95ರ ತಾತನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದ ಅಪರಿಚಿತರು : ವಿಡಿಯೋ

By Anusha KbFirst Published May 17, 2022, 1:14 PM IST
Highlights
  • 95ರ ಹರೆಯದ ತಾತನಿಗೆ ಹುಟ್ಟುಹಬ್ಬದ ಸಂಭ್ರಮ
  • ವಿಮಾನದ ಪ್ರಯಾಣಿಕರಿಂದ ವಿಭಿನ್ನವಾಗಿ ಆಚರಣೆ

ಹುಟ್ಟುಹಬ್ಬದ ಆಚರಣೆ (birthday celebration) ಇಂದು ದೊಡ್ಡ ಸಮಾರಂಭದಂತೆ ನಡೆಯುತ್ತಿದೆ. ಈಗಿನ ಜನರೇಷನ್ ಅಂತೂ ಕೇಕ್‌ ಕಟ್ಟಿಂಗ್ ಗಿಫ್ಟ್‌ ಪಾರ್ಟಿ ಅಂತ ಹುಟ್ಟುಹಬ್ಬವನೋ ಧಾಮ್ ಧೂಮ್ ಆಗಿ ಆಚರಿಸುತ್ತಾರೆ. ಆದರೆ ಹಳೆ ತಲೆ ಮಾರಿನವರಿಗೆ ತಾವು ಹುಟ್ಟಿದ್ದು ಯಾವಾಗ ಎಂಬುದು ಗೊತ್ತಿರಲಿಲ್ಲ. ಒಂದು ವೇಳೆ ಗೊತ್ತಿದ್ದರೂ ಈ ರೀತಿ ಸಂಭ್ರಮಾಚರಣೆಯ ಅವಕಾಶ ಕೆಲವು ದೊಡ್ಡ ದೊಡ್ಡ ಸಮಾಜದ ಶ್ರೀಮಂತ ಕುಟುಂಬಗಳಲ್ಲಿ ಇರುತ್ತಿದ್ದವೋ ಏನೋ. ಆದೇನೇ ಇರಲಿ ಹುಟ್ಟುಹಬ್ಬವೆಂಬುದು ಅನೇಕರಿಗೆ ಅವಿಸ್ಮರಣೀಯ ದಿನ. ಹಾಗೇಯೇ ಇಲ್ಲೊಬ್ಬರು ವೃದ್ಧರಿಗೆ ಅವರ 95ನೇ ಹುಟ್ಟುಹಬ್ಬದಂದು ವಿಶೇಷ ಉಡುಗೊರೆ ಸಿಕ್ಕಿದೆ.

ನಮ್ಮ ಅಥವಾ ನಮ್ಮ ಪ್ರೀತಿ ಪಾತ್ರರ (Loved ones) ಹುಟ್ಟುಹಬ್ಬವನ್ನು ಆಚರಿಸಲು ಕುಟುಂಬದವರು ಸ್ನೇಹಿತರು ವಿಶೇಷ ಕಾಳಜಿ ವಹಿಸುತ್ತಾರೆ. ನಿಮ್ಮನ್ನು ಖುಷಿ ಪಡಿಸಲು ನಿಮಗೆ ಸರ್‌ಫ್ರೈಸ್ ನೀಡಲು ಇನ್ನಿಲ್ಲದ ಸಾಹಸ ಮಾಡುತ್ತಾರೆ. ಈ ಖುಷಿಗೆ ಅಪರಿಚಿತರು (Strangers) ಜೊತೆಯಾದರೆ ಅದರ ಖುಷಿ ಇನ್ನಷ್ಟು ಹೆಚ್ಚುವುದರಲ್ಲಿ ಸಂಶಯವೇ ಇಲ್ಲ. ಹಾಗೆಯೇ ಇಲ್ಲೊಂದು ವಿಡಿಯೋದಲ್ಲಿ ವೃದ್ಧರೊಬ್ಬರ ಹುಟ್ಟುಹಬ್ಬಕ್ಕೆ ಇಡೀ ವಿಮಾನದ ಪ್ರಯಾಣಕರೇ ಜೊತೆಯಾಗಿದ್ದಾರೆ. ಆ ಸಂಭ್ರಮದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ (Viral video) ಆಗಿದೆ. 

"My dad turned 95 and I asked Southwest Airlines for a simple birthday shout out and they did this..❤️💙"

Flight attendants had asked passengers to close their windows and turn on their reading lights to replicate birthday candles."🎂
(📹:carolinepratt5)pic.twitter.com/tI3Ulz8jRS

— GoodNewsCorrespondent (@GoodNewsCorres1)

Latest Videos

 

ಬೆಂಗಳೂರು ತನ್ನ ಹಿರಿಯರನ್ನು ಹೇಗೆ ನಡೆಸಿಕೊಳ್ಳುತ್ತಿದೆ... ಬೆಚ್ಚಿ ಬೀಳಿಸುತ್ತಿದೆ ವರದಿ

ತಮ್ಮ ಹುಟ್ಟುಹಬ್ಬದಂದು ವಿಮಾನದಲ್ಲಿ ಎಲ್ಲೋ ತೆರಳಲು ಹೊರಟಿದ್ದ 95 ವರ್ಷ ಪ್ರಾಯದ ವೃದ್ಧರೊಬ್ಬರಿಗೆ ಇಡೀ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಎದ್ದು ನಿಂತು ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಫ್ಲೈಟ್ ಅಟೆಂಡರ್ ವ್ಯಕ್ತಿಯೊಬ್ಬರಿಗೆ ಹುಟ್ಟುಹಬ್ಬದ ಶುಭಾಶಯ ಕೋರುವಂತೆ ಅನೌನ್ಸ್‌ಮೆಂಟ್ ಮಾಡುತ್ತಾರೆ. ಈ ವೇಳೆ ವಿಮಾದಲ್ಲಿದ್ದ ಪ್ರಯಾಣಿಕರೆಲ್ಲರೂ ತಮ್ಮ ಕಿಟಕಿಗಳನ್ನು ಬಂದ್ ಮಾಡುತ್ತಾರೆ. ನಂತರ ವಿಮಾನದಲ್ಲಿರುವ ಓದುವುದಕ್ಕೆ ಬಳಸುವ ಸಣ್ಣ ಲೈಟ್‌ ಅನ್ನು ಮೇಣದ ಬತ್ತಿಯ ಪ್ರತಿಯಾಗಿ ಆನ್ ಮಾಡುತ್ತಾರೆ. ನಂತರ ಎಲ್ಲರೂ ಜೋರಾಗಿ ಹ್ಯಾಪಿ ಬರ್ತ್‌ಡೇ ಟು ಯೂ ಎಂದು ಬರ್ತ್‌ಡೇ ಹಾಡನ್ನು ಹಾಡುತ್ತಾರೆ.

ಹೀಗೆ ಅಪರಿಚಿತ ಸಹ ಪ್ರಯಾಣಿಕರಿಂದ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡ ವೃದ್ಧರ ಹೆಸರು ಜ್ಯಾಕ್ ಮೆಕಾರ್ಥಿ (Jack McCarthy) ನಮ್ಮ ಫ್ಲೈಟ್‌ನಲ್ಲಿ ನೀವು ಪ್ರಯಾಣಿಸುತ್ತಿರುವುದಕ್ಕೆ ನಮಗೆ ತುಂಬಾ ಖುಷಿಯಾಗಿದೆ. ನಾವಿಂದೂ ದಿನ ಪೂರ್ತಿ ನಿಮಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರುತ್ತೇವೆ ಎಂದು ವಿಮಾನದ ಗಗನಸಖಿ ತಮ್ಮ ಅನೌನ್ಸ್‌ಮೆಂಟ್‌ನಲ್ಲಿ ಹೇಳುತ್ತಾರೆ.

ಅಜ್ಜ-ಅಜ್ಜಿ ಮನೆ: ಜಸ್ಟ್‌ 50 ರೂ.ಗೆ ಅನ್‌ಲಿಮಿಟೆಡ್‌ ಮನೆಯೂಟ ನೀಡ್ತಾರೆ ವೃದ್ಧ ದಂಪತಿ


ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್ (Instagram) ಹಾಗೂ ಟ್ವಿಟ್ಟರ್‌ನಲ್ಲಿ (Twitter) ಈ ವಿಡಿಯೋ ವೈರಲ್‌ ಆಗಿದೆ. 'ನನ್ನ ತಂದೆಗೆ 95 ವರ್ಷಕ್ಕೆ ಕಾಲಿರಿಸಿದರು. ಹೀಗಾಗಿ ಸೌತ್‌ವೆಸ್ಟ್‌ ಏರ್‌ಲೈನ್ಸ್‌  ಅವರಿಗೆ ನಾನು ಸರಳವಾಗಿ ನನ್ನ ತಂದೆಗೆ ಬರ್ತ್‌ಡೇ ವಿಶ್‌ ಮಾಡಿಸುವಂತೆ ಕೇಳಿದೆ. ಗಗನಸಸಖಿ ವಿಮಾನದ ಪ್ರಯಾಣಿಕರಿಗೆ ಕಿಟಕಿಗಳನ್ನು ಬಂದ್ ಮಾಡುವಂತೆ ಕೇಳಿದರು. ಹಾಗೂ ತಮ್ಮ ರೀಡಿಂಗ್ ಲೈಟ್‌ನ್ನು ಕ್ಯಾಂಡಲ್‌ನ ಬದಲು ಉರಿಸುವಂತೆ ತಿಳಿಸಿದರು ಎಂದು ಗುಡ್‌ನ್ಯೂಸ್ ಮೂವ್‌ಮೆಂಟ್ ಎಂಬ ಟ್ವಿಟ್ಟರ್ ಖಾತೆ ಈ ವಿಡಿಯೋವನ್ನು ಪೋಸ್ಟ್ ಮಾಡಿ ಬರೆದುಕೊಂಡಿದೆ. 
 

click me!