ನೇಪಾಳ ವಿಮಾನ ಅಪಘಾತದಲ್ಲೇ ಬಲಿಯಾದ ಪೈಲಟ್‌ ದಂಪತಿ..!

By BK Ashwin  |  First Published Jan 16, 2023, 5:57 PM IST

ಪೊಖರಾ ನಗರವನ್ನು ಸಮೀಪಿಸುತ್ತಿದ್ದಂತೆ ಈ ವಿಮಾನ ಅಪಘಾತಕ್ಕೀಡಾಗಿದ್ದು, ಮೂರು ದಶಕಗಳಲ್ಲಿ ಹಿಮಾಲಯ ರಾಷ್ಟ್ರದ ಅತ್ಯಂತ ಭೀಕರ ವಿಮಾನ ಅಪಘಾತದಲ್ಲಿ 68 ಜನರ ಮೃತದೇಹ ಸಿಕ್ಕಿದೆ ಎಂದು ತಿಳಿದುಬಂದಿದೆ.


ನೇಪಾಳ ವಿಮಾನ ಅಪಘಾತಕ್ಕಿಡಾಗಿದ್ದು, ಈ ಪೈಕಿ ಕನಿಷ್ಠ 68 ಜನರು ಮೃತಪಟ್ಟಿದ್ದು, ನಾಲ್ವರು ಕಾಣೆಯಾಗಿದ್ದಾರೆ. ಈ ವಿಮಾನದ ಕೋ - ಪೈಲಟ್‌ ಆಗಿದ್ದರು ಅಂಜು ಖತಿವಾಡ. ಇವರು 2010 ರಲ್ಲಿ, ನೇಪಾಳದ ಯೇತಿ ಏರ್‌ಲೈನ್ಸ್‌ಗೆ ಸೇರಿದ್ದರು. ಭಾನುವಾರ ಸಂಭವಿಸಿದ್ದ ಈ ಅಪಘಾತದಲ್ಲಿ ಇವರು ಮೃತಪಟ್ಟಿದ್ದಾರೆ ಎಂದು ಹೇಳಲಾಗ್ತಿದೆ. ಕಠ್ಮಂಡುವಿನಿಂದ ಟೇಕಾಫ್‌ ಆಗಿದ್ದ ಯೇತಿ ಏರ್‌ಲೈನ್ಸ್ ವಿಮಾನದಲ್ಲಿ ಸಹ-ಪೈಲಟ್ ಆಗಿದ್ದ ಇವರಿಗೆ 44 ವರ್ಷ ವಯಸ್ಸು. ಪೊಖರಾ ನಗರವನ್ನು ಸಮೀಪಿಸುತ್ತಿದ್ದಂತೆ ಈ ವಿಮಾನ ಅಪಘಾತಕ್ಕೀಡಾಗಿದ್ದು, ಮೂರು ದಶಕಗಳಲ್ಲಿ ಹಿಮಾಲಯ ರಾಷ್ಟ್ರದ ಅತ್ಯಂತ ಭೀಕರ ವಿಮಾನ ಅಪಘಾತದಲ್ಲಿ 68 ಜನರ ಮೃತದೇಹ ಸಿಕ್ಕಿದೆ ಎಂದು ತಿಳಿದುಬಂದಿದೆ. 72 ಜನರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಉಳಿದ ನಾಲ್ವರ ಬಗ್ಗೆ ಯಾವುದೇ ಗುರುತು ಪತ್ತೆಯಾಗಿಲ್ಲ. 

ಅಂಜು ಖತಿವಾಡ (Anju Khatiwada) ತಾನು ಪೈಲಟ್‌ ಆಗಿ ಸೇರುವ ಮುನ್ನವೇ ತನ್ನ ಪತಿಯನ್ನು (Husband) ಕಳೆದುಕೊಂಡಿದ್ದರು. ಅವರು ಕೂಡ ಪೈಲಟ್‌ (Pilot) ಆಗಿದ್ದವರು. ಅಲ್ಲದೆ, 2006ರಲ್ಲಿ ದೇಶೀಯ ಸಣ್ಣ ಪ್ರಯಾಣಿಕ ವಿಮಾನವು ಲ್ಯಾಂಡ್‌ ಆಗುವ ನಿಮಿಷಗಳ ಮೊದಲು ಅಪಘಾತದಲ್ಲಿ ಅವರ ಪತಿ ದೀಪಕ್‌ ಪೋಖ್ರೆಲ್‌ (Dipak Pokhrel) ಮೃತಪಟ್ಟಿದ್ದರು. ಇದೇ ರೀತಿ, ಪತ್ನಿ (Wife) ಸಹ ಈಗ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Tap to resize

Latest Videos

ದೀಪಕ್ ಪೋಖ್ರೆಲ್ 2006 ರಲ್ಲಿ ಜುಮ್ಲಾದಲ್ಲಿ ಯೇತಿ ಏರ್‌ಲೈನ್ಸ್‌ನ ಟ್ವಿನ್ ಆಟರ್ ವಿಮಾನದ ಅಪಘಾತದಲ್ಲಿ ನಿಧನರಾಗಿದ್ದರು ಎಂದು ಏರ್‌ಲೈನ್ಸ್‌ ವಕ್ತಾರ ಸುದರ್ಶನ್ ಬರ್ತೌಲಾ ಅಂತಾರಾಷ್ಟ್ರೀಯ ಸುದ್ದಿಸಂಸ್ಥೆ ರಾಯಿಟರ್ಸ್‌ಗೆ ಮಾಹಿತಿ ನೀಡಿದ್ದಾರೆ. ತನ್ನ ಗಂಡನ ಮರಣದ ನಂತರ ವಿಮೆಯಿಂದ (Insurance) ಪಡೆದ ಹಣದಿಂದ ಆಕೆ ತನ್ನ ಪೈಲಟ್ ತರಬೇತಿಯನ್ನು ಪಡೆದಿದ್ದರು ಎಂದೂ ಅವರು ಹೇಳಿದ್ದಾರೆ.

Anju Khatiwada, co-pilot of the ill-fated , was just few seconds away from landing & fulfilling the requirement to become a Captain. Tragically, her husband (also a co-pilot) had died in a plane crash in 2006. What a terrible & cruel twist of fate 😢 pic.twitter.com/w1TpJ0Tl6a

— Atul Karmarkar (@atulkarmarkar)

6,400 ಗಂಟೆಗಳಿಗೂ ಹೆಚ್ಚು ಹಾರಾಟದ ಸಮಯವನ್ನು ಹೊಂದಿರುವ ಪೈಲಟ್ ಆಗಿದ್ದ ಅಂಜು ಖತಿವಾಡ ಅವರು ಈ ಹಿಂದೆ ನೇಪಾಳ ರಾಜಧಾನಿ ಕಠ್ಮಂಡುವಿನಿಂದ ಆ ದೇಶದ ಎರಡನೇ ಅತಿದೊಡ್ಡ ನಗರವಾದ ಪೋಖರಾಗೆ ಜನಪ್ರಿಯ ಪ್ರವಾಸಿ ಮಾರ್ಗದಲ್ಲಿ ಯಶಸ್ವಿಯಾಗಿ ವಿಮಾನ ಹಾರಿಸಿದ್ದರು ಎಂದೂ ಸುದರ್ಶನ್ ಬರ್ತೌಲಾ ಹೇಳಿದರು. ಅಂಜು ಖತಿವಾಡ ಅವರ ಮೃತದೇಹ ಇಲ್ಲಿಯವರೆಗೂ ಪತ್ತೆಯಾಗಿಲ್ಲ ಎನ್ನಲಾಗಿದ್ದು, ಆದರೆ ಈ ವಿಮಾನ ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೆ, ಏರ್‌ಲೈನ್ಸ್‌ ವಕ್ತಾರ ಸಹ ಕೋ ಪೈಲಟ್‌ ಸಾವಿಗೀಡಾಗಿರುವ ಆತಂಕವಿದೆ ಎಮದು ಹೇಳಿದ್ದಾರೆ. ಆದರೆ, 21,900 ಗಂಟೆಗಳಿಗೂ ಹೆಚ್ಚು ಹಾರಾಟದ ಅನುಭವ ಇರುವ ವಿಮಾನದ ಕ್ಯಾಪ್ಟನ್ ಆಗಿದ್ದ ಕಮಲ್ ಕೆ.ಸಿ ಅವರ ಮೃತದೇಹವನ್ನು ಗುರುತಿಸಲಾಗಿದೆ. 

ಭಾನುವಾರದಂದು, ಆಕೆ ಬೋಧಕ ಪೈಲಟ್‌ನೊಂದಿಗೆ ವಿಮಾನವನ್ನು ಹಾರಿಸುತ್ತಿದ್ದರು. ಇದು ಏರ್‌ಲೈನ್‌ನ ಪ್ರಮಾಣಿತ ಕಾರ್ಯವಿಧಾನವಾಗಿದೆ" ಎಂದು ಅಂಜು ಖತಿವಾಡ ಬಗ್ಗೆ ವೈಯಕ್ತಿಕವಾಗಿ ತಿಳಿದಿರುವ ಯೇತಿ ಏರ್‌ಲೈನ್ಸ್ ಅಧಿಕಾರಿಯೊಬ್ಬರು ಹೇಳಿದರು. ಆಕೆ, ಯಾವಾಗಲೂ ಯಾವುದೇ ಕರ್ತವ್ಯವನ್ನು ತೆಗೆದುಕೊಳ್ಳಲು ಸಿದ್ಧಳಾಗಿದ್ದಳು ಮತ್ತು ಈ ಮೊದಲು ಪೋಖರಾಗೆ ವಿಮಾನ ಹಾರಿಸಿದ್ದರು ಎಂದೂ ಈ ಅಧಿಕಾರಿ ಹೇಳಿದರು. ಆದರೆ, ಈ ಅಧಿಕಾರಿ ತಮ್ಮ ಹೆಸರನ್ನು ಹೇಳಲು ನಿರಾಕರಿಸಿದ್ದಾರೆ. ಇನ್ನು, ಅಂಜು ಖತಿವಾಡ ಅವರ ಕುಟುಂಬ ಸದಸ್ಯರನ್ನು ಈವರೆಗೆ ಸಂಪರ್ಕಿಸಿಲ್ಲ ಎಂದೂ ತಿಳಿದುಬಂದಿದೆ. 

ಕಾಕ್‌ಪಿಟ್ ಧ್ವನಿ ರೆಕಾರ್ಡರ್ ಮತ್ತು ವಿಮಾನದ ಫ್ಲೈಟ್ ಡೇಟಾ ರೆಕಾರ್ಡರ್ ಅನ್ನು ಸೋಮವಾರ ವಶಪಡಿಸಿಕೊಳ್ಳಲಾಗಿದೆ, ಇದು ಸ್ಪಷ್ಟ ಹವಾಮಾನದಲ್ಲಿ ಅಪಘಾತಕ್ಕೆ ಕಾರಣವೇನು ಎಂಬುದನ್ನು ಕಂಡುಹಿಡಿಯಲು ತನಿಖಾಧಿಕಾರಿಗಳಿಗೆ ಸಹಾಯ ಮಾಡುತ್ತದೆ.

2000 ರಿಂದ ನೇಪಾಳದಲ್ಲಿ ವಿಮಾನ ಅಥವಾ ಹೆಲಿಕಾಪ್ಟರ್ ಅಪಘಾತಗಳಲ್ಲಿ ಸುಮಾರು 350 ಜನರು ಮೃತಪಟ್ಟಿದ್ದಾರೆ. ಹಿಮಾಲಯ ಶ್ರೇಣಿಯ ಬಳಿ ಹಠಾತ್ ಹವಾಮಾನ ಬದಲಾವಣೆಗಳು ಅಪಾಯಕಾರಿ ಪರಿಸ್ಥಿತಿಗಳಿಗೆ ಕಾರಣವಾಗಬಹುದು.

click me!