ಕ್ವಾಡ್‌ ಶೃಂಗಸಭೆ ರದ್ದಾದ್ರೂ ಆಸ್ಪ್ರೇಲಿಯಾಗೆ ಪ್ರಧಾನಿ ಮೋದಿ ಭೇಟಿ; ಜೋ ಬೈಡೆನ್‌ ಭೇಟಿಯಾಗ್ತಾರಾ ಮೋದಿ?

By Kannadaprabha News  |  First Published May 18, 2023, 10:01 AM IST

ಮೇ 24ರಂದು ಕ್ವಾಡ್‌ ಶೃಂಗಸಭೆ ನಡೆಯಬೇಕಿತ್ತು. ಆದರೆ ಜೋ ಬೈಡೆನ್‌ ಪ್ರವಾಸ ರದ್ದಾದ ಕಾರಣ ಸಭೆಯನ್ನು ರದ್ದು ಮಾಡಲಾಯಿತು. ಆದರೆ ಪ್ರಧಾನಿ ಮೋದಿ ಅವರ 3 ದೇಶಗಳ ವಿದೇಶ ಪ್ರವಾಸ ಮೇ 19ರಿಂದ ಆರಂಭವಾಗಿಲಿದ್ದು, ಮೇ 22 ಮತ್ತು 23ರಂದು ಪ್ರಧಾನಿ ಆಸ್ಪ್ರೇಲಿಯಾಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.


ಮೆಲ್ಬರ್ನ್‌ (ಮೇ 18, 2023): ಮುಂದಿನ ವಾರ ಆಸ್ಪ್ರೇಲಿಯಾದಲ್ಲಿ ನಡೆಯಬೇಕಿದ್ದ ಕ್ವಾಡ್‌ ಶೃಂಗಸಭೆ ರದ್ದಾದರೂ ಸಹ ಪ್ರಧಾನಿ ನರೇಂದ್ರ ಮೋದಿ ಅವರು ಮೇ 22 ಹಾಗೂ 23ರಂದು ಆಸ್ಪ್ರೇಲಿಯಾಗೆ ಭೇಟಿ ನೀಡಲಿದ್ದಾರೆ ಎಂದು ಅಲ್ಲಿನ ಪ್ರಧಾನಿ ಆ್ಯಂಟನಿ ಆಲ್ಬನೀಸ್‌ ಅವರು ಬುಧವಾರ ಹೇಳಿದ್ದಾರೆ.

‘ಪ್ರಧಾನಿ ಮೋದಿ ಅವರು ಮುಂದಿನ ವಾರ ಸಿಡ್ನಿಗೆ ಭೇಟಿ ನೀಡಲಿದ್ದು ನನ್ನೊಂದಿಗೆ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೇ ಆಸ್ಪ್ರೇಲಿಯಾ ಮತ್ತು ಭಾರತದ ವ್ಯಾಪಾರ ವೃದ್ಧಿಯ ಕುರಿತಾಗಿಯೂ ಅವರು ಮಾತುಕತೆ ನಡೆಸಲಿದ್ದಾರೆ. ಅವರನ್ನು ಸ್ವಾಗತಿಸಲು ನಾನು ಕಾಯುತ್ತಿದ್ದೇನೆ’ ಎಂದು ಆ್ಯಂಟನಿ ಆಲ್ಬನೀಸ್‌ ಹೇಳಿದರು.

Tap to resize

Latest Videos

ಇದನ್ನು ಓದಿ: ಮೇ 19ರಿಂದ 6 ದಿನ ಮೋದಿ ವಿದೇಶ ಪ್ರವಾಸ: 71 ಸಾವಿರ ಜನರಿಗೆ ಉದ್ಯೋಗ ಪತ್ರ ವಿತರಣೆ

ಮೇ 24ರಂದು ಕ್ವಾಡ್‌ ಶೃಂಗಸಭೆ ನಡೆಯಬೇಕಿತ್ತು. ಆದರೆ ಜೋ ಬೈಡೆನ್‌ ಪ್ರವಾಸ ರದ್ದಾದ ಕಾರಣ ಸಭೆಯನ್ನು ರದ್ದು ಮಾಡಲಾಯಿತು. ಆದರೆ ಪ್ರಧಾನಿ ಮೋದಿ ಅವರ 3 ದೇಶಗಳ ವಿದೇಶ ಪ್ರವಾಸ ಮೇ 19ರಿಂದ ಆರಂಭವಾಗಿಲಿದ್ದು, ಮೇ 22 ಮತ್ತು 23ರಂದು ಪ್ರಧಾನಿ ಆಸ್ಪ್ರೇಲಿಯಾಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಜೋ ಬೈಡೆನ್‌ ಭೇಟಿ ರದ್ದು ಕಾರಣ ಕ್ವಾಡ್‌ ಶೃಂಗಸಭೆಯೇ ರದ್ದು
ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಆಸ್ಪ್ರೇಲಿಯಾ ಭೇಟಿಯನ್ನು ಮುಂದೂಡಿದ ಕಾರಣ, ಮುಂದಿನ ವಾರ ಆಸ್ಪ್ರೇಲಿಯಾದಲ್ಲಿ ನಡೆಯಬೇಕಿದ್ದ ಕ್ವಾಡ್‌ ಶೃಂಗಸಭೆಯನ್ನು ರದ್ದು ಮಾಡಲಾಗಿದೆ. ಸಭೆ ನಡೆಯುವ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಆಸ್ಪ್ರೇಲಿಯಾ ಪ್ರಧಾನಿ ಆ್ಯಂಟನಿ ಆಲ್ಬನೀಸ್‌ ಅವರು ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ದೂರು ನೀಡಬೇಕೆಂದ ಪಾಕ್‌ ನಟಿ: ದೆಹಲಿ ಪೊಲೀಸರ ಪ್ರತಿಕ್ರಿಯೆ ವೈರಲ್‌

ಅಮೆರಿಕದ ಆರ್ಥಿಕ ಪರಿಸ್ಥಿತಿ ಹಾಗೂ ಆಡಳಿತ ಕುರಿತಾಗಿ ನಿರ್ಣಯಗಳನ್ನು ಕೈಗೊಳ್ಳಬೇಕಾಗಿರುವ ಕಾರಣ ಆಸ್ಪ್ರೇಲಿಯಾ ಪ್ರವಾಸವನ್ನು ಮುಂದೂಡಲಾಗಿದೆ ಎಂದು ಜೋ ಬೈಡೆನ್‌ ಮಂಗಳವಾರ ಘೋಷಿಸಿದ್ದರು. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಆಸ್ಪ್ರೇಲಿಯಾ ಪ್ರಧಾನಿ, ‘ಜೋ ಬೈಡೆನ್‌ ಅವರು ತಮ್ಮ ಪ್ರವಾಸವನ್ನು ಮುಂದೂಡಿರುವುದರಿಂದ ಕ್ವಾಡ್‌ ಶೃಂಗಸಭೆಯನ್ನು ರದ್ದು ಮಾಡಲಾಗಿದೆ’ ಎಂದರು.

‘ಅಮೆರಿಕ ಆರ್ಥಿಕತೆ ಕುರಿತಾಗಿ ಜೂನ್‌ 1ರೊಳಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಅದು ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ. ಕ್ವಾಡ್‌ ಶೃಂಗ ರದ್ದಾದರೂ ಸಹ, ಹಿರೋಶಿಮಾದಲ್ಲಿ ನಡೆಯುವ ಜಿ7 ರಾಷ್ಟ್ರಗಳ ಸಭೆಯಲ್ಲಿ ಕ್ವಾಡ್‌ನ ಎಲ್ಲಾ ನಾಯಕರು ಭೇಟಿ ಮಾಡಿ ಮಾತುಕತೆ ನಡೆಸುತ್ತೇವೆ. ಜೋ ಬೈಡೆನ್‌ ಜೊತೆಗೆ ದ್ವಿಪಕ್ಷೀಯ ಮಾತುಕತೆ ಸಹ ನಡೆಸಲಾಗುತ್ತಿದೆ’ ಎಂದೂ ಆಸ್ಪ್ರೇಲಿಯಾ ಪ್ರಧಾನಿ ಆ್ಯಂಟನಿ ಆಲ್ಬನೀಸ್‌ ಹೇಳಿದರು.

ಇದನ್ನೂ ಓದಿ: Karnataka Assembly Election 2023: ಜನರ ಆಶೋತ್ತರಗಳನ್ನು ಕಾಂಗ್ರೆಸ್‌ ಈಡೇರಿಸಲಿ ಎಂದ ಮೋದಿ

click me!