'ಅಬ್‌ ಕೀ ಬಾರ್‌ ಟ್ರಂಪ್‌ ಸರ್ಕಾರ್‌’ ಸೃಷ್ಟಿಕರ್ತಗೇ ಟ್ರಂಪ್‌ ಗೆಲ್ತಾರಾ ಅನ್ನೋದು ಡೌಟ್!

By Kannadaprabha NewsFirst Published Oct 27, 2020, 8:06 AM IST
Highlights

‘ಅಬ್‌ ಕೀ ಬಾರ್‌ ಟ್ರಂಪ್‌ ಸರ್ಕಾರ್‌’ ಸೃಷ್ಟಿಕರ್ತಗೇ ಟ್ರಂಪ್‌ ಜಯ ಡೌಟು!| ಗೆದ್ದೇ ಗೆಲ್ತಾರೆ ಅಂತ ಹೇಳಲಾಗದು: ಶಲಭ್‌

ನ್ಯೂಯಾರ್ಕ್(ಅ.27): ಭಾರತದಲ್ಲಿ ಅಬ್‌ ಕೀ ಬಾರ್‌ ಮೋದಿ ಸರ್ಕಾರ್‌ ಘೋಷಣೆಯ ರೀತಿ ಅಬ್‌ ಕೀ ಬಾರ್‌ ಮೋದಿ ಸರ್ಕಾರ್‌ ಎಂಬ ಘೋಷ ವಾಕ್ಯವನ್ನು ಸೃಷ್ಟಿಸಿದ್ದ ಭಾರತೀಯ ಮೂಲದ ಶಲಭ್‌ ಕುಮಾರ್‌, ಈ ಬಾರಿ ಟ್ರಂಪ್‌ ಗೆಲ್ಲುವ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಕೊರೋನಾ ವೈರಸ್‌ ಇಲ್ಲದೇ ಇದ್ದರೆ ಟ್ರಂಪ್‌ ಐತಿಹಾಸಿಕ ಗೆಲುವು ಸಾಧಿಸುತ್ತಿದ್ದರು.

ಆದರೆ, ಕೊರೋನಾ ದೇಶದ ಆರ್ಥಿಕ ಪರಿಸ್ಥಿತಿಗೆ ಹೊಡೆತ ನೀಡಿದ್ದು, ಚುನಾವಣೆಯಲ್ಲಿ ಟ್ರಂಪ್‌ಗೆ ಕಠಿಣ ಸವಾಲು ಎದುರಾಗಿದೆ. ಈ ಬಾರಿ ಟ್ರಂಪ್‌ ಗೆದ್ದೇ ಗೆಲ್ಲುತ್ತಾರೆ ಎಂದು ಹೇಳಲಾಗದು ಎಂದು ಶಲಭ್‌ ಕುಮಾರ್‌ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಬಾಹ್ಯಾಕಾಶದಿಂದಲೂ ಮತದಾನ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಅಮೆರಿಕದ ಗಗನಯಾತ್ರಿ ಕೇಟ್‌ ರುಬಿನ್ಸ್‌ ಅಧ್ಯಕ್ಷೀಯ ಚುನಾವಣೆಗೆ ಅ.23ರಂದು ಮತ ಚಲಾಯಿಸಿದ್ದಾರೆ. ನ.3ರ ಬಳಿಕವೂ ಅವರು ಬಾಹ್ಯಾಕಾಶ ನಿಲ್ದಾಣದಲ್ಲೇ ಇರುವ ಕಾರಣ ಇ- ಮೇಲ್‌ ಮೂಲಕ ಮತ ಚಲಾಯಿಸಲು ಅವಕಾಶ ನೀಡಲಾಗಿತ್ತು. ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿದ ಇ- ಮೇಲ್‌ ವೋಟಿಂಗ್‌ ಅರ್ಜಿಯನ್ನು ತುಂಬಿ ಮೇಲ್‌ ಅನ್ನು ಕಳುಹಿಸಿಕೊಟ್ಟಿದ್ದಾರೆ. ಬಾಹ್ಯಾಕಾಶ ನಿಲ್ದಾಣದಲ್ಲಿ ರುಬಿನ್ಸ್‌ ಮತದಾನ ಮಾಡಿರುವ ಫೆäಟೋವನ್ನು ನಾಸಾ ಟ್ವೀಟ್‌ ಮಾಡಿದೆ.

 ಕೋಟಿ ಜನರಿಂದ ಅಂಚೆ ಮತ

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ 9 ದಿನ ಮುನ್ನವೇ 6 ಕೋಟಿ ಮಂದಿ ಅಂಚೆ ಮತ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. 2016ಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಪೋಸ್ಟಲ್‌ ಬ್ಯಾಲೆಟ್‌ ಮೂಲಕ ಮತದಾನ ಆಗಿದೆ. ಸಾಮಾನ್ಯವಾಗಿ ವೃದ್ಧರು ಅಂಚೆಮತವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ, ಕೊರೋನಾ ವೈರಸ್‌ ಭೀತಿಯಿಂದಾಗಿ 18ರಿಂದ 29 ವರ್ಷದ ಒಳಗಿನ ಯುವಕರು ಕೂಡ ಪೋಸ್ಟಲ್‌ ಮತವನ್ನು ಚಲಾಯಿಸಿದ್ದಾರೆ. ಈ ಮತಗಳನ್ನು ನ.3ರಂದು ಚುನಾವಣೆ ಮುಗಿದ ಬಳಿಕ ಎಣಿಸಲಾಗುತ್ತದೆ. ಹೀಗಾಗಿ ಈ ಬಾರಿ ಫಲಿತಾಂಶ ವಿಳಂಬ ಆಗುವ ಸಾಧ್ಯತೆ ಇದೆ.

click me!