ಇಬ್ಬರು ಬಾಲಕರನ್ನ ಅಪಹರಿಸಿ ಮಸೀದಿಯಲ್ಲಿ ರೇ*ಪ್: ಪಾಕಿಸ್ತಾನಿ ಸೋದರರಿಗೆ ಶಿಕ್ಷೆ ಪ್ರಕಟ

Published : Aug 31, 2025, 02:28 PM IST
Mia Brothers

ಸಾರಾಂಶ

ಪಾಕಿಸ್ತಾನ ಮೂಲದ ಮೂವರು ಮಿಯಾ ಸಹೋದರರಿಗೆ ಬಾಲಕಿಯ ಮೇಲಿನ ಅತ್ಯಾ*ಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ವಿಧಿಸಲಾಗಿದೆ. 7 ವರ್ಷದ ಬಾಲಕಿ ಮೇಲೆ ಅತ್ಯಾ*ಚಾರ ಎಸಗಿದ ಆರೋಪದ ಮೇಲೆ ಮೂವರನ್ನು ದೋಷಿಗಳೆಂದು ಘೋಷಿಸಲಾಗಿದೆ.

ಲಂಡನ್: ಪಾಕಿಸ್ತಾನದ ಮೂವರು ಮಿಯಾ ಸೋದರರಿಗೆ ಲಂಡನ್ ನ್ಯಾಯಾಲಯ ಜೈಲು ಶಿಕ್ಷೆ ನೀಡಿದೆ. ಅರ್ಜಿಯ ವಿಚಾರಣೆ ನಡೆಸಿದ ಪ್ರೆಸ್ಟನ್ ಕ್ರೌನ್ ಟ್ರಯಲ್ ಕೋರ್ಟ್ ಅಕ್ಟೋಬರ್‌ನಲ್ಲಿ ಮೂವರನ್ನು ದೋಷಿಗಳೆಂದು ತೀರ್ಪು ನೀಡಿತ್ತು. ಈ ಮೂವರು ಸೋದರರು 7 ವರ್ಷದ ಬಾಲಕಿ ಮೇಲೆ ಅತ್ಯಾ*ಚಾರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದರು. 1996 ರಿಂದ 2012ರ ಅವಧಿಯಲ್ಲಿ ಮೂವರ ವಿರುದ್ಧ ಒಟ್ಟು 62 ಅಪರಾಧ ಪ್ರಕರಣಗಳು ದಾಖಲಾಗಿದ್ದವು. ತಮ್ಮ ವಿರುದ್ಧ ಕೇಳಿ ಬಂದ ಎಲ್ಲಾ ಅರೋಪಗಳನ್ನು ಮೂವರು ಸೋದರರು ಅಲ್ಲಗಳೆದಿದ್ದಿರು ಎಂದು ಬಿಬಿಸಿ ವರದಿ ಮಾಡಿದೆ. ಮೂವರ ಪೈಕಿ ಇಬ್ಬರಿಗೆ 22 ವರ್ಷ ಕಠಿಣ ಕಾರಾಗೃಹ ಸಜೆ ಮತ್ತು ಜೀವಾವಧಿ ಶಿಕ್ಷೆಯ ತೀರ್ಪು ನೀಡಿದೆ. ಮತ್ತೋರ್ವ ದೋಷಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಲೀಡ್ಸ್‌ನ ಬಿಸ್ಮಾರ್ಕ್ ಸ್ಟ್ರೀಟ್‌ನ 49 ವರ್ಷದ ಶಹಾ ಅಮ್ರಾನ್ ಮಿಯಾ ಮತ್ತು ಲೀಡ್ಸ್‌ನ ರೋಲ್ಯಾಂಡ್ ಟೆರೇಸ್‌ನ 38 ವರ್ಷದ ಶಹಾ ಜೋಮನ್ ಮಿಯಾ ಇಬ್ಬರಿಗೂ ಜೀವಾವಧಿ ಶಿಕ್ಷೆ, 20 ವರ್ಷ ಕಠಿಣ ಕಾರಾಗೃಹ, ಡಾನ್‌ಕಾಸ್ಟರ್‌ನ ವಾರ್ಮ್ಸ್‌ವರ್ತ್ ರಸ್ತೆಯ 47 ವರ್ಷದ ಶಹಾ ಅಲ್ಮಾನ್ ಮಿಯಾಗೆ 14 ವರ್ಷಗಳ ವಿಸ್ತೃತ ಶಿಕ್ಷೆ ವಿಧಿಸಲಾಗಿದ್ದು, ಅದರಲ್ಲಿ ಕನಿಷ್ಠ 10 ವರ್ಷಗಳ ಶಿಕ್ಷೆಯನ್ನು ಜೈಲಿನಲ್ಲಿ ಕಳೆಯಬೇಕಾಗುತ್ತದೆ. ಪ್ರಕರಣ ವಿಚಾರಣೆ ವೇಳೆ ಮೂವರು ಸೋದರರು ಒಬ್ಬರಿಗೊಬ್ಬರು ಬೆಂಬಲಿಸಿಕೊಂಡೇ ತಮ್ಮ ಹೇಳಿಕೆಯನ್ನು ದಾಖಲಿಸುತ್ತಿದ್ದರು.

ಮೂವರು ತುಂಬಾ ಅಪಾಯಕಾರಿ ವ್ಯಕ್ತಿಗಳು

ಮೂವರು ದೋಷಿಗಳು ಸಂತ್ರಸ್ತರಿಗೆ ಗಿಫ್ಟ್, ಮದ್ಯ, ಸಿಗರೇಟ್ ಆಫರ್ ನೀಡಿ ಆಕರ್ಷಿಸುತ್ತಿದ್ದರು. ನಂತರ ತಮ್ಮೊಂದಿಗೆ ನಡೆದ ಘಟನೆಯನ್ನು ಯಾರಿಗಾದ್ರು ಹೇಳಿದ್ರೆ ದೈಹಿಕವಾಗಿ ಹಲ್ಲೆ ಅಥವಾ ಹಿಂಸಿಸೋದಾಗಿ ಬೆದರಿಕೆ ಹಾಕುತ್ತಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಅನ್ಸ್‌ವರ್ತ್‌, ಈ ಮೂವರು ಪುರುಷರು ತುಂಬಾ ಅಪಾಯಕಾರಿಯಗಳಾಗಿದ್ದು, ಸಂತ್ರಸ್ತರ ಬಾಲ್ಯವನ್ನು ಕಿತ್ತುಕೊಂಡಿದ್ದಾರೆ ಎಂದು ಹೇಳಿದ್ದರು.

ಭೋಗದ ವಸ್ತುವಿನಂತೆ ಕ್ರೂರವಾಗಿ ವರ್ತನೆ

ಮುಂದುವರಿದು, ನೀವು ಪ್ರತಿಯೊಬ್ಬರು ಭಕ್ಷಕರಾಗಿದ್ದು, ಶಿಶುಕಾಮಿಗಳಾಗಿ ವರ್ತಿಸಿದ್ದೀರಿ. ಸಂತ್ರಸ್ತರನ್ನು ನಿಮ್ಮ ಜೀತದ ಆಳುಗಳಂತೆ ಅತ್ಯಂತ ಕೀಳಾಗಿ ನಡೆಸಿಕೊಂಡಿದ್ದೀರಿ. ಅವರನ್ನು ಒಂದು ಭೋಗದ ವಸ್ತುವಿನಂತೆ ಕ್ರೂರವಾಗಿ ನಡೆಸಿಕೊಳ್ಳಲಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ. ನ್ಯಾಯಾಧೀಶರು ಪ್ರಕರಣದ ವಿಚಾರಣೆ ವೇಳೆ ಮೂವರನ್ನು 'ಟೀಮ್ ಮಿಯಾ' ಎಂಬ ಪದ ಬಳಕೆ ಮಾಡಿದ್ದರು. ಮೂವರು ಸತ್ಯ ಹೇಳುವ ಬದಲು ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಿರೋದನ್ನು ಕಂಡು ನ್ಯಾಯಾಧೀಶರು ಸಹ ಅಚ್ಚರಿ ವ್ಯಕ್ತಪಡಿಸಿದ್ದರು. ಮೂವರು ದೋಷಿಗಳು ಪ್ರತ್ಯೇಕ ಲೈಂ*ಗಿಕಾಸಕ್ತಿಗಳನ್ನು ಹೊಂದಿದ್ದಾರೆ. ಮೂವರ ನಡುವೆ ಗಾಢವಾದ ರಿಲೇಶನ್‌ಶಿಪ್ ಹೊಂದಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಅಧಿಕಾರಿಗಳಿಗೆ ಬೆದರಿಕೆ ಹಾಕುವ ಪ್ರಯತ್ನ

ನ್ಯಾಯಾಲಯದ ತೀರ್ಪಿನ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಕುಂಬ್ರಿಯಾ ಪೊಲೀಸರ ಡೆಪ್ಯೂಟಿ ಚಿ ಇನ್ಸ್‌ಪೆಕ್ಟರ್ ಜಾನ್ ಗ್ರಹಾಂ-ಕಮ್ಮಿಂಗ್, ಇದು ದೇಶದ ಅತ್ಯಂತ ಹೆಚ್ಚು ಸಮಯ ವಿಚಾರಣೆ ನಡೆದ ಪ್ರಕರಣವಾಗಿದೆ. ತನಿಖೆ ಸಂದರ್ಭದಲ್ಲಿ ಅಧಿಕಾರಿಗಳಗೆ ಬೆದರಿಕೆ ಹಾಕುವ ಪ್ರಯತ್ನಿಸಲಾಗಿತ್ತು. ಈ ಮೂವರಿಂದ ದೌರ್ಜನ್ಯಕ್ಕೊಳಗಾದ ಸಂತ್ರಸ್ತರು ಧೈರ್ಯದಿಂದ ಸಾಕ್ಷ್ಯ ನುಡಿದಿದ್ದಾರೆ. ಸಂತ್ರಸ್ತರನ್ನು ಧೈರ್ಯವನ್ನು ನಾವು ಮೆಚ್ಚಬೇಕು ಎಂದು ಹೇಳಿದ್ದಾರೆ.

ಈ ಮೂವರ ಫೋಟೋ ಜೊತೆ ಪ್ರಕರಣದ ಮಾಹಿತಿ ಹಂಚಿಕೊಂಡಿರುವ Radio Europe ಎಕ್ಸ್ ಖಾತೆಯ ಟ್ವೀಟ್‌ನ್ನು ಉದ್ಯಮಿ ಎಲಾನ್ ಮಸ್ಕ್ ರಿಟ್ವೀಟ್ ಮಾಡಿಕೊಂಡಿದ್ದಾರೆ. ನನಗೆ ಈಗ ಏನು ಹೇಳಬೇಕೆಂದು ತಿಳಿಯುತ್ತಿಲ್ಲ ಎಂದು ಎಲಾನ್ ಮಸ್ಕ್ ಬರೆದುಕೊಂಡಿದ್ದಾರೆ. Radio Europe ಮಾಡಿರುವ ಟ್ವೀಟ್‌ನಲ್ಲಿ ಏನಿದೆ?

  • ಪಾಕಿಸ್ತಾನಿ ಮಿಯಾ ಸಹೋದರರು ಮಸೀದಿಯಲ್ಲಿ 7 ವರ್ಷದ ಇಬ್ಬರು ಬಾಲಕರನ್ನು ಅಪಹರಿಸಿ ಅತ್ಯಾ*ಚಾರ ಮಾಡಿದ್ದಾರೆ.
  • ಮೂವರು ಸೋದರರು 30 ಅಪ್ರಾಪ್ತ ವಯಸ್ಸಿನ ಶಾಲಾ ಹುಡುಗಿಯರನ್ನು ಮಾದಕ ದ್ರವ್ಯ ಸೇವಿಸಿ ವೇಶ್ಯಾವಾಟಿಕೆ ಮಾಡಿದ್ದಾರೆ.
  • ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಇಬ್ಬರು ಹುಡುಗಿಯರ ಕಾಲ್ಬೆರಳುಗಳನ್ನು ಕತ್ತರಿಸಿದ್ದಾರೆ.
  • ಒಟ್ಟು 62 ಅಪರಾಧ ಪ್ರಕರಣಗಳು
  • ಈ ಘಟನೆ ಇಂಗ್ಲೆಂಡ್‌ನಲ್ಲಿ ನಡೆದಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ರಾಜಮೌಳಿ-ಜೇಮ್ಸ್ ಕ್ಯಾಮರೂನ್ ಹೊಸ ಹೆಜ್ಜೆ, ನಟ ಮಹೇಶ್ ಬಾಬುಗೆ ಪ್ಯಾನ್ ವರ್ಲ್ಡ್ ಪಟ್ಟ..!