ಮರುಭೂಮಿಯಲ್ಲಿ ಅಣ್ವಸ್ತ್ರ ಕ್ಷಿಪಣಿ ಸಂಗ್ರಹಕ್ಕೆ ಚೀನಾ ಭರ್ಜರಿ ಪ್ಲ್ಯಾನ್‌!

By Kannadaprabha NewsFirst Published Jul 2, 2021, 8:55 AM IST
Highlights

* 100ಕ್ಕೂ ಹೆಚ್ಚು ಅಣ್ವಸ್ತ್ರ ಕ್ಷಿಪಣಿ ಸಂಗ್ರಹಾಗಾರ ನಿರ್ಮಾಣ

* ಮರುಭೂಮಿಯಲ್ಲಿ ಅಣ್ವಸ್ತ್ರ ಕ್ಷಿಪಣಿ ಸಂಗ್ರಹಕ್ಕೆ ಚೀನಾ ಭರ್ಜರಿ ಪ್ಲ್ಯಾನ್‌

* ಉಪಗ್ರಹ ಚಿತ್ರ ಆಧರಿಸಿ ವಾಷಿಂಗ್ಟನ್‌ ಪೋಸ್ಟ್‌ ವರದಿ

ನವದೆಹಲಿ(ಜು.02): ಚೀನಾ ತನ್ನ ಅಣ್ವಸ್ತ್ರ ಕ್ಷಿಪಣಿಗಳ ಸಂಗ್ರಹಕ್ಕೆ ಮರುಭೂಮಿಯಲ್ಲಿ 100ಕ್ಕೂ ಹೆಚ್ಚು ಕ್ಷಿಪಣಿ ಸಂಗ್ರಹಾಗಾರಗಳನ್ನು ನಿರ್ಮಾಣ ಮಾಡುತ್ತಿರುವುದು ಉಪಗ್ರಹ ಚಿತ್ರದಲ್ಲಿ ಸೆರೆಯಾಗಿದೆ ಎಂದು ವಾಷಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ.

ಭಾರತ ಮತ್ತು ಚೀನಾ ಮಧ್ಯೆ ಗಡಿಯಲ್ಲಿ ಸಂಘರ್ಷ ಏರ್ಪಟ್ಟಿರುವಾಗಲೇ ಈ ಬೆಳವಣಿಗೆ ನಡೆದಿರುವುದು ಮಹತ್ವ ಪಡೆದುಕೊಂಡಿದೆ. ಚೀನಾ ತನ್ನ ಪರಮಾಣು ಸಾಮರ್ಥ್ಯವನ್ನು ವಿಸ್ತರಿಸುವ ಉದ್ದೇಶದಿಂದ ಗಾನ್ಸು ಮರುಭೂಮಿ ಪ್ರದೇಶದಲ್ಲಿ ಹೊಸ ಅಣ್ವಸ್ತ್ರ ಸಂಗ್ರಹಾಗಾರಗಳನ್ನು ನಿರ್ಮಿಸುತ್ತಿದೆ ಎಂದು ಕ್ಯಾಲಿಫೋರ್ನಿಯಾದಲ್ಲಿರುವ ಮಿಡಲ್‌ಬರಿ ಇನ್‌ಸ್ಟಿಟ್ಯೂಟ್‌ ಆಫ್‌ ಇಂಟರ್‌ನ್ಯಾಷನಲ್‌ ಸ್ಟಡೀಸ್‌ನಲ್ಲಿ ನಿಶಸ್ತ್ರೀಕರಣ ಅಧ್ಯಯನ ಸಂಸ್ಥೆಯ ಇಬ್ಬರು ಸಂಶೋಧಕರು ಹೇಳಿದ್ದಾರೆ. ವಾಣಿಜ್ಯ ಉಪಗ್ರಹ ಚಿತ್ರವನ್ನು ವಿಶ್ಲೇಷಿಸಿ ಅವರು ಈ ಮಾಹಿತಿ ನೀಡಿದ್ದಾರೆ.

ಚೀನಾದ ನಾಲ್ಕನೇ ತಲೆಮಾರಿನ ಡಾಂಗ್‌ಫೆಂಗ್‌- 41 ಖಂಡಾಂತರ ಕ್ಷಿಪಣಿಗಳಿಗಾಗಿ ಈ ಸಂಗ್ರಹಾಗಾರಗಳನ್ನು ಚೀನಾ ನಿರ್ಮಿಸುತ್ತಿದೆ. ಈ ಕ್ಷಿಪಣಿಗಳು 9,300 ಕಿ.ಮೀ. ದೂರ ಕ್ರಮಿಸಿ ಅಮೆರಿಕದ ಮೇಲೆ ದಾಳಿ ನಡೆಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಅನಿವಾರ್ಯ ಸಂದರ್ಭದಲ್ಲಿ ಅಮೆರಿಕದ ಮೇಲಿನ ದಾಳಿಯನ್ನು ಗುರಿಯಾಗಿಸಿಕೊಂಡು ಸಂಗ್ರಹಾಗಾರವನ್ನು ಚೀನಾ ನಿರ್ಮಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿ​ಸಲಾಗಿದೆ.

click me!