ಚೀನಾ ಒತ್ತ​ಡ​: ಪಾಕ್‌​ನಲ್ಲಿ ಗಿಲ್ಗಿ​ಟ್‌-ಬಾಲ್ಟಿ​ಸ್ತಾನ ವಿಲೀ​ನ?

By Suvarna News  |  First Published Oct 5, 2020, 3:53 PM IST

ಚೀನಾ ಒತ್ತ​ಡ​: ಪಾಕ್‌​ನಲ್ಲಿ ಗಿಲ್ಗಿ​ಟ್‌-ಬಾಲ್ಟಿ​ಸ್ತಾನ ವಿಲೀ​ನ?| ಸ್ವಾಯತ್ತ ಸ್ಥಾನ ಬದಲಿಸಲು ಇಮ್ರಾನ್‌ ಸಿದ್ಧತೆ


ಇಸ್ಲಾ​ಮಾ​ಬಾ​ದ್(ಅ.05)‌: ಪಾಕಿ​ಸ್ತಾ​ನ​ದ​ಲ್ಲಿ​ದ್ದರೂ ಸ್ವಾಯತ್ತೆ ಹೊಂದಿ​ರುವ ಗಿಲ್ಗಿ​ಟ್‌-ಬಾಲ್ಟಿ​ಸ್ತಾ​ನ​ವನ್ನು ಪಾಕಿ​ಸ್ತಾ​ನ​ದಲ್ಲಿ ಸಂಪೂರ್ಣ ವಿಲೀ​ನ​ಗೊ​ಳಿಸಿ, ದೇಶದ 5ನೇ ಪ್ರಾಂತ್ಯ ಎಂದು ಘೋಷಿ​ಸಲು ಇಮ್ರಾನ್‌ ಖಾನ್‌ ಸರ್ಕಾರ ಸಿದ್ಧತೆ ನಡೆ​ಸಿ​ದೆ. ಇದು ಭಾರ​ತದ ವಿರುದ್ಧ ಕತ್ತಿ ಮಸೆ​ಯು​ತ್ತಿ​ರುವ ಚೀನಾ ರಣ​ತಂತ್ರದ ಒಂದು ಭಾಗ ಎಂದು ಹೇಳ​ಲಾ​ಗಿ​ದೆ.

ಈ ಕುರಿತು ಹೇಳಿಕೆ ನೀಡಿ​ರುವ ಪಾಕಿ​ಸ್ತಾ​ನದ ಕಾಶ್ಮೀರ ಹಾಗೂ ಗಿಲ್ಗಿ​ಟ್‌-ಬಾಲ್ಟಿ​ಸ್ತಾನ ವ್ಯವ​ಹಾ​ರ​ಗಳ ಸಚಿವ ಅಲಿ ಅಮೀನ್‌ ಗಂದಾಪುರ್‌, ‘ಪಾ​ಕಿ​ಸ್ತಾನ ಸರ್ಕಾ​ರವು ಗಿಲ್ಗಿಟ್‌ ಬಲ್ಟಿ​ಸ್ತಾ​ನದ ಸ್ಥಾನ​ಮಾನ ಬದ​ಲಿ​ಸಲು ನಿರ್ಧ​ರಿ​ಸಿದೆ. ಶೀಘ್ರ ಈ ಪ್ರದೇ​ಶಕ್ಕೆ ಪ್ರಧಾನಿ ಇಮ್ರಾನ್‌ ಖಾನ್‌ ಭೇಟಿ ನೀಡಿ ಅಧಿ​ಕೃತ ಘೋಷಣೆ ಮಾಡ​ಲಿ​ದ್ದಾ​ರೆ’ ಎಂದು ಹೇಳಿ​ದ್ದಾ​ರೆ.

Tap to resize

Latest Videos

undefined

ಚೀನಾ ಸಂಚು ಏನು​?:

ಗಿಲ್ಗಿಟ್‌-ಬಾಲ್ಟಿ​ಸ್ತಾ​ನವು ಭಾರ​ತ-ಪಾಕಿ​ಸ್ತಾ​ನ-ಚೀನಾ ಗಡಿಗೆ ಹೊಂದಿ​ಕೊಂಡಿ​ರುವ ಮಹ​ತ್ವದ ವ್ಯೂಹಾ​ತ್ಮಕ ಪ್ರದೇ​ಶ​. ಅತ್ತ ರಷ್ಯಾ ಹಾಗೂ ಮಧ್ಯ​ಪ್ರಾ​ಚ್ಯಕ್ಕೂ ಸಮೀ​ಪವಿದೆ. ಇಲ್ಲಿನ ಜನರು ಪಾಕಿ​ಸ್ತಾ​ನ ಸರ್ಕಾ​ರದ ವಿರುದ್ಧ ತೀವ್ರ ಆಕ್ರೋಶ ಹೊಂದಿದ್ದು, ನೇರ​ವಾ​ಗಿ ಪಾಕ್‌ ಆಡ​ಳಿ​ತಕ್ಕೆ ಒಳ​ಪ​ಡಲು ಇಚ್ಛಿ​ಸು​ವು​ದಿ​ಲ್ಲ. 1949ರಲ್ಲಿ ಕರಾಚಿ ಒಪ್ಪಂದದ ಪ್ರಕಾರ ಈ ಪ್ರದೇ​ಶದ ಆಡ​ಳಿ​ತದ ಉಸ್ತು​ವಾ​ರಿ​ಯನ್ನು ಪಾಕಿ​ಸ್ತಾನ ಹೊಂದಿ​ದೆಯಾ​ದರೂ ಸ್ವಾಯತ್ತ ಸ್ಥಾನ​ಮಾನ ನೀಡಿದೆ. ಆದರೆ, ಈಗ ಈ ಸ್ವಾಯತ್ತೆ ತೆಗೆ​ದು​ಹಾಕಿ, ದೇಶದ 5ನೇ ಪ್ರಾಂತ್ಯ (ರಾ​ಜ್ಯ​) ಎಂದು ಘೋಷಿ​ಸುವ ಇಮ್ರಾನ್‌ ಖಾನ್‌ ಸರ್ಕಾ​ರದ ಚಿಂತ​ನೆಯ ಹಿಂದೆ ಚೀನಾ ಪ್ರಭಾವ ಕೆಲಸ ಮಾಡು​ತ್ತಿದೆ ಎಂದು ಹೇಳ​ಲಾ​ಗಿ​ದೆ. ಈ ಪ್ರದೇ​ಶ​ವು ಅಪಾರ ಗಣಿ ಸಂಪತ್ತು ಹೊಂದಿದೆ. ಇದರ ಮೇಲೆ ಚೀನಾ ಕಣ್ಣು ಇರಿ​ಸಿ​ದೆ. ಅಲ್ಲದೆ ತನ್ನ ಹೆದ್ದಾರಿ ಯೋಜನೆಗೆ ಈ ಭಾಗದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು, ಅದರ ಸದ್ದಡಗಿಸಲು ಯತ್ನಿಸುತ್ತಿದೆ ಎನ್ನಲಾಗಿದೆ.

ಭಾರ​ತ-ಪಾಕ್‌-ಚೀನಾದ ಗಡಿಗೆ ಹೊಂದಿ​ಕೊಂಡಿ​ರುವ ವ್ಯೂಹಾ​ತ್ಮಕ ಸ್ಥಳ​ವಾ​ಗಿ ಗಿಲ್ಗಿ​ಟ್‌-ಬಾಲ್ಟಿ​ಸ್ತಾನ. ಪಾಕಿ​ಸ್ತಾ​ನ ಈ ಪ್ರದೇ​ಶದ ಸ್ವಾಯತ್ತೆ ತೆಗೆದು ಹಾಕಿ, ಸಂಪೂರ್ಣ ಹತೋಟಿ ಸಾಧಿ​ಸಿ​ದರೆ ತನಗೆ ಅನು​ಕೂ​ಲ​ವಾ​ಗ​ಬ​ಹುದು. ಏಷ್ಯಾದ ಪ್ರಮುಖ ಭಾಗ​ದಲ್ಲಿ ಪರೋ​ಕ್ಷ​ವಾಗಿ ತಾನು ಅಧಿ​ಪತ್ಯ ಸ್ಥಾಪಿ​ಸಿ​ದಂತಾ​ಗು​ತ್ತ​ದೆ ಎಂಬುದು ಚೀನಾ ಲೆಕ್ಕಾ​ಚಾ​ರ. ಅಲ್ಲದೆ, ಈ ಪ್ರದೇ​ಶ​ವು ಅಪಾರ ಗಣಿ ಸಂಪತ್ತು ಹೊಂದಿದೆ. ಇದರ ಮೇಲೂ ಚೀನಾ ಕಣ್ಣು ಇರಿ​ಸಿ​ದೆ.

ಚೀನಾ-ಪಾಕಿ​ಸ್ತಾನ ಆರ್ಥಿಕ ಕಾರಿ​ಡಾರ್‌ (ಸಿ​ಪಿ​ಇ​ಸಿ) ಯೋಜ​ನೆ​ಯನ್ನು ಚೀನಾ ಸರ್ಕಾರ, ಗಿಲ್ಗಿಟ್‌-ಬಾಲ್ಟಿ​ಸ್ತಾನ ಮೂಲಕ ಕೈಗೊ​ಳ್ಳು​ತ್ತಿದೆ. ಇದಕ್ಕೆ ಅಲ್ಲಿನ ಜನರ ವ್ಯಾಪಕ ವಿರೋ​ಧ​ವಿದೆ. ಇನ್ನು ಈ ಭಾಗವು ಸಂಪೂರ್ಣವಾಗಿ ಪಾಕಿ​ಸ್ತಾ​ನದ ಅಂಗ​ವಾದರೆÜ ವಿರೋಧ ಅಡ​ಗಿ​ಸ​ಬ​ಹುದು ಎಂಬುದೂ ಚೀನಾ ತಂತ್ರ​ವಾ​ಗಿದೆ. ಹೀಗಾಗಿ ಗಿಲ್ಗಿ​ಟ್‌-ಬಾಲ್ಟಿ​ಸ್ತಾ​ನದ ಸ್ವಾಯತ್ತೆ ತೆಗೆ​ದು​ಹಾಕಲು ಪಾಕ್‌ ಮೇಲೆ ಚೀನಾ ಒತ್ತಡ ಹೇರಿದೆ ಎನ್ನ​ಲಾ​ಗಿ​ದೆ.

click me!