
ಬೆಂಗಳೂರು (ಏ.28): ಅದೃಷ್ಟದ ಬಾಗಿಲು, ಯಾವಾಗ ಹೇಗೆ ತೆರೆಯುತ್ತೆ ಅನ್ನೋದೆ ಗೊತ್ತಾಗೋದಿಲ್ಲ. ಕೆಲವೊಮ್ಮೆ ರಾತ್ರಿ ಬೆಳಗಾಗೋದರ ಒಳಗಾಗಿ ವ್ಯಕ್ತಿಯ ಅದೃಷ್ಟ ಖುಲಾಯಿಸಿಬಿಟ್ಟಿರುತ್ತದೆ. ಅಂಥದ್ದೇ ಒಂದು ಪ್ರಸಂಗ ಜರ್ಮನಿಯಲ್ಲಿ(Germany) ನಡೆದಿದೆ. ಅಡಿಗೆಮನೆಯ ವಸ್ತುಗಳನ್ನು ಇಡುವ ಸಲುವಾಗಿ ಹೊಸ ಕಬೋರ್ಡ್ (cupboard ) ಖರೀದಿ ಮಾಡಲು ಹಣವಿರದ ವ್ಯಕ್ತಿ, ಆನ್ ಲೈನ್ ನಲ್ಲಿ (Online) ಸಕೆಂಡ್ ಹ್ಯಾಂಡ್ (second hand ) ಕಬೋರ್ಡ್ ಖರೀದಿ ಮಾಡಿದ್ದ. ಆದರೆ, ಮನೆಗೆ ಬಂದ ಕಬೋರ್ಡ್ ಅನ್ನು ಓಪನ್ ಮಾಡಿದ್ದಾಗ ಅಚ್ಚರಿಗೆ ಒಳಗಾಗಿದ್ದಾರೆ.
ನಾವೇನಾದರೂ ಮನೆಗಳಿಗೆ ಕಬೋರ್ಡ್ ಖರೀದಿ ಮಾಡಿದರೆ, ಇಂಥದ್ದೊಂದು ಸಂಗತಿ ಆಗಬಹುದು ಎನ್ನುವ ಸಣ್ಣ ಊಹೆಯೂ ನಮಗೆ ಇರುವುದಿಲ್ಲ. ಹಾಗಾಗಿ ಇಂಥ ಸುದ್ದಿಗಳನ್ನು ಓದಿದಾಗ ನಮಗೆ ಅಚ್ಚರಿಯಾಗುವುದು ಖಂಡಿತ. ಜರ್ಮನಿಯಲ್ಲಿ ನೆಲೆಸಿರುವ ವ್ಯಕ್ತಿಯು ಸೆಕೆಂಡ್ ಹ್ಯಾಂಡ್ ಕಬೋರ್ಡ್ ಅನ್ನು ಖರೀದಿ ಮಾಡಿದ ಬಳಿಕ ಇಂಥದ್ದೊಂದು ಅಚ್ಚರಿ ಸಂಭವಿಸಿದೆ. ಆನ್ ಲೈನ್ ಸೈಟ್ ನಲ್ಲಿ ಬುಕ್ ಮಾಡಿದ್ದ ಕಬೋರ್ಡ್ ಅನ್ನು ತೆರೆದು ನೋಡಿದಾಗ ಅದರಲ್ಲಿ 1.2 ಕೋಟಿ ರೂಪಾಯಿ ಪತ್ತೆಯಾಗಿದೆ.
ಮಾಧ್ಯಮ ವರದಿಯ ಪ್ರಕಾರ, ಈ ವ್ಯಕ್ತಿಯ ಹೆಸರು ಥಾಮಸ್ ಹೆಲ್ಲರ್ (Thomas Heller), ಅವರು ಜರ್ಮನಿಯ ಬಿಟರ್‌ಫೀಲ್ಡ್ (Bitterfield) ಮೂಲದವರಾಗಿದ್ದಾರೆ. ಥಾಮಸ್ ತನ್ನ ಅಡುಗೆಮನೆಯಲ್ಲಿ (kitchen) ವಸ್ತುಗಳನ್ನು ಇಡಲು 19 ಸಾವಿರ ರೂಪಾಯಿಗಳಿಗೆ ಈ ಸೆಕೆಂಡ್ ಹ್ಯಾಂಡ್ ಕಬೋರ್ಡ್ ಖರೀದಿಸಿದರು. ಈಬೇ ವೆಬ್ ಸೈಟ್ ನಲ್ಲಿ ಕಬೋರ್ಡ್ ಅನ್ನು ಹೆಲ್ಲರ್ ಖರೀದಿ ಮಾಡಿದ್ದರು. ಸೈಟ್ ನಲ್ಲಿ ಇದ್ದ ಮೂಲಬೆಲೆಯಲ್ಲಿ 50 ಪೌಂಡ್ ಕಡಿಮೆ ಮಾಡಿಕೊಂಡು ಹೆಲ್ಲರ್ ಕಬೋರ್ಡ್ ಅನ್ನು ಖರೀದಿ ಮಾಡಿದ್ದರು.
ಕಾಕ್ ಪಿಟ್ ನಲ್ಲಿ ಪೈಲಟ್ ಸಿಗರೇಟ್ ಹಚ್ಚಿದ್ದರಿಂದ ವಿಮಾನಕ್ಕೆ ಬೆಂಕಿ!
ಆನ್ ಲೈನ್ ಸೈಟ್ ನಲ್ಲಿ ಖರೀದಿ ಮಾಡಿದ್ದ ಕಬೋರ್ಡ್ ಮನೆಗೆ ಬಂದಾಗ ಅದನ್ನ ಥಾಮಸ್ ಹೆಲ್ಲರ್ ಓಪನ್ ಮಾಡಿದ್ದರು. ಈ ವೇಳೆ ಕಬೋರ್ಡ್‌ನ ಕ್ಯಾಬಿನೆಟ್‌ನಲ್ಲಿ (Cabinet) ಎರಡು ಬಾಕ್ಸ್‌ಗಳನ್ನು ತೆರೆದಾಗ ಅದರಲ್ಲಿ ಒಂದು ಕೋಟಿ 20 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಆದರೆ ಥಾಮಸ್ ಪ್ರಾಮಾಣಿಕತೆ ತೋರಿ ಹಣವನ್ನು ಪೊಲೀಸರಿಗೆ (Police) ಒಪ್ಪಿಸಲು ನಿರ್ಧರಿಸಿದರು. ಥಾಮಸ್ ಅವರು ಕಬೋರ್ಡ್ ನಲ್ಲಿ ಸಿಕ್ಕ ಹಣವು ಅದರ ಮಾಲೀಕರಿಗೆ ಹೋಗಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದರು ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.
ಮಹಿಳಾ ರೂಮೇಟ್ ಪಡೆಯುವಾಸೆಯಿಂದ ಇಚಿತ್ರ ಷರತ್ತುಗಳನ್ನಿಟ್ಟ ವ್ಯಕ್ತಿ!
ಈ ಹಣವನ್ನು ಪೊಲೀಸರು ತನಿಖೆ ನಡೆಸಿದಾಗ ಅದು ಜರ್ಮನಿಯ ಹಾಲೆ (Halle) ನಗರದಲ್ಲಿ ವಾಸಿಸುವ 91 ವರ್ಷದ ಮಹಿಳೆಗೆ ಸೇರಿದ್ದು ಎಂದು ತಿಳಿದುಬಂದಿದೆ. ಆಕೆ ಕಬೋರ್ಡ್ ನ ಮೊದಲ ಮಾಲೀಕರೂ ಆಗಿದ್ದಳು. ಕಬೋರ್ಡ್ ಅನ್ನು ಮಹಿಳೆಯ ಮೊಮ್ಮಗ ಮಾರಾಟ ಮಾಡಿದ್ದಾರೆ. ವೃದ್ಧೆ ಅದರಲ್ಲಿ ಅಷ್ಟೊಂದು ಹಣ ಇಟ್ಟಿರುವುದು ಆತನಿಗೆ ಗೊತ್ತಿರಲಿಲ್ಲ.
ಸಿಕ್ಕ ಹಣವವನ್ನು ಇಟ್ಟುಕೊಳ್ಳುವುದು ಜರ್ಮಿಯಲ್ಲಿ ಅಪರಾಧ: ಜರ್ಮನಿ ದೇಶದಲ್ಲಿ ಒಂದು ನಿಯಮವಿದೆ. ರಸ್ತೆಯಲ್ಲಿ ಅಥವಾ ಅಚಾನಕ್ ಆಗಿ ಸಿಕ್ಕ ಹಣವನ್ನು ಇಟ್ಟುಕೊಳ್ಳುವುದು ಅಪರಾಧ. 1 ಸಾವಿರಕ್ಕಿಂತ ಹೆಚ್ಚಿನ ಮೊತ್ತ ಸಿಕ್ಕಲ್ಲಿ ಈ ಮಾಹಿತಿಯನ್ನು ಪೊಲೀಸರಿಗೆ ನೀಡಬೇಕು ಎನ್ನುವ ಕಾನೂನಿದೆ. ಇದರಲ್ಲಿ ಯಾರಾದರೂ ತಪ್ಪಿತಸ್ಥರು ಎಂದು ಕಂಡುಬಂದರೆ, ಅವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಆದರೆ ಯಾರಾದರೂ ಈ ಹಣವನ್ನು ಪ್ರಾಮಾಣಿಕವಾಗಿ ಹಿಂದಿರುಗಿಸಿದರೆ, ಅವರಿಗೆ ಬಹುಮಾನ ನೀಡಲಾಗುತ್ತದೆ ಎಂಬ ಕಾನೂನು ಕೂಡ ಇದೆ. ಥಾಮಸ್ ಹೆಲ್ಲರ್ ಹಣವನ್ನು ಪ್ರಾಮಾಣಿಕವಾಗಿ ಮರಳಿಸಿದ ಕಾರಣಕ್ಕೆ ಮೂರೂವರೆ ಲಕ್ಷ ರೂಪಾಯಿಯನ್ನು ಬಹುಮಾನವಾಗಿ ಪಡೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ