ಭಾರತ ಅಭಿವೃದ್ಧಿಗೆ ಪ್ರಧಾನಿ ಮೋದಿಯೇ ಕಾರಣ: ಅಮೆರಿಕ ಉದ್ಯಮಿ

By Kannadaprabha News  |  First Published May 9, 2024, 11:49 AM IST

ಜಗತ್ತಿನ ಭೂಪಟದಲ್ಲಿ ಭಾರತ ಉತ್ತಮವಾಗಿ ಅಭಿವೃದ್ಧಿ ಕಂಡಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಅಪಾರ ಎಂದು ಅಮೆರಿಕದ ಸಿಲಿಕಾನ್‌ ವ್ಯಾಲಿಯ ಭಾರತೀಯ ಮೂಲದ ಉದ್ಯಮಿ ಸಂದೀಪ್‌ ಭಟ್‌ ಹೇಳಿದ್ದಾರೆ.


ಸಾಂತಾ ಕ್ಲಾರಾ (ಅಮೆರಿಕ) (ಮೇ.09): ಜಗತ್ತಿನ ಭೂಪಟದಲ್ಲಿ ಭಾರತ ಉತ್ತಮವಾಗಿ ಅಭಿವೃದ್ಧಿ ಕಂಡಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ ಅಪಾರ ಎಂದು ಅಮೆರಿಕದ ಸಿಲಿಕಾನ್‌ ವ್ಯಾಲಿಯ ಭಾರತೀಯ ಮೂಲದ ಉದ್ಯಮಿ ಸಂದೀಪ್‌ ಭಟ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಭಾರತ ಹಾಗೂ ಭಾರತೀಯರ ಬಗೆಗೆಗಿನ ಭಾವನೆ ಬದಲಾಗಿದೆ. ಭಾರತ ಹಿಂದೆಂದೊಗಿಂತಲೂ ಭಾರಿ ವೇಗವಾಗಿ ಬೆಳೆಯುತ್ತಿದೆ.  ಜಾಗತಿಕವಾಗಿ ಭಾರತದ ಆರ್ಥಿಕತೆ ಬೆಳಗುತ್ತಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ವೈಯಕ್ತಿವಾಗಿ ನಾನು ಮೋದಿ ಅವರ ಅಭಿಮಾನಿಯಾಗಿದ್ದು, ಅವರು ದೇಶದ ಆರ್ಥಿಕತೆ ಬೆಳಗುವಲ್ಲಿ ಅವಿರತ ಪ್ರಯತ್ನವನ್ನು ಮಾಡುತ್ತಿದ್ದಾರೆ. ಇದರ ಭಾಗವಾಗಿ ಭಾರತದ ವಿಶ್ವದ ಐದನೇ ದುಡ್ಡ ಆರ್ಥಿಕತೆಯಾಗಿದೆ. ಭಾರತ ಹಂತ ಹಂತವಾಗಿ ಬೆಳವಣಿಗೆ ಕಾಣುತ್ತಿದೆ’ ಎಂದರು.

ಅಂಬಾನಿ, ಅದಾನಿ ಬಗ್ಗೆ ರಾಹುಲ್‌ ಮೌನ ಏಕೆ?: ‘ಕಳೆದ 5 ವರ್ಷಗಳಿಂದ ಸತತವಾಗಿ ಅಂಬಾನಿ-ಅದಾನಿ ವಿರುದ್ಧ ದಾಳಿ ನಡೆಸುತ್ತಿದ್ದ ಶೆಹಜಾದಾ (ರಾಹುಲ್‌ ಗಾಂಧಿ), ಇದೀಗ ಅವರ ಮೇಲಿನ ದಾಳಿ ದಿಢೀರ್‌ ನಿಲ್ಲಿಸಿದ್ದು ಏಕೆ ಎಂಬ ಬಗ್ಗೆ ಕಾಂಗ್ರೆಸ್‌ ಸ್ಪಷ್ಟಪಡಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ. ಅಲ್ಲದೇ, ‘ಈ ಕುರಿತು ಡೀಲ್ ಏನಾದರೂ ಕುದುರಿದೆಯಾ?’ ಎಂದು ಪ್ರಶ್ನಿಸಿದ್ದಾರೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್‌ ನಾಯಕರು ಮೋದಿ ಜೊತೆಗಿನ ಅಂಬಾನಿ ಮತ್ತು ಅದಾನಿ ಸ್ನೇಹ ಹೋಲಿಸಿ ಭಾರೀ ಟೀಕೆ ಮಾಡುತ್ತಲೇ ಬಂದಿದ್ದರು. ಆದರೆ ಈ ಬಗ್ಗೆ ಎಂದಿಗೂ ಪ್ರತಿಕ್ರಿಯೆ ನೀಡದ ಮೋದಿ, ಇದೀಗ ‘ಉಭಯ ಉದ್ಯಮಿಗಳ ಜೊತೆ ರಾಹುಲ್‌ ಡೀಲ್‌ ಕುದುರಿಸಿದ್ದಾರಾ?‘ ಎಂದು ಪ್ರಶ್ನಿಸಿರುವುದು ಅಚ್ಚರಿಗೆ ಕಾರಣವಾಗಿದೆ.

Tap to resize

Latest Videos

undefined

ಹರ್ಯಾಣ ಸರ್ಕಾರ ವಜಾಗೆ ಕಾಂಗ್ರೆಸ್‌ ಪಟ್ಟು: ಬಿಜೆಪಿ ಸಿಎಂ ನಯಬ್‌ ಸಿಂಗ್ ಹೇಳಿದ್ದೇನು

ಡೀಲ್‌ ಏನು?: ತೆಲಂಗಾಣದ ವೇಮುಲವಾಡದಲ್ಲಿ ಬುಧವಾರ ಬಿಜೆಪಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಮೋದಿ, ‘ಯಾವಾಗ ಚುನಾವಣೆ ಆರಂಭವಾಯಿತೋ ಅಂದಿನಿಂದಲೂ ಇವರು (ಕಾಂಗ್ರೆಸ್‌) ಅಂಬಾನಿ-ಅದಾನಿ ನಿಂದನೆ ನಿಲ್ಲಿಸಿದ್ದಾರೆ. ಹೀಗಾಗಿ, ಅಂಬಾನಿ- ಅದಾನಿಯಿಂದ ಎಷ್ಟು ಎತ್ತಲಾಯಿತು ಎಂಬುದರ ಬಗ್ಗೆ ಶೆಹಜಾದಾ ಘೋಷಣೆ ಮಾಡಲಿ ಎಂದು ನಾನು ತೆಲಂಗಾಣದ ಈ ನೆಲದಿಂದ ಪ್ರಶ್ನಿಸಲು ಬಯಸುತ್ತೇನೆ. ಟೆಂಪೋ ಲೋಡ್‌ ತುಂಬಾ ನೋಟು ಕಾಂಗ್ರೆಸ್‌ಗೆ ಸೇರಿತೇ? ರಾತ್ರೋರಾತ್ರಿ ಅಂಬಾನಿ- ಅದಾನಿ ನಿಂದನೆ ನಿಲ್ಲಿಸಲು ಅದ್ಯಾವ ಯಾವ ಒಪ್ಪಂದಕ್ಕೆ ಬರಲಾಗಿದೆ?’ ಎಂದು ಮೋದಿ ಕಾಂಗ್ರೆಸ್‌ ಮತ್ತು ರಾಹುಲ್‌ಗೆ ಗಂಭೀರ ಪ್ರಶ್ನೆಗಳನ್ನು ಎಸೆದಿದರು.

click me!