12 ಉಗ್ರ ಸಂಘಟನೆಗಳಿಗೆ ಪಾಕಿಸ್ತಾನ ತವರು, ಅಸಲಿ ಮುಖ ಬಯಲು!

By Kannadaprabha NewsFirst Published Sep 29, 2021, 7:31 AM IST
Highlights

* ಪಾಕ್‌ನ ಅಸಲಿ ಮುಖ ಬೆಳಕಿಗೆ

* ಅಮೆರಿಕದ ಸಂಸದೀಯ ಸಮಿತಿ ವರದಿ

* ಪಾಕಿಸ್ತಾನ 12 ಉಗ್ರಸಂಘಟನೆಗೆ ತವರು ಬಣ್ಣ ಬಯಲು

ವಾಷಿಂಗ್ಟನ್‌(ಸೆ.29):ಪಾಕಿಸ್ತಾನವು(pakistan) 12 ಉಗ್ರ ಸಂಘಟನೆಗಳ(Terrprist Organisation) ತವರೂರಾಗಿದೆ ಎಂದು ಅಮೆರಿಕದ ಸಂಸದೀಯ ಸಮಿತಿ ವರದಿಯೊಂದು(Congressional Research Service report) ಹೇಳಿದೆ. ಇದರೊಂದಿಗೆ ತಾನು ಉಗ್ರರನ್ನು ಪೋಷಿಸುವುದಿಲ್ಲ ಎಂದು ಹೇಳುವ ಪಾಕಿಸ್ತಾನದ ಬಣ್ಣವನ್ನು ಈ ವರದಿ ಮತ್ತೊಮ್ಮೆ ಬಟಾಬಯಲು ಮಾಡಿದೆ.

‘ಪಾಕಿಸ್ತಾನದ ಉಗ್ರ ಸಂಘಟನೆಗಳು’ ಎಂಬ ಹೆಸರಿನ ಈ ವರದಿಯನ್ನು ಇತ್ತೀಚೆಗೆ ಅಮೆರಿಕದಲ್ಲಿ(USA) ನಡೆದ ಕ್ವಾಡ್‌(Quad) ಶೃಂಗಸಭೆಯ ಮುನ್ನಾ ದಿನ ಸಲ್ಲಿಸಲಾಗಿದೆ. 12 ಉಗ್ರ ಸಂಘಟನೆಗಳಲ್ಲಿ ಐದು ಉಗ್ರ ಸಂಘಟನೆಗಳು ಭಾರತದ ವಿರುದ್ಧ ಚಟುವಟಿಕೆ ನಡೆಸಲು ಹುಟ್ಟಿಕೊಂಡಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಈ ಸಂಘಟನೆಗಳನ್ನು 2001ರಲ್ಲೇ ಅಮೆರಿಕವು ‘ವಿದೇಶಿ ಉಗ್ರ ಸಂಘಟನೆಗಳು’ ಎಂದು ಹೆಸರಿಸಿತ್ತು.

ವರದಿಯಲ್ಲೇನಿದೆ?:

ಲಷ್ಕರ್‌ ಎ ತೊಯ್ಬಾ 1980ರ ದಶಕದಲ್ಲಿ ಹುಟ್ಟಿಕೊಂಡಿತು. ಈ ಸಂಘಟನೆ 26/11 ಮುಂಬೈ ದಾಳಿಗೆ ಹೊಣೆ. ಜೈಷ್‌ ಎ ಮೊಹಮ್ಮದ್‌ 2000ನೇ ಇಸವಿಯಲ್ಲಿ ಜನ್ಮತಾಳಿತು. ಇದು 2001ರ ಭಾರತ ಸಂಸತ್‌ ದಾಳಿಯ ರೂವಾರಿ. ಹರ್ಕತ್‌ ಉಲ್‌ ಜಿಹಾದಿ ಇಸ್ಲಾಮಿ 1980ರಲ್ಲಿ ಸ್ಥಾಪನೆ ಆಯಿತು. ಇದು ಆಫ್ಘನ್‌ ತಾಲಿಬಾನ್‌ಗೆ ಉಗ್ರರ ಪೂರೈಸುತ್ತದೆ.

ಆಫ್ಘನ್‌, ಪಾಕ್‌, ಬಾಂಗ್ಲಾ(Bangla) ಹಾಗೂ ಭಾರತದಲ್ಲಿ ಕಾರ್ಯಾಚರಣೆ ನಡೆಸುತ್ತದೆ. ಹಿಜ್ಬುಲ್‌ ಮುಜಾಹಿದಿನ್‌ ಸಂಘಟನೆ 1989ರಲ್ಲಿ ಸ್ಥಾಪನೆ ಆಯಿತು. ಜಮ್ಮು-ಕಾಶ್ಮೀರದಲ್ಲಿ ಕಾರಾರ‍ಯಚರಣೆ ನಡೆಸುತ್ತದೆ. ಇನ್ನುಳಿದಂತೆ ಅಲ್‌ ಖೈದಾ, ಆಫ್ಘನ್‌ ತಾಲಿಬಾನ್‌, ಹಕಾನಿ ನೆಟ್‌ವರ್ಕ್, ತೆಹ್ರೀಕ್‌ ಎ ತಾಲಿಬಾನ್‌ ಪಾಕಿಸ್ತಾನ್‌, ಬಲೂಚಿಸ್ತಾನ ಲಿಬರೇಶನ್‌ ಆರ್ಮಿ, ಜುಂಡಾಲ್ಲಾ, ಸಿಪಾಹ್‌ ಎ ಸಹಾಬಾ ಪಾಕಿಸ್ತಾನ್‌ ಹಾಗೂ ಲಷ್ಕರ್‌ ಎ ಝಂಗ್ವಿ ಸಂಘಟನೆಗಳು ಪಾಕ್‌ನಲ್ಲಿ ಕಾರಾರ‍ಯಚರಣೆ ನಡೆಸುತ್ತಿವೆ ಎಂದು ವರದಿ ಹೇಳಿದೆ.

ವರದಿಯಲ್ಲಿ ಏನಿದೆ?

- ಪಾಕ್‌ನಲ್ಲಿ 12 ಉಗ್ರ ಸಂಘಟನೆಗಳ ಪೈಕಿ 5 ಭಾರತದ ಮೇಲೆ ದಾಳಿಗೇ ಹುಟ್ಟಿಕೊಂಡಿವೆ

- 26/11 ಮುಂಬೈ ದಾಳಿ, 2001ರ ಸಂಸತ್‌ ದಾಳಿ ನಡೆಸಿದ್ದು ಇವೇ ಸಂಘಟನೆಗಳು

- ಪಾಕ್‌, ಆಫ್ಘನ್‌, ಬಾಂಗ್ಲಾದೇಶ, ಭಾರತದಲ್ಲಿ 12 ಉಗ್ರ ಸಂಘಟನೆಗಳಿಂದ ಕಾರಾರ‍ಯಚರಣೆ

click me!