58 ಮಕ್ಕಳ ತಂದೆ! ಮಕ್ಕಳ ಹೆಸರೇ ನೆನಪಿಲ್ಲ, ಹೊಟ್ಟೆ ತುಂಬಿಸಲು ಪರದಾಟ.. ಆದರೂ ಮಕ್ಕಳನ್ನು ಹೆರುತ್ತಲೇ ಇದ್ದಾನೆ

Published : Oct 21, 2026, 06:01 PM IST
Afghan Father 58 Children Extreme Poverty Struggles to Feed Family

ಸಾರಾಂಶ

ಆತನಿಗೆ ಬರೋಬ್ಬರಿ 70ಕ್ಕೂ ಹೆಚ್ಚು ಮಕ್ಕಳು. ಅವರಲ್ಲಿ ಸದ್ಯ ಬದುಕಿರೊದು 58 ಮಕ್ಕಳು. ತನ್ನ ಮಕ್ಕಳ ಹೆಸರೇ ಗೊತ್ತಿರದ ಈತನಿಗೆ ಇನ್ನೂ ಮಕ್ಕಳನ್ನ ಮಾಡಿಕೊಳ್ಳುವ ಹೆಸರು. ಅಂದ್ಹಾಗೆ ಈತನ ಕಿರಿಯ ಮಗುವಿಗೆ ಈಗಷ್ಟೇ ಮೂರು ತಿಂಗಳು.

ಇವತ್ತಿನ ಯುವಕರು ಮದುವೆ ಮಾಡಿಕೊಂಡರೂ ಮಕ್ಕಳೇ ಬೇಡ ಎಂದು ದೂರ ಸರಿಯುತ್ತಿದ್ದಾರೆ. ಅವರಿವರ ಒತ್ತಾಯಕ್ಕೆ ಮಾಡಿಕೊಂಡರೂ ಒಂದು ಅಥವಾ ಎರಡು ಮಕ್ಕಳಿಗೆ ಸುಸ್ತಾಗಿ ಹೋಗುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಇದ್ದಾನೆ. ಆತನಿಗೆ ಬರೋಬ್ಬರಿ 70ಕ್ಕೂ ಹೆಚ್ಚು ಮಕ್ಕಳು. ಅವರಲ್ಲಿ ಸದ್ಯ ಬದುಕಿರೊದು 58 ಮಕ್ಕಳು. ತನ್ನ ಮಕ್ಕಳ ಹೆಸರೇ ಗೊತ್ತಿರದ ಈತನಿಗೆ ಇನ್ನೂ ಮಕ್ಕಳನ್ನ ಮಾಡಿಕೊಳ್ಳುವ ಹೆಸರು. ಅಂದ್ಹಾಗೆ ಈತನ ಕಿರಿಯ ಮಗನಿಗೆ ಈಗಷ್ಟೇ ಮೂರು ತಿಂಗಳು.

ಅಂದ್ಹಾಗೆ ಆತನ ಹೆಸರು ಮುಹಮ್ಮದ್ ಸಾದಿಕ್. ಆಫ್ಘಾನಿಸ್ತಾನ ಮೂಲದ ಈತ, ತನ್ನ 58 ಮಕ್ಕಳ ಸಾಕಲು ಆಗದೇ ಪರದಾಟ ನಡೆಸ್ತಿದ್ದಾನೆ. ಈ ಬಗ್ಗೆ ಬಿಬಿಸಿ ಗ್ಲೋಬಲ್ ವುಮೆನ್ ವರದಿ ಮಾಡಿದೆ. ಆ ವರದಿಗಳ ಪ್ರಕಾರ.. ಸಾಧಿಕ್ ಅವರ ಕಿರಿಯ ಮಗುವಿಗೆ ಕೇವಲ ಮೂರು ತಿಂಗಳು. ಇಷ್ಟೊಂದು ಮಕ್ಕಳನ್ನ ಮಾಡಿಕೊಂಡಿರುವ ಸಾಧಿಕ್ ಅತ್ಯಂತ ಅಗರ್ಭ ಶ್ರೀಮಂತ ಅಲ್ಲವೇ ಅಲ್ಲ. ಆತ ಗಳಿಸೋದು ಅತ್ಯಲ್ಪ ಆದಾಯ. ಇದರಿಂದಾಗಿ ಆತ ತನ್ನ ಕುಟುಂಬದ ದೈನಂದಿನ ಅಗತ್ಯಗಳನ್ನು ಪೂರೈಸಲು ಕಷ್ಟಪಡುತ್ತಿದ್ದಾನೆ. ಅದೆಷ್ಟೋ ಮಕ್ಕಳು ಸಾಕಷ್ಟು ಆಹಾರ, ಪಾದರಕ್ಷೆಗಳು ಮತ್ತು ಇತರ ಅಗತ್ಯ ವಸ್ತುಗಳಿಲ್ಲದೇ ಪರದಾಟ ನಡೆಸ್ತಿದ್ದಾರೆ.

ಸಾಧಿಕ್ ಕಾರು ಮಾರಾಟದ ಮಳಿಗೆಯಲ್ಲಿ ಕೆಲಸ ಮಾಡುತ್ತಾನೆ. ಕಾರು ಮಾರಾಟದಿಂದ ಬಂದ ಆದಾಯಕ್ಕೆ ಅನುಗುಣವಾಗಿ ಹಣ ಸಂಪಾದನೆ ಮಾಡುತ್ತಾನೆ. ಕಾರುಗಳ ಮಾರಾಟದಿಂದ ಬರುವ ಆದಾಯವೇ ಈತನ ಏಕೈಕ ಆದಾಯದ ಮೂಲ. ಹೀಗಾಗಿ ಅವನ ಎಲ್ಲಾ ಮಕ್ಕಳಿಗೆ ಹೊಟ್ಟೆಗೆ, ಬಟ್ಟೆಗೆ ಮಾಡೋದೇ ಕಷ್ಟವಾಗಿದೆ.

ಹೇಗಿದೆ ಮನೆಯ ವಾತಾವರಣ?

ಅಷ್ಟೊಂದು ಮಕ್ಕಳನ್ನು ಮಾಡಿಕೊಂಡಿರುವ ಪುಣ್ಯಾತ್ಮನಿಗೆ ಉಳಿದುಕೊಳ್ಳಲು ಸರಿಯಾದ ಒಂದು ಮನೆ ಕೂಡ ಇಲ್ಲ. ಮನೆ ಬಾಗಿಲು ಇಲ್ಲ. ಕಿಟಕಿಗಳು ಇಲ್ಲ. ಮಳೆ ಬಂದರೆ ಅವರು ಮಾತ್ರವಲ್ಲ, ಮನೆಯಲ್ಲಿರುವ ವಸ್ತುಗಳೂ ಕೂಡ ಒದ್ದೆ ಆಗುತ್ತವೆ. ಗ್ಯಾಸ್ ವ್ಯವಸ್ಥೆಯೂ ಇಲ್ಲ. ಕಟ್ಟಿಗೆಯಿಂದಲೇ ಅಡುಗೆ ಮಾಡಬೇಕು. ಕಟ್ಟಿಗೆ ಪಡೆಯಲು ಇವರ ಬಳಿ ಅಷ್ಟೊಂದು ಹಣ ಇಲ್ಲ. ಹೀಗಾಗಿ ಆಗಾಗ ಪೇಪರ್‍‌ಗಳನ್ನು ಉರಿಸಲಾಗುತ್ತದೆ. ಹಂಗೋ, ಹಿಂಗೋ ಜೀವನ ನಡೆಯುತ್ತಿದೆ ಎಂದು ವರದಿಯಾಗಿದೆ.

ಸಾಧಿಕ್ ಹೇಳೋದೇನು?

ನನ್ನ ಮನೆಯಲ್ಲಿ ಮಕ್ಕಳೇ ತುಂಬಿ ಹೋಗಿದ್ದಾರೆ. ಹೀಗಾಗಿ ಅವರೆಲ್ಲರ ಹೆಸರು ನೆನಪಿಟ್ಟುಕೊಳ್ಳುವುದು ಕಷ್ಟವಾಗಿದೆ. ನನಗೆ ಅವರೆಲ್ಲರ ಹೆಸರುಗಳು ನೆನಪಿಲ್ಲ. ಹೆಚ್ಚಿನ ಸಮಯ, ನಾನು ಅವರನ್ನು ಮಗ ಅಥವಾ ಮಗು ಎಂದು ಕರೆಯುತ್ತೇನೆ. ಒಬ್ಬ ತಂದೆಯಾಗಿ ತನ್ನ ಜವಾಬ್ದಾರಿಗಳನ್ನು ಪೂರೈಸಲು ಸಾಧ್ಯವಾಗಿಲ್ಲ. ವಿಶೇಷವಾಗಿ ತಮ್ಮ ಮಕ್ಕಳ ಮೂಲಭೂತ ಅಗತ್ಯಗಳನ್ನು ಪೂರೈಸುವ ವಿಚಾರದಲ್ಲಿ ಎಂದು ಬಿಬಿಸಿ ನಡೆಸಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾನೆ.

ನನ್ನ ಹೆಂಡತಿಯರು ಚಿಕ್ಕವರಿದ್ದಾಗ ಮದುವೆಯಾದೆ. ನನ್ನ ಅನೇಕ ಮಕ್ಕಳು ಸತ್ತರು ಏಕೆಂದರೆ ಅವರ ತಾಯಂದಿರು ತುಂಬಾ ಚಿಕ್ಕವರಾಗಿದ್ದರು. ಅವರಿಗೆ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು, ಅವರಿಗೆ ಹಾಲುಣಿಸುವುದು ಅಥವಾ ನೋಡಿಕೊಳ್ಳುವುದು ಹೇಗೆ ಎಂದು ತಿಳಿದಿರಲಿಲ್ಲ. ನನ್ನ ಕೆಲವು ಮಕ್ಕಳು ಕ್ಷಯ, ನಾಯಿಕೆಮ್ಮು ಮತ್ತು ದಡಾರದಿಂದ ಸತ್ತರು. ನಾವು ಆಹಾರವನ್ನು ಪಡೆಯಲು ಕಷ್ಟಪಡುತ್ತೇವೆ. ಇದು ನನಗೆ ಮೊದಲೇ ಗೊತ್ತಾಗಿದ್ದರೆ ಇಷ್ಟೊಂದು ಮಕ್ಕಳು ಆಗುತ್ತಿರಲಿಲ್ಲ ಎಂದಿದ್ದಾನೆ.ಆತ ಹೇಳಿಕೊಂಡಿರುವ ಪ್ರಕಾರ ಪ್ರಸ್ತುತ ನಾಲ್ಕು ಪತ್ನಿಯರನ್ನು ಹೊಂದಿದ್ದಾನೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಕ್ಕಾದಲ್ಲಿ ಮುತ್ತು ಕೊಟ್ಟಿದ್ದಕ್ಕೆ ಪತಿ-ಪತ್ನಿಯ ಶಿರಚ್ಛೇದನ: ಕಂದಮ್ಮ ಅನಾಥ- ಅಸಲಿಗೆ ಅಲ್ಲಿ ಆಗಿದ್ದೇ ಬೇರೆ
ಉಲ್ಟಾ ಆಗುತ್ತಾ ಭೂಮಿ? ಪೃಥ್ವಿಯ ನಾರ್ತ್ ಹಾಗೂ ಸೌತ್ ಪೋಲ್ ಸ್ಥಾನ ಬದಲು ಪತ್ತೆ ಹಚ್ಚಿದ ಅಧ್ಯಯನ