ಬ್ರಿಟನ್‌ ಸಚಿವ, ಇನ್ಫಿ ಮೂರ್ತಿ ಅಳಿಯ ರಿಷಿ ಸುನಾಕ್‌ ರಾಜೀನಾಮೆ

By Govindaraj SFirst Published Jul 5, 2022, 11:56 PM IST
Highlights

ಬೆಂಗಳೂರಿನ ಇಸ್ಫೋಸಿಸ್‌ ನಾರಾಯಣಮೂರ್ತಿ ಅವರ ಅಳಿಯ ಹಾಗೂ ಬ್ರಿಟನ್‌ ವಿತ್ತ ಸಚಿವ ರಿಷಿ ಸುನಾಕ್‌ ಮತ್ತು ಆರೋಗ್ಯ ಸಚಿವ ಸಾಜಿದ್‌ ಜಾವಿದ್‌ ಮಂಗಳವಾರ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

ಲಂಡನ್‌ (ಜು.05): ಬೆಂಗಳೂರಿನ ಇಸ್ಫೋಸಿಸ್‌ ನಾರಾಯಣಮೂರ್ತಿ ಅವರ ಅಳಿಯ ಹಾಗೂ ಬ್ರಿಟನ್‌ ವಿತ್ತ ಸಚಿವ ರಿಷಿ ಸುನಾಕ್‌ ಮತ್ತು ಆರೋಗ್ಯ ಸಚಿವ ಸಾಜಿದ್‌ ಜಾವಿದ್‌ ಮಂಗಳವಾರ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಇದರಿಂದ ಪ್ರಧಾನಿ ಬೊರಿಸ್‌ ಜಾನ್ಸನ್‌ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ. ಜಾನ್ಸನ್‌ ನಾಯಕತ್ವದ ಬಗ್ಗೆ ಅಪಸ್ವರ ಎತ್ತಿ ಈ ಇಬ್ಬರೂ ರಾಜೀನಾಮೆ ನೀಡಿದ್ದಾರೆ. 

‘ಜನರು ಉತ್ತಮ ಹಾಗೂ ಗಂಭೀರ ಸರ್ಕಾರ ಬಯಸಿದ್ದರು. ಆದರೆ ಈ ನಿರೀಕ್ಷೆಯನ್ನು ಸರ್ಕಾರ ತಲುಪಿಲ್ಲ ಎಂಬುದು ನನ್ನ ಭಾವನೆ. ಇನ್ನು ಮುಂದುವರಿಯಲು ಆಗಲ್ಲ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಸುನಾಕ್‌ ಹೇಳಿದ್ದಾರೆ.

ಇನ್ನು ‘ಬ್ರಿಟನ್‌ ಪರಿಸ್ಥಿತಿ ನಿಮ್ಮ ಅಡಿ ಬದಲಾಗುವುದಿಲ್ಲ’ ಎಂದು ಸಾಜಿದ್‌ ರಾಜೀನಾಮೆ ಪ್ರಕಟಿಸಿದ್ದಾರೆ. ಜಾನ್ಸನ್‌ ಕಾರ‍್ಯವೈಖರಿ, ಕೋವಿಡ್‌ ವೇಳೆ ಅವರು ನಿಯಮ ಉಲ್ಲಂಘಿಸಿದ ರೀತಿ ಬಗ್ಗೆ ಇತ್ತೀಚೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ರಿಷಿ ಸುನಾಕ್‌ ಮುಂದಿನ ಬ್ರಿಟನ್‌ ಪ್ರಧಾನಿ ಆಗಬಹುದು ಎಂದು ಕೆಲವು ಸಮೀಕ್ಷೆಗಳು ಹೇಳಿದ್ದವು.

click me!