ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್‌ಗೆ ಗಲ್ಲು ಶಿಕ್ಷೆ| ಪೇಶಾವರ ಹೈಕೋರ್ಟ್ ನ ವಿಶೇಷ ಪೀಠದಿಂದ ಆದೇಶ| ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದಕ್ಕೆ ಪರ್ವೇಜ್ ಮುಷರಫ್ ಗೆ ಗಲ್ಲು
ಇಸ್ಲಮಾಬಾದ್[ಡಿ.17]: ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್‌ಗೆ ಪೇಶಾವರ ಹೈಕೋರ್ಟ್ ನ ವಿಶೇಷ ಪೀಠ ಗಲ್ಲು ಶಿಕ್ಷೆ ವಿಧಿಸಿದೆ
2007ರಲ್ಲಿ ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ದೇಶದಲ್ಲಿ[ಪಾಕಿಸ್ತಾನ] ತುರ್ತು ಪರಿಸ್ಥಿತಿ ಹೇರಿದ್ದು, 2013ರಲ್ಲಿ ಅವರ ವಿರುದ್ಧ ಪರ್ವೇಜ್ ಮುಷರಫ್ ವಿರುದ್ಧ ದಾಖಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ಪೇಶಾವರ ಹೈಕೋರ್ಟ್ ನ ವಿಶೇಷ ಪೀಠ ಪರ್ವೇಜ್‌ಗೆ ಗಲ್ಲು ಶಿಕ್ಷೆ ವಿಧಿಸಿದೆ.
ನವಾಜ್ ಶರೀಫ್ ಪ್ರಧಾನಿಯಾಗಿದ್ದ ವೇಳೆ ಪರ್ವೇಜ್ ಮುಷರಫ್ ವಿರುದ್ಧ ಕೇಸ್ ದಾಖಲಾಗಿತ್ತು ಎಂಬುವುದು ಉಲ್ಲೇಖನೀಯ. ಸದ್ಯ ಪಾಕ್ ಮಾಜಿ ಅಧ್ಯಕ್ಷ ಹಾಗೂ ಸೇನಾಧಿಕಾರಿ ಪರ್ವೇಜ್ ದುಬೈನಲ್ಲಿ ವಾಸ್ತವ್ಯ ಹೂಡಿದ್ದಾರೆ
ಡಿಸೆಂಬರ್ 17ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ