ರಿಯಾಲಿಟಿ ಶೋನಲ್ಲಿ ಹನಿಮೂನ್‌ ಬಗ್ಗೆ ಪ್ರಶ್ನೆ, 'ಮರ್ಯಾದೆ ಇಲ್ವಾ..' ಅಂತಾ ನಿರೂಪಕನಿಗೆ ಕೆನ್ನೆಗೆ ಬಾರಿಸಿದ ಗಾಯಕಿ!

Published : Feb 28, 2024, 04:37 PM IST
ರಿಯಾಲಿಟಿ ಶೋನಲ್ಲಿ ಹನಿಮೂನ್‌ ಬಗ್ಗೆ ಪ್ರಶ್ನೆ, 'ಮರ್ಯಾದೆ ಇಲ್ವಾ..' ಅಂತಾ ನಿರೂಪಕನಿಗೆ ಕೆನ್ನೆಗೆ ಬಾರಿಸಿದ ಗಾಯಕಿ!

ಸಾರಾಂಶ

ರಿಯಾಲಿಟಿ ಶೋನಲ್ಲಿ ಹನಿಮೂನ್‌ ಕುರಿತಾದ ಪ್ರಶ್ನೆ ಕೇಳಿದ್ದಕ್ಕೆ ಗಾಯಕಿಯೊಬ್ಬರು ರಿಯಾಲಿಟಿ ಶೋನ ನಿರೂಪಕನಿಗೆ ಕೆನ್ನೆಗೆ ಬಾರಿಸಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.  

ನವದೆಹಲಿ (ಫೆ.28): ಪಾಕಿಸ್ತಾನದ ಗಾಯಕಿ ಶಾಜಿಯಾ ಮಂಜೂರ್‌ ಅವರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ. ರಿಯಾಲಿಟಿ ಶೋನಲ್ಲಿ ಸಹ ನಿರೂಪಕ ಕೇಳಿದ ಪ್ರಶ್ನೆಗೆ ಕಿಡಿಕಿಡಿಯಾಗುವ ಆಕೆ ತಕ್ಷಣವೇ ಆತನ ಕೆನ್ನೆಗೆ ಬಾರಿಸಿ ಹಲ್ಲೆ ಮಾಡಿರುವ ವಿಡಿಯೋ ಇದಾಗಿದೆ. ಕಾರ್ಯಕ್ರಮದ ಸಹ ನಿರೂಪಕನಾಗಿದ್ದ ಹಾಸ್ಯ ಕಲಾವಿದ ಶೆರ್ರಿ ನನ್ಹಾ, ಶಾಜಿಯಾ ಮಂಜೂರ್‌ ಅವರ ಹನಿಮೂನ್‌ ಕುರಿತಾಗಿ ಕಾಮೆಂಟ್‌ ಮಾಡಿದ್ದರು. ಇದರ ಬೆನ್ನಲ್ಲಿಯೇ ಸಿಟ್ಟಾದ ಆಕೆ, ನಿರೂಪಕನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಅದು ಮಾತ್ರವಲ್ಲದೆ, ನಿರೂಪಕನ ಕೆನ್ನೆಗೂ ಬಾರಿಸಿ ಹಲ್ಲೆ ಮಾಡಿದ್ದಾರೆ. ಈ ವಿಡಿಯೋದಲ್ಲಿ  ಶೆರ್ರಿ ನನ್ಹಾ ಮಾತನಾಡಿರುವುದು ಕೂಡ ಸೆರೆಯಾಗಿದೆ. 'ನಮ್ಮ ಮದುವೆಯಾದ ಬಳಿಕ ನಿಮ್ಮನ್ನು ನೇರವಾಗಿ ಮಾಂಟೆ ಕಾರ್ಲೋಗೆ ಹನಿಮೂನ್‌ಗೆ ಕರೆದುಕೊಂಡು ಹೋಗುತ್ತೇನೆ. ನೀವು ಯಾವ ಕ್ಲಾಸ್‌ನ ವಿಮಾನದ ಟಿಕೆಟ್‌ನಲ್ಲಿ ಪ್ರಯಾಣ ಮಾಡಲು ಇಚ್ಛಿಸ್ತಿರೀ ಅಂತಾ ತಿಳಿಸ್ತೀರಾ' ಎಂದು ತಮಾಷೆಯಾಗಿ ಪ್ರಶ್ನೆ ಮಾಡಿದ್ದಾರೆ. ಆದರೆ ಇದು ಶಾಜಿಯಾ ಮಂಜೂರ್‌ಗೆ ತಮಾಷೆಯಾಗಿ ಕಂಡಿಲ್ಲ.

ತಕ್ಷಣವೇ ತಾನು ಕುಳಿತ ಸ್ಥಳದಿಂದ ಎದ್ದ ಶಾಜಿಯಾ ಮಂಜೂರ್‌,  ಶೆರ್ರಿ ನನ್ಹಾಗೆ ಗಂಭೀರವಾಗಿ ಎಚ್ಚರಿಕೆ ನೀಡಿದ್ದು ಮಾತ್ರವಲ್ಲದೆ ಕೆಲವೇ ಹೊತ್ತಿನಲ್ಲಿ ಆಕೆಯ ಹಾಸ್ಯ ಕಲಾವಿದನ ಕೆನೆಗೆ ಏಟು ಕೂಡ ಬಾರಿಸಿದರು. ಇದು ಪ್ರಧಾನ ನಿರೂಪಕ ಹೈದರ್‌ ಮಾತ್ರವಲ್ಲದೆ, ಸೆಟ್‌ನಲ್ಲಿದ್ದ ಎಲ್ಲರಿಗೂ ಆಘಾತ ನೀಡಿತ್ತು.

ವಿಶೇಷವೆಂದರೆ, ಹೆಚ್ಚಿನವರು ಇದು ಪ್ರ್ಯಾಂಕ್‌ ಆಗಿರಬಹುದು ಎಂದು ಅಂದಾಜಿಸಿದ್ದರು. ಇದೇ ಶೋನಲ್ಲಿ ಹಿಂದೊಮ್ಮೆ ಬಂದಿದ್ದ ಶಾಜಿಯಾ ಮಂಜೂರ್‌ ಆಕರ್ಷಕವಾಗಿ ತಮಾಷೆ ಮಾಡಿದ್ದರು. ಈ ಬಾರಿಯೂ ಕೂಡ ಇದು ತಮಾಷೆಯಾಗಿರಬಹುದು ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ, ಸ್ಥತಿ ಗಂಭೀರವಾಗಿದ್ದನ್ನು ಕಂಡ ಸೆಟ್‌ನಲ್ಲಿದ್ದ ಜನ ಶಾಜಿಯಾ ಮಂಜೂರ್‌ ಅವರ ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. 'ಕಳೆದ ಬಾರಿ ಕೂಡ ನೀನು ಇದೇ ರೀತಿ ವರ್ತನೆ ಮಾಡಿದ್ದೆ. ಆದರೆ, ಆ ವೇಳೆ ಅದನ್ನು ಪ್ರ್ಯಾಂಕ್‌ ಎನ್ನುವ ಮೂಲಕ ನಾನು ಕವರ್‌ಅಪ್‌ ಮಾಡಿದ್ದೆ. ಆದರೆ, ಈ ಬಾರಿ ನಾನು ಸೀರಿಯಸ್‌ ಆಗಿದ್ದೇನೆ' ಎಂದು ಶಾಜಿಯಾ ಮಂಜೂರ್‌ ಹೇಳಿದ್ದಾರೆ.

ಫಿನಾಲೆ ಔಟ್ ಫಿಟ್‌ನಲ್ಲಿ ಬೋಲ್ಡ್ ಆಗಿ ಪೋಸ್ ಕೊಟ್ಟ ತನಿಷಾ…. ಏನಮ್ಮಾ ನಿನ್ನ ಅವತಾರ ಅಂತಿದ್ದಾರೆ ಜನ

ಈ ವಿಡಿಯೋ ಕೆಲವೇ ಕ್ಷಣದಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು ಮಾತ್ರವಲ್ಲ, ಸಾಕಷ್ಟು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಹೆಚ್ಚಿನವರು ಈ ಕ್ಲಿಪ್‌, ಸ್ಕ್ರಿಪ್ಟೆಡ್‌ ಆಗಿರುವ ಸಾಧ್ಯತೆ ಇದೆ ಎಂದಿದ್ದಾರೆ. ಇನ್ನೊಬ್ಬ ವ್ಯಕ್ತಿ, 'ಜಗತ್ತಿನವರು ಇದರ ಬಗ್ಗೆ ಅಚ್ಚರಿ ಪಡುವ ಅಗತ್ಯವಿಲ್ಲ. ಪಾಕಿಸ್ತಾನದಲ್ಲಿ ಇಂಥ ರಿಯಾಲಿಟಿ ಶೋಗಳಲ್ಲಿ ಇಂಥವೆಲ್ಲ ಘಟನೆಗಳು ಸಾಮಾನ್ಯ' ಎಂದು ಹೇಳಿದ್ದಾರೆ. ನನಗೆ ಇದನ್ನು ನೋಡಿ ಕಪಿಲ್‌ ಶರ್ಮ ಅವರ ನೆನಪಿ ಬಂತು. ಪಾಪ ಆತನಿಗೆ ಇದೇ ರೀತಿ ಯಾರೋ ಹೊಡೆಯದಿದ್ದರೆ ಸಾಕು ಎಂದು ಕಾಮೆಂಟ್‌ ಮಾಡಿದ್ದಾರೆ.

ಕ್ರಾಪ್ ಟಾಪ್ , ಜೀನ್ಸಲ್ಲಿ ಮಿಂಚಿದ ತನಿಷಾ ಕುಪ್ಪಂಡ: ಸೀರೆ ಉಟ್ಕೊಳಿ ಮೇಡಂ ಎಂದ ಜನ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ ತೆರಿಗೆ ಶಾಕ್‌ಗೆ ಚೀನಾ ದಾಖಲೆಯ ತಿರುಗೇಟು
ಮೋದಿ ರೀತಿ ರೈತರಿಗೆ ಟ್ರಂಪ್‌ ಹಣ ವರ್ಗಾವಣೆ