
ಇಸ್ಲಾಮಾಬಾದ್ (ಮಾ.07) ಅಮೆರಿಕ, ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಹಲವು ದೇಶಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಭಾರತ ಚಾಣಾಕ್ಷತನದಿಂದ ಸಮಸ್ಯೆಯನ್ನು ಮೈಮೇಲೆ ಎಳೆದಕೊಂಡಿಲ್ಲ. ಹಾಗಂತ ಸಮಸ್ಯೆ ಇಲ್ಲ ಎಂದಲ್ಲ. ಭಾರತಕ್ಕೆ ಅಪಾಯದ ಪ್ರಮಾಣ ಕಡಿಮೆ ಅಷ್ಟೆ. ಇತ್ತ ಪಾಕಿಸ್ತಾನ ಡಬಲ್ ಗೇಮ್ ಆಡಿ ನಡು ನೀರಿನಲ್ಲಿ ಕಂಗಾಲಾಗಿ ಕುಳಿತಿದೆ. ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲ ಖಮೇನಿ ಹತ್ಯೆ ಬೆನ್ನಲ್ಲೇ ಪಾಕಿಸ್ತಾನ ಗರಂ ಆಗಿತ್ತು. ಇತ್ತ ಅಮೆರಿಕ ಜೊತೆ ಕುಚುಕು ಕುಚುಕ ಎಂಬಂತಿರುವ ಪಾಕಿಸ್ತಾನ ಅಮೆರಿಕಗೂ ಬೆಂಬಲ ನೀಡಿ ಕೇವಲ ಇಸ್ರೇಲ್‌ನ್ನು ಗುರಿಯಾಗಿ ಆಕ್ರೋಶ ಹೊರಹಾಕಿತ್ತು. ಅತ್ತಿಂದಿತ್ತ ಡಬಲ್ ಗೇಮ್ ಆಡಿದ ಪಾಕಿಸ್ತಾನಕ್ಕೆ ತೈಲ ಪೂರೈಕೆಯಾಗುತ್ತಿಲ್ಲ. ಇತ್ತ ಸರಕು ಸಾಗಣೆಯೂ ಪೂರಕೆಯಾಗುತ್ತಿಲ್ಲ. ತೈಲ ಸಂಗ್ರಹವೂ ಹೆಚ್ಚಿಲ್ಲ. ಇದರ ಪರಿಣಾಮ ಒಂದು ಲೀಟರ್ ಪೆಟ್ರೋಲ್‌ಗೆ 55 ರೂಪಾಯಿ ಏರಿಕೆಯಾಗಿದೆ.
ಯುದ್ಧ ಹಾಗೂ ಪೂರೈಕೆ ಸ್ಥಗಿತವಾಗಿರುವ ಕಾರಣ ಒಂದು ಲೀಟರ್ ಪೆಟ್ರೋಲ್‌ಗೆ 321 ರೂಪಾಯಿ ಏರಿಕೆಯಾಗಿದೆ. ಇತ್ತ ಹೈಸ್ಪೀಡ್ ಒಂದು ಲೀಟರ್ ಡೀಸೆಲ್ ಬೆಲೆ 336 ರೂಪಾಯಿಗೆ ಏರಿಕೆಯಾಗಿದೆ. ಯುದ್ಧದಿಂದ ಏಷ್ಯಾ ದೇಶಗಳಲ್ಲಿ ಗರಿಷ್ಠ ಬೆಲೆ ಏರಿಕೆ ಬಿಸಿ ತಟ್ಟಿರುವುದು ಪಾಕಿಸ್ತಾನಕ್ಕೆ. ಅಮೆರಿಕವನ್ನು ರಹಸ್ಯವಾಗಿ ಬೆಂಬಲಿಸಿ, ಬಾಹ್ಯವಾಗಿ ಇರಾನ್ ಪರ ನಿಂತಿರುವ ಪಾಕಿಸ್ತಾನಕ್ಕೆ ಇದೀಗ ಯಾವ ದೇಶಗಳು ನೆರವಿಗೆ ಬರುತ್ತಿಲ್ಲ. ಪಾಕಿಸ್ತಾನವನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಪಾಕಿಸ್ತಾನ ಪರಿತಪಿಸುವಂತಾಗಿದೆ.
ಸ್ಟ್ರೈಟ್ ಆಫ್ ಹರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿದೆ. ಇದೇ ಜಲಸಂಧಿ ಮೂಲಕ ಪಾಕಿಸ್ತಾನ, ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುತ್ತಿತ್ತು. ಸುಲಭ ಸಾಗಣೆ ಸೇರಿದಂತೆ ಹಲವು ಕಾರಣಗಳಿಂದ ಪಾಕಿಸ್ತಾನ, ಇರಾನ್ ನೆಚ್ಚಿಕೊಂಡಿದೆ. ಆದರೆ ಹರ್ಮುಜ್ ಬಂದ್ ಆಗರುವ ಕಾರಣ ಪಾಕಿಸ್ತಾನದಲ್ಲಿರುವ ತೈಲ ಸಂಗ್ರಹ ಖಾಲಿಯಾಗಿದೆ. ಇತ್ತ ಇತರ ದೇಶಗಳಿಂದ ಆಮದು ಮಾಡಿಕೊಂಡರೂ ಸುರಕ್ಷಿತವಾಗಿ ಪಾಕಿಸ್ತಾನ ತಲುವವರೆಗೆ ಭದ್ರತೆ ನೀಡುವುದು ಪಾಕಿಸ್ತಾನಕ್ಕೆ ಕಷ್ಟವಾಗುತ್ತಿದೆ. ಇದರ ಪರಿಣಾಮ ಪಾಕಿಸ್ತಾನದಲ್ಲಿ ತೈಲ ಬೆಲೆ ಭಾರಿ ಏರಿಕೆಯಾಗಿದೆ.
ಪಾಕಿಸ್ತಾನ ಬಹುತೇಕ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಪಾಕಿಸ್ತಾನದಲ್ಲಿ ತೈಲ ಉತ್ಪಾದನೆಗಳಿಲ್ಲ. ಇರಾನ್ ಮೇಲೆ ಸಂಪೂರ್ಣವಾಗಿ ಅಲಂಬಿತವಾಗಿದೆ. ಇತ್ತ ಪಾಕಿಸ್ತಾನದ ಆತಂರಿಕ ಸಮಸ್ಯೆಗಳು ತೀವ್ರಗೊಂಡಿದೆ. ಬೆಲೆ ಏರಿಕೆ ಕಳೆದ 4 ರಿಂದ 5 ವರ್ಷಗಳಲ್ಲಿ ಬೆಲೆ ಏರಿಕೆ ಸಮಸ್ಯೆ ಎದುರಿಸುತ್ತಿದೆ. ಹಾಲು, ಗೋಧಿ ಸೇರಿದಂತೆ ಹಲವು ಆಹಾರ ಧಾನ್ಯಗಳ ಬೆಲೆ ಭಾರಿ ಏರಿಕೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ