ವಿದ್ಯಾರ್ಥಿ ಪ್ರೊಟೆಸ್ಟ್‌ನಲ್ಲಿ ಆಸ್ತಿ ಹಾನಿಯಾದ್ರೆ ಪೋಷಕರು ಪಾವಕಿಸಬೇಕು, ಹೊಸ ನೀತಿ ತಂದ PM ಮೆಲೋನಿ

Published : Oct 21, 2026, 06:37 PM IST
Italy protest law parental liability vandalism

ಸಾರಾಂಶ

ಪ್ರತಿಭಟನೆಯಲ್ಲಿ ಮಕ್ಕಳು ಸಾರ್ವಜನಿಕ ಆಸ್ತಿ ಹಾಳು ಮಾಡಿದರೆ, ಅಂಗಡಿ ಮುಗ್ಗಟ್ಟು ಲೂಟಿ ಹೊಡೆದರು ಮಕ್ಕಳ ಪೋಷಕರು ದಂಡ ಪಾವತಿಸಬೇಕು. ಇಷ್ಟೇ ಅಲ್ಲ ಈ ಪ್ರತಿಭಟನೆ ಹೊಣೆಯನ್ನು ಪೋಷಕರು ಹೊರಬೇಕು. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹೊಸ ನೀತಿ ಇದೀಗ ಭಾರಿ ಚರ್ಚೆಯಾಗುತ್ತಿದೆ.

ಇಟಲಿ (ಅ.21) ಭಾರತದಲ್ಲಿ ವಿದ್ಯಾರ್ಥಿಗಳ ಹೋರಾಟಗಳು ನಡೆಯುತ್ತಿದೆ. ಇನ್ನು ಫ್ರಾನ್ಸ್, ಬೆಲ್ಜಿಯಂ ಸೇರಿದಂತೆ ಯೂರೋಪ್ ರಾಷ್ಟ್ರದಲ್ಲ ವಿದ್ಯಾರ್ಥಿಗಳ ಹೆಸರಿನಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿದೆ. ಫ್ರಾನ್ಸ್ ಹೊತ್ತಿ ಉರಿಯುತ್ತಿದೆ. ಈ ಬೆಳವಣಿಗೆ ನಡುವೆ ಇಟಲಿಯಲ್ಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಕಟ್ಟು ನಿಟ್ಟಿನ ನಿಯಮ ಜಾರಿಗೆ ತಂದಿದ್ದಾರೆ. ಕಳೆದ ಹಲವು ವರ್ಷಗಳಿಂದ ಭಾರಿ ವಿವಾದಕ್ಕೆ ಕಾರಣಾಗಿದ್ದ ಈ ನೀತಿಯನ್ನು ಸದ್ಯದ ಪ್ರತಿಭಟನೆ ಬೆಳವಣಿಗೆ ನಡುವೆ ಜಾರಿಗೆ ತಂದಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರೆ ಈ ಪೈಕಿ ಅಪ್ರಾಪ್ತರು ಸಾರ್ವಜನಿಕ ಆಸ್ತಿ ಪಾಸ್ತಿ ನಾಶ ಮಾಡುವುದು, ಅಂಗಡಿ ಮುಂಗಟ್ಟುಗಳು ಲೂಟಿ ಮಾಡಿದರೆ ಅಪ್ರಾಪ್ತರ ಪೋಷಕರು ನಾಶದ ಹಣ ಪಾವತಿಸಬೇಕು. ಹೊಸ ನೀತಿಯನ್ನು ಪ್ರಧಾನಿ ಮೆಲೋನಿ ಘೋಷಿಸಿದ್ದಾರೆ.

ಅಪ್ರಾಪ್ತರ ಪೋಷಕರಿಂದ ವಸೂಲಿ

ಇಟಲಿ ಸರ್ಕಾರ ಹೊಸ ನೀತಿಗೆ ಅನುಮೋದನೆ ನೀಡಿದೆ. ದಂಗೆ,ಹಿಂಸೆ ವೇಳೆ ಹಲವು ಬಾರಿ ಅಪ್ರಾಪ್ತರು ಅನ್ನೋ ಕಾರಣಕ್ಕೆ ಶಿಕ್ಷೆ ನೀಡಲು, ಸಾರ್ವಜನಿಕ ಆಸ್ತಿ ಪಾಸ್ತಿ ನಾಶದ ಹೊಣೆಯನ್ನು ಹೊರಿಸಲು ಸಾಧ್ಯವಾಗುವುದಿಲ್ಲ. ಇದು ಸರ್ಕಾರದ ಬೊಕ್ಕಸದ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲ, ಮತ್ತಷ್ಟು ಅಪ್ರಾಪ್ತರು ಅಪರಾಧ ಎಸಗಲು ಆಹ್ವಾನ ನೀಡಿದಂತೆ ಎಂಬ ಚರ್ಚೆ ನಡೆಯುತ್ತಲೇ ಇತ್ತು. ಸದ್ಯ ಯೂರೋಪ್ ಎಲ್ಲೆಡೆ ವಿದ್ಯಾರ್ಥಿ ಹೆಸರಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅಂಗಡಿಗಳನ್ನು ಲೂಟಿ ಮಾಡಲಾಗುತ್ತಿದೆ. ಪಾರಂಪರಿಕ ಕಟ್ಟಗಳು, ಐತಿಹಾಸಿಕ ಕಟ್ಟಡಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಇಟಲಿ ಸರ್ಕಾರ ಹೊಸ ನೀತಿಗೆ ಅನುಮೋದನೆ ನೀಡಿದೆ.

ಹೊತ್ತಿ ಉರಿಯುತ್ತಿದೆ ಉತ್ತರ ಇಟಲಿ

ಉತ್ತರ ಇಟಲಿಯಲ್ಲಿ ಹಿಂಸಾತ್ಮಕ ಪ್ರತಿಭಟನೆ ತೀವ್ರಗೊಂಡಿದೆ. ಭಾರಿ ಪ್ರಮಾಣದಲ್ಲಿ ಆಸ್ತಿಪಾಸ್ತಿಗಳು ನಾಶವಾಗಿದೆ. ಉತ್ತರ ಇಟಲಿಯ ಹಲವು ಭಾಗದಲ್ಲಿ ವಿದ್ಯಾರ್ಥಿಗಳು, ಅಪ್ರಾಪ್ತ ವಯಸ್ಕರು ಪ್ರತಿಭಟನೆ ಹೆಸರಿನಲ್ಲಿ ಬೀದಿಗಿಳಿದಿದ್ದಾರೆ. ಪೊಲೀಸರ ಮೇಲೂ ದಾಳಿ ಮಾಡಿದ್ದಾರೆ. ಅಂಗಡಿಗಳ ಗಾಜು, ಬಾಗಿಲು ಮುರಿದು ಇದ್ದ ವಸ್ತುಗಳನ್ನು ದೋಚಿದ್ದಾರೆ. ಹಲವು ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಮೆಲೋನಿ ಹೊಸ ನೀತಿ ಜಾರಿಗೆ ತಂದಿದ್ದಾರೆ.

ಹೊಸ ನೀತಿಗೆ ಅನುಮೋದನೆ ನೀಡಿದ ಬಳಿಕ ಈ ಕುರಿತು ಜಾರ್ಜಿಯಾ ಮೆಲೋನಿ ಪ್ರತಿಕ್ರಿಯಿಸಿದ್ದಾರೆ. ಪ್ರತಿಭಟಿಸಲು ಎಲ್ಲರಿಗೂ ಹಕ್ಕು ಇದೆ. ಪ್ರತಿಭಟನೆ ಹೆಸರಿನಲ್ಲಿ ಸಾರ್ವಜನಿಕ ಆಸ್ತಿ ನಾಶ ಮಾಡುವುದು, ಅಂಗಡಿಗಳ ಲೂಟಿ ಮಾಡುವುದು ಅಪರಾಧವಾಗಿದೆ. ಇದಕ್ಕೆ ಸರ್ಕಾರ ಅವಕಾಶ ಕೊಡುವುದಿಲ್ಲ. ಸಾರ್ವಜನಿಕ ಆಸ್ತಿ ನಾಶ ಮಾಡುವುದು, ಲೂಟಿ ಮಾಡುವುದು ಕ್ರಿಮಿನಲ್ ಪ್ರಕರಣಗಳಾಗಿದೆ. ಇದಕ್ಕೆ ತಕ್ಕೆ ಶಿಕ್ಷೆ ನೀಡಲಾಗುತ್ತದೆ. ಅಪ್ರಾಪ್ತ ಮಕ್ಕಳನ್ನೇ ಈ ಪ್ರತಿಭಟನೆಯಲ್ಲಿ ಬಳಸಿಕೊಳ್ಳಲಾಗುತ್ತದೆ. ಹೀಗಾಗಿ ಪೋಷಕರು ದುಬಾರಿ ದಂಡ ಪಾವತಿಸಬೇಕಾಗುತ್ತದೆ ಎಂದು ಮೆಲೋನಿ ಎಚ್ಚರಿಸಿದ್ದಾರೆ.

ಪ್ರತಿಭಟನೆ ವೇಳೆ ಆಸ್ತಿ ಪಾಸ್ತಿ ನಷ್ಟವಾದರೆ ಪ್ರತಿಭಟನಕಾರರು ಹೊಣೆಯಾಗುತ್ತಾರೆ. ಪ್ರತಿಭಟನೆಯಲ್ಲಿ ಯಾರು ಪಾಲ್ಗೊಳ್ಳುತ್ತಾರೆ, ಪ್ರತಿಭಟನೆ ಯಾವುದೇ ಕ್ಷಣದಲ್ಲೂ ಆಯೋಜಕರ ಕೈಯಿಂದ ಹೈಜಾಕ್ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಂಘಟಕರ ಮೇಲಿರುತ್ತದೆ. ಆಸ್ತಿ ಪಾಸ್ತಿ ನಾಶವಾದರೆ ಅವರೇ ಹೊಣೆಗಾರರು, ಅಪ್ರಾಪ್ತರಾಗಿದ್ದರೆ, ಪೋಷಕರು ಹೊಣೆಗಾರರು ಎಂದು ಮೆಲೋನಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

58 ಮಕ್ಕಳ ತಂದೆ! ಮಕ್ಕಳ ಹೆಸರೇ ನೆನಪಿಲ್ಲ, ಹೊಟ್ಟೆ ತುಂಬಿಸಲು ಪರದಾಟ.. ಆದರೂ ಮಕ್ಕಳನ್ನು ಹೆರುತ್ತಲೇ ಇದ್ದಾನೆ
ಮೆಕ್ಕಾದಲ್ಲಿ ಮುತ್ತು ಕೊಟ್ಟಿದ್ದಕ್ಕೆ ಪತಿ-ಪತ್ನಿಯ ಶಿರಚ್ಛೇದನ: ಕಂದಮ್ಮ ಅನಾಥ- ಅಸಲಿಗೆ ಅಲ್ಲಿ ಆಗಿದ್ದೇ ಬೇರೆ