಿತ್, ಮೈಕೆಲ್ ಫ್ರೋಮನ್, ಡೇನಿಯಲ್ ರಸ್ಸೆಲ್,  ಎಲ್ಬ್ರಿಡ್ಜ್ ಕಾಲ್ಬಿ, ಡಾ ಪೀಟರ್ ಅಗ್ರೆ, ಡಾ ಸ್ಟೀಫನ್ ಕ್ಲಾಸ್ಕೊ, ಚಂದ್ರಿಕಾ ಟಂಡನ್ ಇವರುಗಳು ಪ್ರಧಾನಿ ಭೇಟಿ ಮಾಡುವ ಗಣ್ಯರ ಪಟ್ಟಿಯಲ್ಲಿದ್ದಾರೆ.  ವಿವಿಧ ಕ್ಷೇತ್ರದ ಗಣ್ಯರೊಂದಿಗೆ ಮಾತುಕತೆ ನಡೆಸುವ ಮೂಲಕ ಮೋದಿ ಅಮೆರಿಕದಲ್ಲಿನ ಬೆಳವಣಿಗೆಗಳನ್ನು ಅರ್ಥ ಮಾಡಿಕೊಳ್ಳಲು, ಭಾರತದೊಂದಿಗೆ ಸಹಕರಿಸಲು ಗಣ್ಯರನ್ನು ಆಹ್ವಾನಿಸಲು ಮಾತುಕತೆ ನಡೆಸಲಿದ್ದಾರೆ. 

ಇದು ಮೋದಿ ಅವರ ಐತಿ​ಹಾ​ಸಿಕ ಪ್ರವಾ​ಸ​ವಾ​ಗ​ಲಿದ್ದು, ಹಲವು ಪ್ರಥಮಗಳಿಗೆ ಸಾಕ್ಷಿ​ಯಾ​ಗ​ಲಿ​ದೆ. ಮೋದಿ ಅವರಿಗೆ ಅಮೆ​ರಿಕ ಸರ್ಕಾ​ರವೇ ಈ ಸಲ ಭೇಟಿಗೆ ಆಹ್ವಾನ ನೀಡಿದ್ದು, ಅಮೆ​ರಿ​ಕದಿಂದ ಆಹ್ವಾ​ನಿ​ತ​ರಾಗಿ ಅಲ್ಲಿಗೆ ಭೇಟಿ ನೀಡು​ತ್ತಿ​ರುವ ಭಾರ​ತದ ಎರಡನೇ ಪ್ರಧಾನಿ ಎಂಬ ಹೆಗ್ಗ​ಳಿ​ಕೆಗೆ ಮೋದಿ ಪಾತ್ರ​ರಾ​ಗ​ಲಿ​ದ್ದಾರೆ. ಜತೆಗೆ ಅಮೆ​ರಿಕ ಅಧ್ಯಕ್ಷ ಜೋ ಬೈಡೆನ್‌ ಅವ​ರಿಂದ ಆಹ್ವಾನ ಪಡೆದು ಅಮೆ​ರಿ​ಕಕ್ಕೆ ಭೇಟಿ ನೀಡು​ತ್ತಿ​ರುವ 3ನೇ ವಿಶ್ವ ನಾಯಕ ಎನ್ನಿ​ಸಿ​ಕೊ​ಳ್ಳ​ಲಿ​ದ್ದಾರೆ. 

ಇಂದಿ​ನಿಂದ ಪ್ರಧಾನಿ ಮೋದಿ ಐತಿಹಾಸಿಕ ಅಮೆರಿಕ ಪ್ರವಾಸ: ಏನೇನು ಕಾರ್ಯಕ್ರಮ?

ಇಂದು ನ್ಯೂಯಾರ್ಕ್‌ಗೆ ತೆರಳಿರುವ ಮೋದಿ ಅವರು, ನಾಳೆ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ವಾಷಿಂಗ್ಟನ್‌ ಡಿಸಿಗೆ ತೆರಳಲಿದ್ದಾರೆ. ಜೂ.22ರಂದು ಅಲ್ಲಿ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹಾಗೂ ಅವರ ಪತ್ನಿ ಜಿಲ್‌ ಬೈಡೆನ್‌ ಅವರು ಸ್ವಾಗತಿಸಲಿದ್ದಾರೆ. ಈ ವೇಳೆ ಮೋದಿ ಅವರು ಅಮೆರಿಕ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅಮೆರಿಕ ಸರ್ಕಾರದ ಅಧಿಕೃತ ಔತಣಕೂಟದಲ್ಲೂ ಪಾಲ್ಗೊಳ್ಳಲಿದ್ದಾರೆ. ಅದೇ ದಿನ ಅಮೆರಿಕ ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಜೂ.23ರಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಮತ್ತು ಗೃಹ ಸಚಿವ ಆ್ಯಂಟನಿ ಬ್ಲಿಂಕನ್‌ ಆಯೋಜಿಸಿರುವ ಔತಣ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಅಧಿಕೃತ ಕಾರ್ಯಕ್ರಮಗಳ ಜೊತೆಗೆ ವಿವಿಧ ಕಂಪನಿಗಳ ಸಿಇಒ, ವೃತ್ತಿಪರರು ಮತ್ತು ಗಣ್ಯರನ್ನು ಮೋದಿ ಭೇಟಿ ಮಾಡಲಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದ್ಯಪ್ರಿಯರಿಗೆ ಶಾಕ್.. ಮಧ್ಯಾಹ್ನ 2 ರಿಂದ 5 ರವರೆಗೆ ಮದ್ಯ ಮಾರಾಟ ಬಂದ್: ಏನಿದು ಥಾಯ್‌ ವಿಚಿತ್ರ ನಿಯಮ!
ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ