ಪಾಕಿಸ್ತಾನದ ಇಸ್ಲಾಮಿಯಾ ವಿವಿಯ 5500 ವಿದ್ಯಾರ್ಥಿನಿಯರು, ಶಿಕ್ಷಕಿಯರ ಪೋರ್ನ್‌ ಕ್ಲಿಪ್‌ ವೈರಲ್‌!

Published : Jul 27, 2023, 10:03 PM IST
ಪಾಕಿಸ್ತಾನದ ಇಸ್ಲಾಮಿಯಾ ವಿವಿಯ 5500 ವಿದ್ಯಾರ್ಥಿನಿಯರು, ಶಿಕ್ಷಕಿಯರ ಪೋರ್ನ್‌ ಕ್ಲಿಪ್‌ ವೈರಲ್‌!

ಸಾರಾಂಶ

ಪಾಕಿಸ್ತಾನದ ಇಸ್ಲಾಮಿಯಾ  ವಿಶ್ವವಿದ್ಯಾಲಯದ 5500 ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರ ಪೋರ್ನ್‌ ಕ್ಲಿಪ್‌ಗಳು ಪೋರ್ನ್‌ ಸೈಟ್‌ನಲ್ಲಿ ವೈರಲ್‌ ಆಗಿದೆ. ಇದರ ಬೆನ್ನಲ್ಲಿ ಡ್ರಗ್ಸ್‌ ಸರಬರಾಜು ಮಾಡುತ್ತಿದ್ದ ಪ್ರೊಫೆಸರ್‌ ಹಾಗೂ ಮೂವರು ಭದ್ರತಾ ಅಧಿಕಾರಿಗಳನ್ನು ಬಂಧಿಸಲಾಗಿದೆ.

ಕರಾಚಿ (ಜು.27):  ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹವಾಲ್‌ಪುರದ ಇಸ್ಲಾಮಿಯಾ ವಿಶ್ವವಿದ್ಯಾಲಯದ 5500 ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರ ಪೋರ್ನ್ ಕ್ಲಿಪ್‌ಗಳು ಪೋರ್ನ್‌ ಸೈಟ್‌ಗಳಲ್ಲಿ ವೈರಲ್ ಆಗಿವೆ. ವಿದ್ಯಾರ್ಥಿನಿಯರಿಗೆ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಹಾಯ ಮಾಡುವುದಾಗಿ ಆಮಿಷವೊಡ್ಡಿ ಅವರ ನಗ್ನ ವಿಡಿಯೋಗಳನ್ನು ಮಾಡುತ್ತಿದ್ದ ವಿವಿಯ ಭದ್ರತಾ ಅಧಿಕಾರಿಯನ್ನು ಪಾಕಿಸ್ತಾನದ ಬಹವಾಲ್ಪುರ್ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಈ ವಿಶ್ವವಿದ್ಯಾಲಯದ 113 ವಿದ್ಯಾರ್ಥಿಗಳು ದೊಡ್ಡ ಪ್ರಮಾಣದಲ್ಲಿ ಮಾದಕ ವ್ಯಸನಿಗಳು ಎನ್ನುವುದೂ ಪತ್ತೆಯಾಗಿದೆ. ಇವರಿಗೆ ಸ್ವತಃ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರೇ ಮಾದಕ ವಸ್ತು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದರ ಬೆನ್ನಲ್ಲಿಯೇ ಪೊಲೀಸರು ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ.ಅಬುಜರ್, ಭದ್ರತಾ ಅಧಿಕಾರಿ ಸೈಯದ್ ಎಜಾಜ್ ಶಾ ಮತ್ತು ಅಲ್ತಾಫ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಎಜಾಜ್‌ನ 2 ಫೋನ್‌ಗಳಿಂದ ಪೊಲೀಸರಿಗೆ ಈ ಪೋರ್ನ್ ಕ್ಲಿಪ್‌ಗಳು ಸಿಕ್ಕಿವೆ.

ಜುಲೈ 22 ರಂದು ಪೊಲೀಸರು ವಿಶ್ವವಿದ್ಯಾಲಯದ ಮೇಲೆ ದಾಳಿ ನಡೆಸಿದರು. ಆದರೆ, ವಿಶ್ವವಿದ್ಯಾಲಯದ ಆಡಳುತ ನಮ್ಮ ಸಂಸ್ಥೆಯ ಹೆಸರನ್ನು ಹಾಳು ಮಾಡುವುದು ಹಾಗೂ ವಿದ್ಯಾರ್ಥಿಗಳ ಹೆಸರನ್ನು ಹಾಳು ಮಾಡುವುದು ಇದರ ಗುರಿ ಎಂದು ಹೇಳಿತ್ತು. ಆದರೆ, ಪೊಲೀಸರು ವಿಶ್ವವಿದ್ಯಾಲಯಗಳು ನಮ್ಮ ಗುರಿಯಲ್ಲ, ಮಾದಕ ದ್ರವ್ಯ ಕಳ್ಳಸಾಗಣೆದಾರರನ್ನು ಹಿಡಿಯುವುದು ನಮ್ಮ ಆದ್ಯತೆ ಎಂದಿದ್ದರು.  ನಗ್ನ ವಿಡಿಯೋ ಪ್ರಕರಣದಲ್ಲಿ ಭದ್ರತಾ ಅಧಿಕಾರಿಯೊಂದಿಗೆ ವಿಶ್ವವಿದ್ಯಾಲಯದ ಇತರ ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ಕೂಡ ಭಾಗಿಯಾಗಿದ್ದಾರೆ, ಅವರು ವಿದ್ಯಾರ್ಥಿನಿಯರನ್ನು ಬ್ಲ್ಯಾಕ್‌ಮೇಲ್‌ ಮಾಡಿದ್ದು ಮಾತ್ರವಲ್ಲದೆ, ಅವರ ನಗ್ನ ವಿಡಿಯೋಗಳನ್ನು ಎಜಾಜ್‌ಗೆ ಕಳಿಸುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ.

ಪಾಕಿಸ್ತಾನದ ಪ್ರತಿಷ್ಠಿತ ವಿಶ್ವವಿದ್ಯಾಲಯಳಲ್ಲಿ ಒಂದಾದ ಬಹವಾಲ್ಪುರ್ ಇಸ್ಲಾಮಿಯಾ ವಿಶ್ವವಿದ್ಯಾಯದ ಮುಖ್ಯ ಭದ್ರತಾ ಅಧಿಕಾರಿಯಾಗಿರುವ ಸಯ್ಯದ ಎಜಾಜ್‌ ಹುಸೇನ್‌ ಶಾನನ್ನು (Syed Ejaz Hussain Shah) ಬಂಧಿಸಿದಾಗ ಆತನ ಫೋನ್‌ ಪತ್ತೆಯಾಗಿದೆ. ಈತನ ಫೋನ್‌ನಲ್ಲಿಯೇ ಅಂದಾಜು ಅದೇ ವಿವಿಯ 5500 ವಿದ್ಯಾರ್ಥಿನಿಯರು ಹಾಗೂ ಶಿಕ್ಷಕಿಯರ ನಗ್ನ ವಿಡಿಯೋಗಳು ಪತ್ತೆಯಾಗಿದೆ. ಇನ್ನು ಎಜಾಜ್‌ನಲ್ಲಿ ವಿಶ್ವವಿದ್ಯಾಲಯದ ಮಾಜಿ ಚಾನ್ಸಲರ್‌ ಒಬ್ಬರು ಮುಖ್ಯ ಭದ್ರತಾ ಅಧಿಕಾರಿಯಾಗಿ ನೇಮಿಸಿದ್ದರು ಎನ್ನಲಾಗಿದೆ.


ಸೆಕ್ಸ್‌ ಪಾರ್ಟಿಯಲ್ಲಿ ನೃತ್ಯ: ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿನಿಯರು ಮತ್ತು ಮಹಿಳಾ ಉದ್ಯೋಗಿಗಳನ್ನು ನೃತ್ಯ ಮತ್ತು ಸೆಕ್ಸ್ ಪಾರ್ಟಿಗೆ ಒತ್ತಾಯಿಸಲಾಗುತ್ತಿತ್ತು ಎಂದು ಪೊಲೀಸರು ಹೇಳುತ್ತಾರೆ. ದಕ್ಷಿಣ ಪಂಜಾಬ್‌ನ ಶಿಕ್ಷಣ ಇಲಾಖೆಯೂ ಈ ಬಗ್ಗೆ ತನಿಖೆ ನಡೆಸಲಿದೆ. ಅದರ ತನಿಖಾ ವರದಿಯನ್ನು ಮೂರು ದಿನಗಳಲ್ಲಿ ಸಲ್ಲಿಸಲಾಗುವುದು ಎಂದಿದೆ.

ದಾಳಿಯ ವೇಳೆ ಮಹಿಳೆ ಸೇರಿದಂತೆ ಇಬ್ಬರು ಮಾದಕ ದ್ರವ್ಯ ದಂಧೆಕೋರರನ್ನು ಪೊಲೀಸರು ವಿಶ್ವವಿದ್ಯಾಲಯದಿಂದ ಬಂಧಿಸಿದ್ದಾರೆ. ಆರೋಪಿಗಳಿಂದ 1.5 ಕೆಜಿ ಚರಸ್, 20 ಗ್ರಾಂ ಹರಳು ಮತ್ತು 300 ಗ್ರಾಂ ಚರಸ್ ವಶಪಡಿಸಿಕೊಳ್ಳಲಾಗಿದೆ. ಈ ಆರೋಪಿಗಳು ಶಿಕ್ಷಣ ಸಂಸ್ಥೆಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು.

75 ವರ್ಷದ ಮಾಜಿ ಸೈನಿಕನಿಗೆ ಸೀರಿಯಲ್‌ ನಟಿಯಿಂದ ಹನಿಟ್ರ್ಯಾಪ್‌, 11 ಲಕ್ಷ ವಂಚನೆ!

ಈ ಡ್ರಗ್ ದಂಧೆ ಕುರಿತು ಪಾಕಿಸ್ತಾನದ 'ದಿ ಡಾನ್' ಪತ್ರಿಕೆ ವಿಸ್ತೃತ ವರದಿ ಪ್ರಕಟಿಸಿದೆ. ಜೂನ್‌ನಿಂದ ಪೊಲೀಸರು ತನಿಖೆ ನಡೆಸುತ್ತಿದ್ದರೂ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಖಚಿತವಾದ ಮಾಹಿತಿ ಪಡೆದ ನಂತರ, ಜೂನ್ 28 ರಂದು ವಿಶ್ವವಿದ್ಯಾಲಯದ ಮುಖ್ಯ ಹಣಕಾಸು ಅಧಿಕಾರಿಯನ್ನು ಬಂಧಿಸಲಾಗಿದೆ. ಆತನಿಂದ ಸಾಕಷ್ಟು ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.

ಇದು ಅಂಜು ಲವ್ಸ್ ನಾಸ್ರುಲ್ಲಾ; ಪ್ರೀತಿಗಾಗಿ ಪಾಕಿಸ್ತಾನಕ್ಕೆ ಹಾರಿದ ಭಾರತದ ಯುವತಿಯ ಕಹಾನಿ!

ಹಣಕಾಸು ಅಧಿಕಾರಿ ವ್ಯಾನ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರೊಂದಿಗೆ ವಿಶ್ವವಿದ್ಯಾಲಯದ ಮುಖ್ಯ ಭದ್ರತಾ ಅಧಿಕಾರಿಯೂ ಇದ್ದರು. ಅವರ ಬಳಿ ಡ್ರಗ್ಸ್ ಕೂಡ ಪತ್ತೆಯಾಗಿದೆ. ಇಬ್ಬರ ಫೋನ್‌ಗಳನ್ನು ಪರಿಶೀಲಿಸಿದಾಗ ಪೊಲೀಸರೇ ಬೆಚ್ಚಿಬಿದ್ದರು. ಇವುಗಳಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ಶಿಕ್ಷಕಿಯರ ಅಶ್ಲೀಲ ವೀಡಿಯೊಗಳು ಸೇರಿವೆ. ಈ ಹುಡುಗಿಯರು ಮತ್ತು ಮಹಿಳಾ ಶಿಕ್ಷಕರನ್ನು ವಿವಿಧ ಸ್ಥಳಗಳಲ್ಲಿ ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ ಎಸಗಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. 11 ವಿದ್ಯಾರ್ಥಿಗಳು ಕೂಡ ದಂಧೆಯ ಭಾಗವಾಗಿದ್ದರು ಅವರ ವಿರುದ್ಧ ಕ್ರಿಮಿನಲ್‌ ದಾಖಲೆಗಳೂ ಇವೆ. ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವೀಡಿಯೊಗಳ ಸ್ಕ್ರೀನ್‌ಶಾಟ್‌ಗಳನ್ನು ಸಹ ಹಂಚಿಕೊಳ್ಳಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭೂಕಂಪದ ಬೆನ್ನಲ್ಲೇ ಜಪಾನ್‌ನಲ್ಲಿ ಸುನಾಮಿ ಎಚ್ಚರಿಕೆ, ಭಾರತದ ಕರಾವಳಿ ಪ್ರದೇಶಕ್ಕಿದೆಯಾ ಆತಂಕ?
ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ