
ನವದೆಹಲಿ(ಸೆ.05): ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳುವ ನಿರೀಕ್ಷೆಯಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅಧ್ಯಕ್ಷತೆಯಲ್ಲಿ ‘ಕ್ವಾಡ್’ (ಆಸ್ಪ್ರೇಲಿಯಾ, ಅಮೆರಿಕ, ಜಪಾನ್, ಭಾರತದ ಒಕ್ಕೂಟ) ಶೃಂಗ ಸಮ್ಮೇಳನ ನಡೆಯುವ ನಿರೀಕ್ಷೆಯಿದ್ದು, ಶೃಂಗ ಖಚಿತಪಟ್ಟರೆ ಮೋದಿ ಭೇಟಿ ಕುರಿತ ಅಂತಿಮ ತೀರ್ಮಾನ ಆಗುವ ಸಾಧ್ಯತೆ ಇದೆ.
3 ವರ್ಷಗಳಲ್ಲಿ ಮೋದಿ ಫಾರಿನ್ ಟೂರ್’ಗೆ 255 ಕೋಟಿ ರೂ. ಖರ್ಚು!
ಸಂಭಾವ್ಯ ವೇಳಾಪಟ್ಟಿಯ ಪ್ರಕಾರ ಪ್ರವಾಸ ಸೆ.22ರಿಂದ 27ರವರೆಗೆ ನಡೆಯಲಿದೆ. ಭೇಟಿ 3 ಉದ್ದೇಶಗಳನ್ನು ಹೊಂದಿದೆ. ಅವು: ಕ್ವಾಡ್ ಶೃಂಗ ಸಮ್ಮೇಳನ, ಜೋ ಬೈಡೆನ್ ಜತೆ ದ್ವಿಪಕ್ಷೀಯ ಮಾತುಕತೆ ಹಾಗೂ ವಿಶ್ವಸಂಸ್ಥೆ 76ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಷಣ.
ಆದರೆ ಕೆಲವು ವಿದ್ಯಮಾನಗಳ ಕಾರಣ ಜಪಾನ್, ವರ್ಚುವಲ್ ಶೃಂಗಕ್ಕೆ ಬೇಡಿಕೆ ಇಟ್ಟಿದೆ. ಹೀಗಾಗಿ ಕ್ವಾಡ್ ಶೃಂಗಸಭೆ ಭೌತಿಕ ರೂಪದಲ್ಲಿ ನಡೆಯುವ ಬಗ್ಗೆ ಅನುಮಾನ ಸೃಷ್ಟಿಯಾಗಿದೆ. ಹೀಗಾಗಿ ಮೋದಿ ಭೇಟಿಯ ಅಂತಿಮ ನಿರ್ಧಾರ ಆಗಿಲ್ಲ. ಈ ಶೃಂಗದ ನಿಗದಿ ಆಧಾರದಲ್ಲಿ ಮೋದಿ ಭೇಟಿ ಅಂತಿಮವಾಗುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
'ಇಂಡಿಯನ್ ಅಮೆರಿಕನ್ನರ ಓಟ್ ನನಗೆ': ಇದು ಮೋದಿ ಬೆಂಬಲ ಎಂದ ಟ್ರಂಪ್
2019ರಲ್ಲಿ ಟ್ರಂಪ್ ಅಧ್ಯಕ್ಷರಾಗಿದ್ದಾಗ ಅಮೆರಿಕಕ್ಕೆ ಭೇಟಿ ನೀಡಿ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಿದ್ದರು. ಇದಾದ ನಂತರ ಕೊರೋನಾ ಹಾವಳಿ ಆರಂಭವಾಗಿ, ಅವರು ಅಮೆರಿಕಕ್ಕೆ ಭೇಟಿ ನೀಡಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ