ರಷ್ಯಾ ನೂತನ ಪ್ರಧಾನಿಯಾಗಿ ಮಿಖಾಯಿಲ್ ಮಿಶುಸ್ಟಿನ್ ಆಯ್ಕೆ!

By Suvarna NewsFirst Published Jan 17, 2020, 10:04 PM IST
Highlights

ರಷ್ಯಾ ನೂತನ ಪ್ರಧಾನಿಯಾಗಿ ಮಿಖಾಯಿಲ್ ಮಿಶುಸ್ಟಿನ್ ಆಯ್ಕೆ| ಮಿಶುಸ್ಟಿನ್ ನೇಮಕ ಖಾತ್ರಿಗೊಳಿಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್|  ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ರಾಜೀನಾಮೆ ಹಿನ್ನೆಲೆ| ಸಾಂವಿಧಾನಿಕ ಸುಧಾರಣಾ ಕ್ರಮಗಳನ್ನು ಪ್ರಕಟಿಸಿದ್ದ ಪುಟಿನ್| 

ಮಾಸ್ಕೋ(ಜ.17):  ಫೆಡರಲ್ ತೆರಿಗೆ ಸೇವೆಯ ಮಾಜಿ ಮುಖ್ಯಸ್ಥ ಮಿಖಾಯಿಲ್ ಮಿಶುಸ್ಟಿನ್ ಅವರನ್ನು ರಷ್ಯಾದ ನೂತನ ಪ್ರಧಾನಿಯಾಗಿ ನೇಮಕ ಮಾಡಲಾಗಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್,  ಮಿಶುಸ್ಟಿನ್ ಅವರನ್ನು ನೇಮಕ ಮಾಡುವ ಆದೇಶಕ್ಕೆ ಸಹಿ ಹಾಕಿದ್ದಾರೆ. 

Mikhail Mishustin appointed Prime Minister of the Russian Federation pic.twitter.com/UxeY1lJRyz

— Government of Russia (@GovernmentRF)

ಪುಟಿನ್ ಅವರು ಮಿಶುಸ್ಟಿನ್ ಅವರನ್ನು ಪ್ರಧಾನಿ ಹುದ್ದೆಗೆ ನಾಮನಿರ್ದೇಶನ ಮಾಡಲು ಸ್ಟೇಟ್ ಡುಮಾ ಅನುಮೋದನೆ ನೀಡಿತ್ತು.

ಇದಕ್ಕೂ ಮೊದಲು ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್  ಸೇರಿದಂತೆ ಸಚಿವ ಸಂಪುಟದ ಎಲ್ಲ ಸದಸ್ಯರೂ ಸಾಂಊಹಿಕ ರಾಜೀನಾಮೆ ಸಲ್ಲಿಸಿದ್ದರು.

ಪ್ರಧಾನಿ ಮತ್ತು ಸಂಪುಟದ ಸದಸ್ಯರನ್ನು ಆಯ್ಕೆ ಮಾಡುವ ಅಧಿಕಾರವನ್ನು ಸಂಸತ್ತಿಗೆ ನೀಡುವುದೂ ಸೇರಿದಂತೆ ಕೆಲವು ಮಹತ್ವದ ಸಾಂವಿಧಾನಿಕ ಸುಧಾರಣಾ ಕ್ರಮಗಳನ್ನು ಪುಟಿನ್ ಘೋಷಿಸಿದ್ದರು.

click me!