ಪ್ರಧಾನಿ ನರೇಂದ್ರ ಮೋದಿ ವಿಶ್ವಯೋಗ ದಿನಾಚರಣೆಯನ್ನು ಅಮೆರಿಕದ ವಿಶ್ವಸಂಸ್ಥೆ ಆವರಣದಲ್ಲಿ ಆಚರಿಸಿದ್ದಾರೆ. 180 ರಾಷ್ಟ್ರದ ಗಣ್ಯರು ಪ್ರಧಾನಿ ಮೋದಿ ಜೊತೆ ಯೋಗದಿನಾಚರಿಸಿದ್ದಾರೆ.
ನ್ಯೂಯಾರ್ಕ್(ಜೂ.21):ಯೋಗಕ್ಕೆ ಕಾಪಿರೈಟ್ಸ್ ಇಲ್ಲ, ಯೋಗಕ್ಕೆ ಪೇಟೆಂಟ್ಸ್ ಇಲ್ಲ, ಇಷ್ಟೇ ಅಲ್ಲ ಯೋಗಕ್ಕೆ ಪಾವತಿ ಮಾಡಬೇಕಿಲ್ಲಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಶ್ವಸಂಸ್ಥೆ ಆವರಣದಲ್ಲಿ ಆಯೋದಿಸಿದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಜನತೆಯನ್ನುದ್ದೇಶಿ ಮಾತನಾಡಿದರು.ಹಲವರು ಸೂರ್ಯ ಮೂಡುವ ಮುನ್ನವೇ ಎದ್ದು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದೀರಿ. ಎಲ್ಲರಿಗೂ ಧನ್ಯವಾದ. ಇಂದು ಎಲ್ಲಾ ರಾಷ್ಟ್ರದ ಪ್ರತಿನಿಧಿಗಳು ಈ ಯೋಗದಿನಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಯೋಗ ಅಂದರೆ ಒಗ್ಗೂಡುವಿಕೆ. 9 ವರ್ಷಗಳ ಹಿಂದೆ ಇದೇ ಜಾಗವಾದ ವಿಶ್ವಸಂಸ್ಥೆಯಲ್ಲಿ ಯೋಗ ದಿನಾಚರಣೆ ಪ್ರಸ್ತಾವನೆ ಮುಂದಿಟ್ಟಾಗ, ಎಲ್ಲಾ ರಾಷ್ಟ್ರಗಳ ಒಂದಾಗಿ ಭಾರತದ ಆಲೋಚನೆಗೆ ಸಮ್ಮತಿ ಸೂಚಿಸಿತ್ತು. 2015ರಲ್ಲಿ ವಿಶ್ವ ಸಂಸ್ಥೆಯಲ್ಲಿ ಯೋಗಿದಿನಾಚರಣೆ ಸ್ಮಾರಕ ನಿರ್ಮಾಣ ಮಾಡಲಾಯಿತು ಎಂದು ಮೋದಿ ಹೇಳಿದ್ದಾರೆ.
ಅಂತರರಾಷ್ಟ್ರೀಯ ಯೋಗ ದಿನ 2023 ಹಲವು ವಿಶೇಷತೆಗಳಿಂದ ಕೂಡಿದೆ. ಈ ಬಾರಿ ಭಾರತ ವಸುಧೈವ ಕುಟುಂಬಕಂ ಪರಿಕಲ್ಪನೆ ಅಡಿಯಲ್ಲಿ ಯೋಗದಿನಾಚರಣೆ ಆಚರಿಸುತ್ತಿದೆ. ನಾಲ್ಕು ದಿನಗಳ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ನ್ಯೂಯಾರ್ಕ್‌ನ ವಿಶ್ವಸಂಸ್ಥೆ ಆವರಣದಲ್ಲಿ ಯೋಗದಿನಾಚರಿಸಿದ್ದಾರೆ. ಮೋದಿ ಜೊತೆ ವಿಶ್ವಸಂಸ್ಥೆ ಅಧಿಕಾರಿಗಳು, ನ್ಯೂಯಾರ್ಕ್ ಮೇಯರ್, 180 ದೇಶದ ಉನ್ನತ ಅಧಿಕಾರಿಗಳು, ಅನಿವಾಸಿ ಭಾರತೀಯರು ಸೇರಿದಂತೆ ಹಲವು ಗಣ್ಯರು ಮೋದಿ ಜೊತೆ ಯೋಗಾಭ್ಯಾಸ ಮಾಡಿ ವಿಶ್ವ ಯೋಗದಿನಾಚರಿಸಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನ: ಸಿಕ್ಕಿಂ, ಲಡಾಖ್, ಅರುಣಾಚಲದ ರಮಣೀಯ ಪರಿಸರದಲ್ಲಿ ಭಾರತೀಯ ಸೇನೆ ಯೋಗಾಭ್ಯಾಸ
ಕಳೆದ ವರ್ಷ ಭಾರತ ಮಂದಿಟ್ಟ ಸಿರಿಧಾನ್ಯ ವರ್ಚಾರಣೆಗೂ ವಿಶ್ವಸಂಸ್ಥೆ ಸಮ್ಮತಿ ಸೂಚಿಸಿದೆ. ಯೋಗ ಭಾರತದಿಂದ ಬಂದಿದೆ. ಇದು ಅತ್ಯಂತ ಹಳೇ ಸಂಪ್ರದಾಯವಾಗಿದೆ. ಯೋಗ ಯಾವುದೇ ಕಾಪಿರೈಟ್ಸ್ ಹೊಂದಿಲ್ಲ, ಯಾವುದೇ ಪಾವತಿ ಇಲ್ಲ. ಯೋಗ ಎಲ್ಲರ ಆರೋಗ್ಯಕ್ಕಾಗಿ, ಯಾವುದೇ ಜಾತಿ ಮತ ಬೇಧವಿಲ್ಲದೆ ಮಾಡಬಹುದು ಎಂದು ಮೋದಿ ಹೇಳಿದ್ದಾರೆ.
ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಯೋಗ ಅತೀ ಮುಖ್ಯ. ಯೋಗ ಜೀವನದ ಶೈಲಿಯಾಗಿದೆ. ಇದು ಅಳವಡಿಸಿಕೊಂಡ ವ್ಯಕ್ತಿ ದೈಹಕವಾಗಿ, ಮಾನಸಿಕವಾಗಿ ಸದೃಡವಾಗುತ್ತಾರೆ. ಇಲ್ಲಿರುವ ಹಲವರು ವೈಜ್ಞಾನಿಕವಾಗಿ ಯೋಗವನ್ನು ಅಧ್ಯಯನ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ನಾನು ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಮೋದಿ ಹೇಳಿದರು. ಭಾರತದ ಕರೆಯ ಮೇರೆಗೆ ಹಿಂದೆಂದೂ ಕಂಡರಿಯದಂತೆ 180 ಕ್ಕೂ ಹೆಚ್ಚು ದೇಶಗಳು ಒಟ್ಟಿಗೆ ಸೇರಿರುವುದು ಐತಿಹಾಸಿಕ” ಎಂದರು. ಯೋಗವನ್ನು ಜಾಗತಿಕ ಆಂದೋಲನ ಮಾಡಲು 2014 ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಪ್ರಸ್ತಾವನೆ ಮಂಡಿಸಿದಾಗ ದಾಖಲೆ ಪ್ರಮಾಣದಲ್ಲಿ ಬೆಂಬಲ ದೊರೆಯಿತು ಮತ್ತು ಅಂತರರಾಷ್ಟ್ರೀಯ ಯೋಗ ದಿನವನ್ನು ಇದೀಗ ಜಾಗತಿಕ ಸ್ಫೂರ್ತಿಯಿಂದ ಆಚರಿಸಲಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ವಿಧಾನಸೌಧದ ಮುಂಭಾಗ ಗಣ್ಯರಿಂದ ಯೋಗಾಭ್ಯಾಸ
ಭಾಷಣದ ಬಳಿಕ ಮೋದಿ ಸೇರಿದಂತೆ 180 ರಾಷ್ಟ್ರದ ಗಣ್ಯರು, ವಿಶ್ವಸಂಸ್ಥೆ ಪ್ರತಿನಿಧಿಗಳು ಯೋಗಾಭ್ಯಾಸ ಮಾಡುವ ಮೂಲಕ ಯೋಗದಿನಾಚರಣೆ ಆಚರಿಸಿದರು. ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆ ಆವರಣದಲ್ಲಿ ಪ್ರಧಾನಿ ಮೋದಿ ಯೋಗ ದಿನಾಚರಿಸಿದ್ದಾರೆ. ಇಷ್ಟೇ ವಿಶ್ವಸಂಸ್ಥೆ ಆವರಣದಲ್ಲಿ ಓಂಕಾರ ಮೊಳಗಿದೆ.