ಪಾಕ್‌ನಲ್ಲಿ 3ನೇ ಅಲೆ: 7 ನಗ​ರ​ದಲ್ಲಿ ಶಾಲಾ, ಕಾಲೇ​ಜು ಬಂದ್‌!

Published : Mar 16, 2021, 01:28 PM IST
ಪಾಕ್‌ನಲ್ಲಿ 3ನೇ ಅಲೆ: 7 ನಗ​ರ​ದಲ್ಲಿ ಶಾಲಾ, ಕಾಲೇ​ಜು ಬಂದ್‌!

ಸಾರಾಂಶ

ನೆರೆಯ ಪಾಕಿ​ಸ್ತಾ​ನಕ್ಕೆ ಕೊರೋನಾ ವೈರ​ಸ್‌ನ 3ನೇ ಅಲೆ ಅಪ್ಪ​ಳಿ​ಸಿದೆ| 7 ನಗ​ರ​ದಲ್ಲಿ ಶಾಲಾ, ಕಾಲೇ​ಜು ಬಂದ್‌

ಇಸ್ಲಾ​ಮಾ​ಬಾ​ದ್(ಮಾ.16)‌: ನೆರೆಯ ಪಾಕಿ​ಸ್ತಾ​ನಕ್ಕೆ ಕೊರೋನಾ ವೈರ​ಸ್‌ನ 3ನೇ ಅಲೆ ಅಪ್ಪ​ಳಿ​ಸಿದೆ. ಈ ಹಿನ್ನೆ​ಲೆ​ಯಲ್ಲಿ ಅತಿ​ಹೆಚ್ಚು ಕೊರೋನಾ ಪ್ರಕ​ರಣ ದಾಖ​ಲಾ​ಗು​ತ್ತಿ​ರುವ ಲಾಹೋರ್‌ ಸೇರಿ 7 ನಗ​ರ​ಗ​ಳಲ್ಲಿ ಶಾಲಾ-ಕಾಲೇಜು ಸೇರಿ ಇನ್ನಿ​ತರ ಶಿಕ್ಷಣ ಸಂಸ್ಥೆ​ಗ​ಳನ್ನು 2 ವಾರ​ಗಳ ಕಾಲ ಬಂದ್‌ ಮಾಡ​ಲಾ​ಗಿದೆ.

ಪಾಕಿ​ಸ್ತಾ​ನ​ದಲ್ಲಿ ಭಾನುವಾರ ಒಂದೇ ದಿನ 2253 ಮಂದಿಗೆ ಕೊರೋನಾ ದೃಢ​ಪ​ಟ್ಟಿದ್ದು, ಒಟ್ಟು ಸೋಂಕಿ​ತರ ಸಂಖ್ಯೆ 6 ಲಕ್ಷ ದಾಟಿದೆ. ಅಲ್ಲದೆ ಅತಿ​ದೊಡ್ಡ ಪ್ರಾಂತ್ಯವಾದ ಪಾಕಿ​ಸ್ತಾ​ನ​ದಲ್ಲಿ ಕಳೆದ 6 ದಿನ​ಗ​ಳಿಂದ 1000ಕ್ಕೂ ಹೆಚ್ಚು ಮಂದಿಗೆ ವೈರಸ್‌ ವ್ಯಾಪಿ​ಸು​ತ್ತಿದ್ದು, ಕೊರೋನಾ ಬಗ್ಗೆ ಜನರು ಹೆಚ್ಚು ಜಾಗೃ​ತ​ರಾ​ಗಿ​ರ​ಬೇಕು.

ಈ ವೈರಸ್‌ ಅನ್ನು ಯಾರೂ ಸಹ ಲಘು​ವಾಗಿ ಕಾಣ​ಬಾ​ರದು ಎಂದು ಪಂಜಾಬ್‌ ಮುಖ್ಯ​ಮಂತ್ರಿಗಳು ಎಚ್ಚ​ರಿಕೆ ನೀಡಿ​ದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಅಮೆರಿಕ ಇರಾನ್ ಮಾತುಕತೆ ಹೊಟೆಲ್ ಬಿಲ್ ಭರಿಸುವುದು ಯಾರು? ಪಾಕಿಸ್ತಾನ ಕಂಗಾಲು
ಪೋಪ್‌ ವಿರುದ್ಧ ಕಿಡಿಕಾರಿದ ಬೆನ್ನಲ್ಲೇ, ತಾನೇ ಏಸು ಎಂದು ಚಿತ್ರಿಸಿದ ವಿವಾದಾತ್ಮಕ AI ಚಿತ್ರ ಪೋಸ್ಟ್ ಮಾಡಿದ ಟ್ರಂಪ್‌!