ಮಹಿಳಾ ರೂಮೇಟ್‌ ಪಡೆಯುವಾಸೆಯಿಂದ ಇಚಿತ್ರ ಷರತ್ತುಗಳನ್ನಿಟ್ಟ ವ್ಯಕ್ತಿ!

By Suvarna NewsFirst Published Apr 27, 2022, 5:04 PM IST
Highlights

* ಮಹಿಳಾ ರೂಂಮೇಟ್‌ ಪಡೆಯಲು ಇದೆಂತಹಾ ನಿಯಮ

* ಖಾಸಗಿತಕ್ಕೂ ಅವಕಾಶ ನೀಡದ ವ್ಯಕ್ತಿ

* ವೈರಲ್ ಆಯ್ತು ಓವನ್ ಕೊಟ್ಟ ಜಾಹೀರಾತು

ನವದೆಹಲಿ(ಏ.27): ರೂಂಮೇಟ್‌ ಹುಡುಕುವುದು ಡೇಟಿಂಗ್ ಮಾಡಲು ಜೊತೆಗಾರನನ್ನು ಹುಡುಕುವಷ್ಟೇ ಕಷ್ಟ. ಅನೇಕ ಬಾರಿ ನಿಮಗೆ ಸಿಗುವ ರೂಂಮೇಟ್‌ ಯಾವ ವ್ಯಕ್ತಿತ್ವದವರು ಎಂಬುವುದು ನಿಮ್ಮ ಅದೃಷ್ಟದ ಮೇಲೆ ಅವಲಂಭಿಸಿರುತ್ತದೆ. ಹೀಗಿರುವಾಗ ಕನಿಷ್ಠ ಪಕ್ಷ ತನಗೆ ವೃತ್ತಿಪರ, ಸಮಯ ಪಾಲಿಸುವ ಮತ್ತು ಸಂಘಟಿತ ವ್ಯಕ್ತಿಯೇ ರೂಂಮಟ್‌ ಆಗಿ ಸಿಗಲೆಂದು ಅನೇಕರು ಬಯಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನಗೆ ಓರ್ವ ಹೆಣ್ಣು ರೂಂಮೇಟ್‌ ಆಗಿ ಸಿಗಬೇಕೆಂದು ಬಯಸಿದ್ದಾನೆ. ಅದರಲ್ಲೂ ಈ ವ್ಯಕ್ತಿ ರೂಂಮೇಟ್‌ಗಾಗಿ ಹಾಕಿದ ಷರತ್ತುಗಳ ಬಹಳ ಇಂಟರೆಸ್ಟಿಂಗ್ ಆಗಿವೆ. ಈ ವಿಚಿತ್ರ ಷರತ್ತುಗಳ ಬಗ್ಗೆ ತಿಳಿದುಕೊಂಡ್ರೆ ನಿಮಗೂ ಅಚ್ಚರಿಯಾಗುತ್ತೆ.

ಹೌದು ಇಲ್ಲೊಬ್ಬ ವ್ಯಕ್ತಿ ತನಗಾಗಿ ರೂಂಮೇಟ್‌ ಹುಡುಕಾಟ ಆರಂಭಿಸಿದ್ದು, ಆತನ ಡಿಮ್ಯಾಂಡ್‌ ಕೇಳಿದ್ರೆ ಜೊತೆಗಾರ ಸಿಗೋದು ಬಹುತೇಕ ಅನುಮಾನವೇ ಸರಿ. ಹೌದು 44 ವರ್ಷದ ಮಧ್ಯವಯಸ್ಕ ವ್ಯಕ್ತಿ ಟ್ವಿಟರ್‌ನಲ್ಲಿ ಜಾಹೀರಾತು ಹಾಕುವ ಮೂಲಕ ತನ್ನ ಅಗತ್ಯಗಳನ್ನು ವ್ಯಕ್ತಪಡಿಸಿದ್ದಾರೆ. ಅವರ ಷರತ್ತುಗಳನ್ನು ಓದಿ ಎಲ್ಲರೂ ಬೆಚ್ಚಿ ಬಿದ್ದಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ, ಈ ವಿಚಿತ್ರ ಜಾಹೀರಾತು ವೈರಲ್ ಆಗಿದೆ.

Latest Videos

ಓವನ್ ಎಂಬ ಹೆಸರಿನ ಈ ವ್ಯಕ್ತಿ ಒಂದು ಕೋಣೆ ಹೊಂದಿದ್ದು, ಆತ ತನ್ನ ಕೋಣೆಯನ್ನು ವಿಶೇಷವಾಗಿ ಮಹಿಳೆಯೊಂದಿಗೆ ಹಂಚಿಕೊಳ್ಳಲು ಬಯಸುತ್ತಾನೆ. ಹೀಗಾಗಿಯೇ ಆತ ತನ್ನ ಅಗತ್ಯಗಳ ಪಟ್ಟಿ ಮಾಡಿದ್ದು ದಿನಗಳೆದಂತೆ ಈ ಪಟ್ಟಿ ಉದ್ದವಾಗುತ್ತಲೇ ಇದೆ. ಕೊನೆಯಾಗುವ ಲಕ್ಷಣಗಳೇ ಕಾಣುತ್ತಿಲ್ಲ. 

ಈತ ರೂಮೇಟ್‌ಗಾಗಿ ಇಟ್ಟ ಷರತ್ತುಗಳು ಹೀಗಿವೆ

* ಈ ಜಾಹೀರಾತಿನ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ ರೂಮ್‌ಮೇಟ್ ಬಯಸುವ ಪುರುಷನು ಕೇವಲ ಒಂದು ಕೋಣೆಯನ್ನು ಹೊಂದಿದ್ದಾನೆ ಮತ್ತು ಸ್ವತಃ ಪುರುಷನಾಗಿರುವುದರಿಂದ ಅವನು ಮಹಿಳಾ ರೂಮ್‌ಮೇಟ್‌ಗಾಗಿ ಹುಡುಕುತ್ತಿದ್ದಾನೆ.
* ಮಹಿಳೆಯ ವಯಸ್ಸು 18 ರಿಂದ 25 ವರ್ಷಗಳ ನಡುವೆ ಇರಬೇಕು.
* ಅಡುಗೆ ಮತ್ತು ಶುಚಿಗೊಳಿಸುವಲ್ಲಿ ಯಾವುದೇ ತೊಂದರೆ ಇರಬಾರದು.
* ಅವಳು ಮಲಗುವ ಕೋಣೆಯನ್ನು ಹಂಚಿಕೊಳ್ಳಲು ಸಿದ್ಧವಾಗುವವರೆಗೆ ಅವಳು ಮಂಚವನ್ನು ಬಳಸಬಹುದು.
* ಮನೆಯಲ್ಲಿ ಸಾಕುಪ್ರಾಣಿಗಳು ಇರುವುದಿಲ್ಲ, ಮದ್ಯಪಾನ ಮಾಡುವ ಸ್ವಾತಂತ್ರ್ಯವೂ ಇರುವುದಿಲ್ಲ.
* ಅಷ್ಟೇ ಅಲ್ಲ, ಯಾವುದೇ ಪುರುಷ ಸ್ನೇಹಿತ ಮನೆಗೆ ಬರುವಂತಿಲ್ಲ ಮತ್ತು ಡ್ರಗ್ಸ್ ಕೂಡ ನಿಷೇಧಿಸಲಾಗಿದೆ.
* ಬಹುಮುಖ್ಯ ವಿಷಯವೆಂದರೆ ಈ ಮನುಷ್ಯ ಮನೆಯಲ್ಲಿ ‘ಮುಚ್ಚಿದ ಬಾಗಿಲಿಲ್ಲ’ ಎಂಬ ನೀತಿಯನ್ನು ಇಟ್ಟುಕೊಂಡಿದ್ದಾನೆ.
ಇದು ಭದ್ರತೆಯ ದೃಷ್ಟಿಯಿಂದ ಮಾಡಿದ ನಿಯಮ ಎಂದು ಈ ವ್ಯಕ್ತಿ ಹೇಳಿಕೊಂಡಿದ್ದಾನೆ, ಆದರೆ ಮಹಿಳೆಯೊಂದಿಗೆ ಮನೆ ಹಂಚಿಕೊಳ್ಳುವಾಗ ಖಾಸಗಿತನವನ್ನು ನೀಡಬಾರದು ಎಂಬ ವಿಚಿತ್ರ ನಿಯಮವೇಕೆ?
* 30 ಸಾವಿರಕ್ಕೂ ಹೆಚ್ಚು ಬಾಡಿಗೆ

ಇಲ್ಲೊಬ್ಬರು ಪ್ರತಿ ತಿಂಗಳು 400 ಅಮೆರಿಕನ್ ಡಾಲರ್ ಗೂ ಹೆಚ್ಚು ಅಂದರೆ 30ವರೆ ಸಾವಿರ ರೂಪಾಯಿಗೆ ಮನೆ ಬಾಡಿಗೆ ನಿಗದಿ ಮಾಡಿದ್ದಾರೆ. ಈ ಜಾಹೀರಾತು ಟ್ವಿಟ್ಟರ್ ತಲುಪಿದಾಗಿನಿಂದ ಇದು ಹೆಚ್ಚು ವೈರಲ್ ಆಗುತ್ತಿದೆ. ಇದು 3.5 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ ಮತ್ತು ಜನರು ಒಂದಕ್ಕಿಂತ ಹೆಚ್ಚು ಕಾಮೆಂಟ್ ಮಾಡಿದ್ದಾರೆ.

click me!